Rameshwaram Cafe Bomb Blast ಪ್ರಕರಣ ಸಿಸಿಬಿಗೆ ವರ್ಗ; ಪೊಲೀಸ್ ಆಯುಕ್ತ ದಯಾನಂದ್ ಮಾಹಿತಿ

By Sathish Kumar KH  |  First Published Mar 2, 2024, 3:33 PM IST

ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ರಾಜ್ಯ ಪೊಲೀಸ್‌ ಇಲಾಖೆಯಿಂದ ಕೇಂದ್ರ ಅಪರಾಧ ದಳಕ್ಕೆ (CCB) ವರ್ಗಾವಣೆ ಮಾಡಲಾಗಿದೆ.


ಬೆಂಗಳೂರು (ಮಾ.2) ಬೆಂಗಳೂರಿನ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ರಾಜ್ಯ ಪೊಲೀಸ್‌ ಇಲಾಖೆಯಿಂದ ಕೇಂದ್ರ ಅಪರಾಧ ದಳಕ್ಕೆ (CCB) ವರ್ಗಾವಣೆ ಮಾಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, 'ಪ್ರಕರಣದ ತನಿಖೆಯನ್ನು ಕೇಂದ್ರ ಅಪರಾಧ ದಳಕ್ಕೆ (ಸಿಸಿಬಿ) ವಹಿಸಲಾಗಿದೆ. ಘಟನೆಯಲ್ಲಿನ ಗಾಯಾಳುಗಳು ಗುಣಮುಖರಾಗುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾರನ್ನೂ ಬಂಧಿಸಿರುವುದುದಿಲ್ಲ' ಎಂದು ತಿಳಿಸಿದ್ದಾರೆ.

ಪ್ರಕರಣದ ತನಿಖೆಯನ್ನು ಕೇಂದ್ರ ಅಪರಾಧ ದಳಕ್ಕೆ (ಸಿಸಿಬಿ) ವಹಿಸಲಾಗಿದೆ. ಘಟನೆಯಲ್ಲಿನ ಗಾಯಾಳುಗಳು ಗುಣಮುಖರಾಗುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾರನ್ನೂ ಬಂಧಿಸಿರುವುದುದಿಲ್ಲ. https://t.co/sle7T39aSg

— CP Bengaluru ಪೊಲೀಸ್ ಆಯುಕ್ತ ಬೆಂಗಳೂರು (@CPBlr)

Latest Videos

undefined

ಸಿಸಿಟಿವಿಯಲ್ಲಿ ದಾಖಲಾಗದಂತೆ ತೆರಳಿರುವ ಬಾಂಬರ್‌: ರಾಮೇಶ್ವರ ಕೆಫೆಗೆ ಬಾಂಬ್‌ ಇಟ್ಟು ಹೋದ ವ್ಯಕ್ತಿ ಕೆಫೆಯ ಸಿಸಿಟಿವಿ ಹೊರತು ಪಡಿಸಿ ಬೇರೆ ಎಲ್ಲಿಯೂ ಸಿಕ್ಕಿ ಬಿದ್ದಿಲ್ಲ. ರಸ್ತೆ ಬದಿಯ ಫುಟ್ ಪಾತ್ ಮೇಲೆ ನಡೆದಿದ್ದರೆ ಸಿಸಿಟಿವಿಯಲ್ಲಿ ಸೆರೆಯಾಗ್ತಿದ್ದ. ಆದ್ರೆ ಬಾಂಬ್ ಇಟ್ಟವನು ನೇರ ರಸ್ತೆ ಯಲ್ಲಿ ನಡೆದುಕೊಂಡು ಹೋಗಿದ್ದಾನೆ. ಕೆಫೆ ನಂತ್ರ ನೂರು ಮೀಟರ್ ಹೋಗಿರುವ ಬಗ್ಗೆಯೂ ಸಿಸಿಟಿವಿಯಲ್ಲಿ ಸೆರೆ ಆಗಿಲ್ಲ ಇಲ್ಲ. ನಂತ್ರ ಯಾವ ಮಾರ್ಗದಲ್ಲಿ ಹೋಗಿದ್ದಾನೆ ಅನ್ನೋ ಮಾಹಿತಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಕಾಂಗ್ರೆಸ್‌ನವರು ಅಯೋಗ್ಯ ನನ್ನ ಮಕ್ಕಳು; ಪಾಕಿಸ್ತಾನ ಮೇಲೆ ಪ್ರೀತಿ ಇದ್ದವರು ಅಲ್ಲಿಗೆ ಹೋಗಿ: ಯತ್ನಾಳ್ ಆಕ್ರೋಶ

ಮೂವರು ಶಂಕಿತರ ಬಂಧನ: ಕುಂದಲಹಳ್ಳಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸಿಸಿಬಿ ಪೊಲೀಸರಿಂದ ತನಿಖೆ  ಚುರುಕುಗೊಂಡಿದ್ದು, ಮೂವರು ಶಂಕಿತರನ್ನು ಈಗಾಗಲೇ ಬಂಧಿಸಲಾಗಿದೆ. ಮಡಿವಾಳದ ಟೆಕ್ನಿಕಲ್ ಸೆಂಟರ್ ನಲ್ಲಿ  ಬೇರೆ ಬೇರೆ ಸ್ಥಳದಲ್ಲಿರಿಸಿ  ಮೂವರನ್ನೂ ಸಿಸಿಬಿ ವಿಚಾರಣೆ ನಡೆಸುತ್ತಿದೆ.  ಸ್ಪೋಟಕಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿಗಳನ್ನ ಸಿಸಿಬಿ ಕಲೆ ಹಾಕುತ್ತಿದ್ದು, ಓರ್ವನನ್ನು ಡಿಜೆಹಳ್ಳಿಯಿಂದ ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.  ತಡ ರಾತ್ರಿ ಡಿಜೆ ಹಳ್ಳಿಗೆ ಬಂದ ಪೊಲೀಸರು ಶಂಕಿತನನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಕರೆದುಕೊಂಡು ಹೋಗಿದ್ದು, ಈಗ ಮಡಿವಾಳದ ಟೆಕ್ನಿಕಲ್ ಸೆಂಟರ್ ನಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

Rameshwaram Cafe Blast: 3 ತಿಂಗಳು ತಯಾರಿ ನಡೆಸಿದ್ದ ವೆಲ್ ಟ್ರೈನ್ಡ್ ಬಾಂಬರ್; ಬಿಎಂಟಿಸಿ ವಜ್ರ ಬಸ್ಸಲ್ಲಿ ಸಂಚಾರ!

ಬಾಂಬ್ ಬ್ಲಾಸ್ಟ್‌ಗೆ 3 ತಿಂಗಳು ತಯಾರಿ ಮಾಡಿದ್ದ:  ಬೆಂಗಳೂರಿನ ಕುಂದಲಹಳ್ಳಿಯಲ್ಲಿ ರಾಮೇಶ್ವರಂ ಕೆಫೆಯಲ್ಲಿ ನಿನ್ನೆ ಮಧ್ಯಾಹ್ನ ನಡೆದ ಬಾಂಬ್ ಬ್ಲಾಸ್ಟ್ ಆರೋಪಿ ವೆಲ್‌ ಟ್ರೈನ್ಡ್‌ ಬಾಂಬರ್ ಆಗಿದ್ದಾನೆ ಎಂದು ತಿಳಿದುಬಂದಿದೆ. ಈ ಆರೋಪಿ ತನ್ನ ಸ್ಥಳದಿಂದ 'ಬಿಎಂಟಿಸಿ ವಜ್ರ 500ಡಿ' ಬಸ್‌ನಲ್ಲಿ ಬಂದು 400 ಮೀ. ದೂರದಲ್ಲಿ ಇಳಿದು ನಂತರ ಕೆಫೆಗೆ ಬಂದು ಬಾಂಬ್ ಇಟ್ಟು ಬ್ಲ್ಯಾಸ್ಟ್‌ ಮಾಡದ್ದಾನೆ. ಆದರೆ, ಈತ ಬಾಂಬ್‌ ಬ್ಲ್ಯಾಸ್ಟ್‌ಗೆ ಬರೋಬ್ಬರಿ 3 ತಿಂಗಳಿಂದ ತಯಾರಿ ಮಾಡಿಕೊಂಡಿದ್ದನು. ರಾಮೇಶ್ವರಂ ಕೆಫೆಗೆ ಬಂದಿದ್ದ ಶಂಕಿತ ಯಾರೆಂಬ ಮಾಹಿತಿ ಕಲೆ ಹಾಕುತ್ತಿದ್ದಾಗ ಬೆಂಗಳೂರಿಗೆ ಬಂದಿದ್ದವನು ವೆಲ್ ಟ್ರೈನೈಡ್ ಬಾಂಬರ್ ಎಂಬ ಸುಳಿವು ಸಿಕ್ಕಿದೆ. ಬೆಂಗಳೂರಿನಲ್ಲಿ ಶಂಕಿತ ಉಗ್ರ ಕೆಲವರ ಆಜ್ಞೆಯ ಮೇರೆಗೆ ಬಂದು ಸ್ಫೋಟ ಮಾಡಿದ್ದಾನೆ. ನಂತರ, ಕೆಲವರ ಆಜ್ಞೆಯ ನಂತರ ತನ್ನ ಕೆಲಸ ಮುಗಿಸಿ ವಾಪಸ್ ಆಗಿದ್ದಾನೆ. ಇನ್ನು ರಾಮೇಶ್ವರಂ ಕೆಫೆಗೆ ಬಾಂಬ್ ಇಡಲು ಮೂರು ತಿಂಗಳ ತಯಾರಿ ಕೂಡ ಮಾಡಿಕೊಂಡಿದ್ದಾನೆ.

click me!