Bengaluru: ರಾಜಧಾನಿಯ ಮೂಲಸೌಕರ್ಯ ನಿರ್ವಹಣೆಗೆ 1 ದಿನಕ್ಕೆ ₹100 ಕೋಟಿ, ವರ್ಷಕ್ಕೆ 38,455 ಕೋಟಿ

Published : Apr 29, 2026, 06:31 AM IST
Bengaluru real estate

ಸಾರಾಂಶ

ಬೆಂಗಳೂರಿನ ಮೂಲಸೌಕರ್ಯ ನಿರ್ವಹಣೆಗೆ ವಾರ್ಷಿಕವಾಗಿ 38,455 ಕೋಟಿ ರೂ.ಗೂ ಹೆಚ್ಚು ಖರ್ಚಾಗುತ್ತಿದೆ ಎಂದು ಜನಾಗ್ರಹ ಸಂಸ್ಥೆ ವರದಿ ಮಾಡಿದೆ. ಈ ಅಪಾರ ಪ್ರಮಾಣದ ಸಾರ್ವಜನಿಕ ಹಣದ ಖರ್ಚಿನ ಬಗ್ಗೆ ಬಿಬಿಎಂಪಿ, ಬೆಸ್ಕಾಂ ಸೇರಿದಂತೆ ಸರ್ಕಾರಿ ಸಂಸ್ಥೆಗಳು ಜನರಿಗೆ ಯಾವುದೇ ಸೂಕ್ತ ಮಾಹಿತಿ ಅಥವಾ ಲೆಕ್ಕವನ್ನು ನೀಡುತ್ತಿಲ್ಲ ಎಂದು ಆರೋಪಿಸಿದೆ.

ಬೆಂಗಳೂರು: ಬೆಂಗಳೂರಿನಲ್ಲಿ ರಸ್ತೆ, ವಿದ್ಯುತ್ ಸೇರಿದಂತೆ ನಗರದ ಮೂಲಸೌಕರ್ಯ ನಿರ್ವಹಣೆಗೆ ದಿನಕ್ಕೆ ಸುಮಾರು 100 ಕೋಟಿ ರು.ನಂತೆ ವರ್ಷಕ್ಕೆ 38,455 ಕೋಟಿ ರು.ಗೂ ಹೆಚ್ಚು ಹಣ ಖರ್ಚಾಗುತ್ತಿದ್ದು, ಅದರ ಬಗ್ಗೆ ಜನರಿಗೆ ಸೂಕ್ತ ಮಾಹಿತಿ ಒದಗಿಸುತ್ತಿಲ್ಲ ಎಂದು ಸರ್ಕಾರೇತರ ಸಂಸ್ಥೆ ಜನಾಗ್ರಹ ಆರೋಪಿಸಿದೆ.

ಅತಿಯಾದ ಟ್ರಾಫಿಕ್ ಜಾಮ್, ಪ್ರವಾಹ ಪರಿಸ್ಥಿತಿ, ನೀರಿನ ಸಮಸ್ಯೆ, ಗುಂಡಿಬಿದ್ದ ರಸ್ತೆಗಳು, ಕಸದ ಸಮಸ್ಯೆ, ಅಸಮರ್ಪಕ ಸಮೂಹ ಸಾರಿಗೆ ವ್ಯವಸ್ಥೆ ಸೇರಿದಂತೆ ಅನೇಕ ಸಮಸ್ಯೆಗಳಿಂದ ನಗರ ಬಳಲುತ್ತಿದೆ. ಇದಕ್ಕೆ ನಿತ್ಯ ನೂರಾರು ಕೋಟಿ ರು. ವಿನಿಯೋಗಿಸಲಾಗುತ್ತಿದೆ. ಆದರೆ, ಯಾವುದಕ್ಕೆ ಎಷ್ಟು ಖರ್ಚು ಮಾಡಲಾಗುತ್ತಿದೆ ಎಂಬ ಕುರಿತು ತೆರಿಗೆದಾರರಿಗೆ, ನಗರದ ಪ್ರಜೆಗಳಿಗೆ ಯಾವುದೇ ಲೆಕ್ಕವನ್ನು ನೀಡುತ್ತಿಲ್ಲ.

2021-22ನೇ ಸಾಲಿನಲ್ಲಿ ಪಾಲಿಕೆ, ಜಲಮಂಡಳಿ, ಬೆಸ್ಕಾಂ, ಬಿಎಂಟಿಸಿ ಸೇರಿದಂತೆ 13 ಇಲಾಖೆಗಳಿಂದ ಸುಮಾರು 70ಕ್ಕೂ ಹೆಚ್ಚು ದಾಖಲೆಗಳನ್ನು ಪರಿಶೀಲನೆ ನಡೆಸಿ ಲೆಕ್ಕ ಹಾಕಲಾಗಿದೆ ಎಂದು ಜನಾಗ್ರಹ ತಿಳಿಸಿದೆ.

ಬಿಬಿಎಂಪಿಯಿಂದ ಶೇ.20ರಷ್ಟು ಖರ್ಚು

ಒಟ್ಟಾರೆ 38,455 ಕೋಟಿ ರು. ಖರ್ಚಿನಲ್ಲಿ ಜನಪ್ರತಿನಿಧಿಗಳು ಇಲ್ಲದ ಬಿಬಿಎಂಪಿಯೇ ಶೇ.20ರಷ್ಟು ಹಣವನ್ನು ಖರ್ಚು ಮಾಡಿವೆ. ಉಳಿದ ಶೇ.80ರಷ್ಟು ಹಣವೂ ಜನಪ್ರತಿನಿಧಿಗಳು ಎಂದಿಗೂ ಇರದ ಸರ್ಕಾರದ ಬೇರೆ ಬೇರೆ ಇಲಾಖೆಗಳು ಖರ್ಚು ಮಾಡಿವೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಜನಾಗ್ರಹ ಸಂಸ್ಥೆ ಹೇಳಿದೆ.

ಎಲ್ಲಾ ಸಂಸ್ಥೆಗಳು ಲೆಕ್ಕಪತ್ರ ನೀಡಲಿ

ಹಾಲಿ ಪಾಲಿಕೆಗಳು ಮಾತ್ರ ಬಜೆಟ್ ರೀತಿಯಲ್ಲಿ ಲೆಕ್ಕ ನೀಡುತ್ತಿವೆ. ಅದೇ ರೀತಿ ಸರ್ಕಾರದ ಎಲ್ಲಾ ಸಂಸ್ಥೆಗಳು ಪ್ರತಿ ವರ್ಷ ಆರ್ಥಿಕ ಮಾಹಿತಿಯನ್ನು ಬಹಿರಂಗಪಡಿಸಬೇಕಾದ ಅಗತ್ಯವಿದೆ. ಕರ್ನಾಟಕ ಸ್ಥಳೀಯ ನಿಧಿ ಪ್ರಾಧಿಕಾರಗಳ ಆರ್ಥಿಕ ಹೊಣೆಗಾರಿಕೆ ಅಧಿನಿಯಮ 2003 ಅನ್ನು ಬಲಪಡಿಸುವ ಮೂಲಕ ಎಲ್ಲಾ ಸಂಸ್ಥೆಗಳು ಲೆಕ್ಕ ಪತ್ರವನ್ನು ಬಹಿರಂಗಪಡಿಸುವುದನ್ನು ಕಡ್ಡಾಯಗೊಳಿಸಬೇಕು. ಹಣಕಾಸು ವರ್ಷ ಪ್ರಾರಂಭವಾಗುವ ಮೊದಲು ತನ್ನ ವಾರ್ಷಿಕ ಲೆಕ್ಕಪತ್ರ ನೀಡಬೇಕು. ನಿಯಮಿತವಾಗಿ ತಾತ್ಕಾಲಿಕ ಲೆಕ್ಕಪತ್ರಗಳು, ಲೆಕ್ಕಪರಿಶೋಧನೆ ಹಣಕಾಸು ಸ್ಟೇಟ್‌ಮೆಂಟ್ ಹಾಗೂ ಪ್ರತಿ 3 ತಿಂಗಳಿಗೊಮ್ಮೆ ಸೇವಾ ಕಾರ್ಯಕ್ಷಮತೆಯ ವರದಿಯನ್ನು ನೀಡಬೇಕು ಎಂದು ಜನಾಗ್ರಹ ಒತ್ತಾಯಿಸಿದೆ.

ನಗರ ಸಂಸ್ಥೆಗಳಿಗೆ ಜನರ ಆಗ್ರಹ ಏನು? 

*ಅನುಷ್ಠಾನಗೊಳಿಸುತ್ತಿರುವ ಯೋಜನೆಯ ಹಂತಗಳು, ಟೆಂಡರ್ ವಿವರಗಳು, ಅನುಷ್ಠಾನದ ಸ್ಥಿತಿ ಮತ್ತು ಹೆಚ್ಚುವರಿ ವೆಚ್ಚಗಳ ಬಗ್ಗೆ ಮಾಹಿತಿ ನೀಡಬೇಕು. ಇದರಿಂದ ಸಾರ್ವಜನಿಕರ ಹಣ ಎಲ್ಲಿಗೆ ಹೋಗುತ್ತಿದೆ ಎಂದು ನಾಗರಿಕರು ತಿಳಿಯಬಹುದು

*ವಲಯವಾರು ಮತ್ತು ವಾರ್ಡ್‌ವಾರು ಖರ್ಚು ಮಾಡಿದ ಹಣದ ದತ್ತಾಂಶವನ್ನು ಆಯಾ ವಲಯಗಳ (ನೀರು, ಸಾರಿಗೆ, ರಸ್ತೆಗಳು, ತ್ಯಾಜ್ಯ) ಆಧಾರದ ಮೇಲೆ ಮತ್ತು ವಾರ್ಡ್‌ವಾರು ಲಭ್ಯವಾಗುವಂತೆ ಮಾಡಬೇಕು. ಇದರಿಂದ ನಿವಾಸಿಗಳಿಗೆ ತಮ್ಮ ನೆರೆಹೊರೆಯಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯಬಹುದು.

*ಸಾರ್ವಜನಿಕ ಕೆಲಸಗಳಿಗೆ ಖರ್ಚು ಮಾಡಿದ ಹಣಕ್ಕೆ ತಕ್ಕಂತೆ ಯೋಜನೆಗಳು, ಕೆಲಸಗಳು ಜಾರಿಯಾಗಿವೆಯೇ? ಎಂಬುದರ ಲೆಕ್ಕ ಇಡಬೇಕು. ರಸ್ತೆಯ ಗುಣಮಟ್ಟ, ಪ್ರಯಾಣದ ಸಮಯ ಮತ್ತು ನೀರು ಸರಬರಾಜು, ಕಸ ಸಂಗ್ರಹಣೆಯಲ್ಲಿ ದಕ್ಷತೆಯ ವಿವರಗಳನ್ನು ಜನರಿಗೆ ನೀಡಬೇಕು

*ಎಲ್ಲಾ ಬಜೆಟ್‌ಗಳು, ಟೆಂಡರ್‌ಗಳು ಮತ್ತು ಯೋಜನೆಯ ದತ್ತಾಂಶಗಳನ್ನು ಒಂದೇ ವೆಬ್‌ಸೈಟ್‌ನಲ್ಲಿ ಕ್ರೋಢೀಕರಿಸಿ ಒದಗಿಸಬೇಕು. ಜನಪ್ರತಿನಿಧಿಗಳ ಸಭೆಗಳಲ್ಲಿ ಚರ್ಚೆಯಾಗಬೇಕು

ಯಾವ ಸಂಸ್ಥೆಯಿಂದ ಎಷ್ಟು ಖರ್ಚ ಆಗುತ್ತಿದೆ?

ಸಾರ್ವಜನಿಕ ಸಂಸ್ಥೆಪಾಲು
ಬೆಸ್ಕಾಂಶೇ.47.30
ಬಿಬಿಎಂಪಿಶೇ.19.60
ಬಿಎಂಆರ್‌ಸಿಎಲ್ಶೇ.13.40
ಜಲಮಂಡಳಿಶೇ.8.80
ಬಿಎಂಟಿಸಿಶೇ.6.30
ಬೆಂಗಳೂರು ಪೊಲೀಸ್ಶೇ.2.40
ಇತರೆಶೇ.2.30

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಿನಲ್ಲಿ ಗಾಂಜಾ ಸಿಗದ್ದಕ್ಕೆ ಸಿಟ್ಟಿಗೆದ್ದು 12 ಶೆಡ್‌ಗೆ ಬೆಂಕಿ ಹಚ್ಚಿದ ಪುಂಡರು!
ಮೇ 15ಕ್ಕೆ ಬರ್ತಾರಾ ಹೊಸ ಸಿಎಂ? ದೆಹಲಿಗೆ ಶಾಸಕರ ದೌಡು, ಕಾಂಗ್ರೆಸ್‌ನಲ್ಲಿ ಹೊಸ ಲೆಕ್ಕಾಚಾರ