
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಡೆದ 7 ಕೋಟಿ 11 ಲಕ್ಷ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಒಟ್ಟು ಐದೂವರೆ ಕೋಟಿ ಹಣ ರಿಕವರಿ ಮಾಡಿದ್ದಾರೆ. ಉಳಿದ ಹಣದ ಬಗ್ಗೆ ಪೊಲೀಸ ಶೋಧ ನಡೆಸ್ತಿದ್ದು, ಚೆನ್ನೈ ಕಡೆ ಒಂದೂವರೆ ಕೋಟಿ ತೆಗೆದುಕೊಂಡು ಹೋಗಿರುವ ಶಂಕೆ ವ್ಯಕ್ತವಾಗಿದೆ. ಇದರ ಜೊತೆಗೆ ಈವರೆಗೆ ಒಟ್ಟು 8 ಮಂದಿಯನ್ನು ಬಂಧಿಸಿರುವ ಬಗ್ಗೆ ಮಾಹಿತಿ ಇದೆ. ಸಿಎಂಎಸ್ ನ ನಾಲ್ಕು ಜನ ಸಿಬ್ಬಂದಿ, ಕಾನ್ಸ್‌ಟೇಬಲ್ ಅಣ್ಣಪ್ಪ, ಸಿಎಂಎಸ್ ಮಾಜಿ ಸಿಬ್ಬಂದಿ ಝೆವಿಯರ್, ದರೋಡೆಗೆ ಬಳಸಿದ್ದ ಕಾರು ನೀಡಿದ್ದ ಕಲ್ಯಾಣ ನಗರದ ಇಬ್ಬರು ಸೇರಿ ಒಟ್ಟು 8 ಜನರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ತನಿಖೆ ಕರ್ನಾಟಕ ಮಾತ್ರವಲ್ಲದೆ ಚೆನ್ನೈನಲ್ಲೂ ಪೊಲೀಸರ ಒಂದು ತಂಡ ಬೀಡು ಬಿಟ್ಟಿದೆ. ಆಂಧ್ರಪ್ರದೇಶ ಹಾಗೂ ತಮಿಳುನಾಡು ಎರಡೂ ರಾಜ್ಯಗಳಲ್ಲಿ ತನಿಖಾ ತಂಡಗಳು ಬೀಡು ಬಿಟ್ಟಿವೆ. ಚೆನ್ನೈನಿಂದಲೂ ಓರ್ವನನ್ನ ವಶಕ್ಕೆ ಪಡೆದಿರುವ ಮಾಹಿತಿ ಇದೆ. ರಾಬರಿ ಕೇಸ್ ನಲ್ಲಿ ಒಂದು ಹಂತಕ್ಕೆ ಬಂದಿರುವ ಪೊಲೀಸರು ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ. ಕಿಂಗ್ ಪಿನ್ ಎನಿಸಿಕೊಂಡಿರುವ ಅಣ್ಣಪ್ಪ ನಾಯಕ ಹಾಗೂ ಝೇವಿಯರ್ ಇಬ್ಬರೂ ಸದ್ಯ ಪೊಲೀಸರ ವಶದಲ್ಲಿದ್ದು, ದಕ್ಷಿಣ ವಿಭಾಗದ ಪೊಲೀಸ್ ಠಾಣೆಗಳಲ್ಲಿ ಇಟ್ಟು ವಿಚಾರಣೆ ನಡೆಸಲಾಗುತ್ತಿದೆ.
ಇನ್ನು ಬೆಂಗಳೂರಿನಲ್ಲಿ ಏಳು ಕೋಟಿ ದರೋಡೆ ಪ್ರಕರಣ ಸಂಬಂಧ ಚಿತ್ತೂರು ಬಳಿ ಇನೋವಾ ಕಾರು ಪತ್ತೆ ಹಿನ್ನೆಲೆ ಬೆರಳಚ್ಚು ತಜ್ಞರ ಮೂಲಕ ಇನೋವಾ ಕಾರು ಪರಿಶೀಲನೆ ಮಾಡಲಾಗುತ್ತಿದೆ. ಕಾರಿನಲ್ಲಿ ಫಿಂಗರ್ ಪ್ರಿಂಟ್ಸ್ ಪತ್ತೆ ಹಚ್ಚಲು ಮುಂದಾಗಿದ್ದು, ಎಷ್ಟು ಜನರ ಫಿಂಗರ್ ಪ್ರಿಂಟ್ ಸಿಗುತ್ತೆ, ಕಾರಿನಲ್ಲಿ ಎಷ್ಟು ಜನರು ಟ್ರಾವೆಲ್ ಮಾಡಿರಬಹುದು ಎಂಬ ಮಾಹಿತಿ ಲಭ್ಯವಾಗಲಿದೆ. ಮತ್ತು ಇದೇ ಕಾರಿನಲ್ಲಿ ದರೋಡೆ ಗ್ಯಾಂಗ್ ಟ್ರಾವೆಲ್ ಮಾಡಿತ್ತಾ? ಅಥವಾ ಪೊಲೀಸರನ್ನ ಡೈವರ್ಟ್ ಮಾಡಲು ಈ ಕಾರು ಬಳಕೆ ಮಾಡಿದ್ರಾ ಅಂತಲೂ ತನಿಖೆ ನಡೆಸಲಾಗುತ್ತಿದೆ.
ಇನ್ನು ನಕಲಿ ನಂಬರ್ ಪ್ಲೇಟ್ ಬಳಸಿ ದಾರಿ ತಪ್ಪಿಸುವ ಪ್ರಯತ್ನವು ನಡೆದಿರುವ ಶಂಕೆ ಇದೆ. ದರೋಡೆ ದಿನ ಕಾಣಿಸಿದ ಕಾರಿನ ಹಿಂದೆ ಸ್ಟಿಕ್ಕರ್ ಇತ್ತು. ಗೌರ್ನಮೆಂಟ್ ಆಫ್ ಇಂಡಿಯಾ ಅಂತಾ ಸ್ಟಿಕ್ಕರ್ ಕಂಡಿತ್ತು. ಮತ್ತು ಕರ್ನಾಟಕ ನೋಂದಣಿಯ ನಂಬರ್ ಇತ್ತು. ಸದ್ಯ ಈಗ ಪತ್ತೆಯಾದ ಕಾರಿನಲ್ಲಿ ಯುಪಿ ನೋಂದಣಿಯ ನಂಬರ್ ಇದೆ. ಹೀಗಾಗಿ ನಕಲಿ ನಂಬರ್ ಬಳಸಿರೋದು ಮೇಲ್ನೋಟಕ್ಕೆ ಪತ್ತೆಯಾಗಿದೆ. ಜೊತೆಗೆ ಕಾರಿನ ಹಿಂಬದಿಯ ಸ್ಟಿಕ್ಕರ್ ಕಿತ್ತು ಎಸೆದಿರುವ ಕುರುಹುಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಅದ್ರಿಂದ ಚಿತ್ತೂರಿನ ಗುಡಿಪಾಲ ಬಳಿಯಿರುವ ಇನೋವಾ ಕಾರನ್ನು ಎಫ್ಎಸ್ಎಲ್ ಮತ್ತು ಬೆರಳಚ್ಚು ತಜ್ಞರಿಂದ ಪರಿಶೀಲನೆ ಮಾಡಿಸಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ