ಮಕ್ಕಳು ಶಾಲಾ ಶುಲ್ಕ ಕಟ್ಟಿಲ್ಲವೆಂದು 'ಡಾರ್ಕ್ ರೂಮಿ'ನಲ್ಲಿ ಕೂಡಿ ಹಾಕಿದ ಪ್ರೈವೇಟ್ ಸ್ಕೂಲ್ ಟೀಚರ್ಸ್!

Published : Dec 16, 2024, 01:01 PM ISTUpdated : Dec 17, 2024, 12:39 PM IST
ಮಕ್ಕಳು ಶಾಲಾ ಶುಲ್ಕ ಕಟ್ಟಿಲ್ಲವೆಂದು 'ಡಾರ್ಕ್ ರೂಮಿ'ನಲ್ಲಿ ಕೂಡಿ ಹಾಕಿದ ಪ್ರೈವೇಟ್ ಸ್ಕೂಲ್ ಟೀಚರ್ಸ್!

ಸಾರಾಂಶ

ಬೆಂಗಳೂರಿನ ಹಲವು ಖಾಸಗಿ ಶಾಲೆಗಳು ಶುಲ್ಕ ಪಾವತಿಸದ, ತಡವಾಗಿ ಬರುವ ಅಥವಾ ಶಿಸ್ತಿನಿಂದ ನಡೆದುಕೊಳ್ಳದ ಮಕ್ಕಳನ್ನು 'ಡಾರ್ಕ್ ರೂಮ್'ನಲ್ಲಿ ಕೂಡಿ ಹಾಕುವುದಾಗಿ ಬೆದರಿಕೆ ಹಾಕುತ್ತಿವೆ. ಈ ಕ್ರಮವು ಮಕ್ಕಳ ಮೇಲೆ ಮಾನಸಿಕ ದುಷ್ಪರಿಣಾಮ ಬೀರುತ್ತಿದ್ದು, ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ. ಆರ್ಕಿಡ್ ಇಂಟರ್‌ನ್ಯಾಷನಲ್ ಶಾಲೆಯಂತಹ ಪ್ರತಿಷ್ಠಿತ ಶಾಲೆಗಳ ವಿರುದ್ಧವೂ ಇಂತಹ ಆರೋಪಗಳು ಕೇಳಿಬಂದಿವೆ.

ಬೆಂಗಳೂರು (ಡಿ.16): ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಖಾಸಗಿ ಶಾಲೆಗಳಲ್ಲಿ ಮಕ್ಕಳು ಶಾಲಾ ಶುಲ್ಕ ಪಾವತಿಸುವುದು ವಿಳಂಬವಾದರೆ, ಶಾಲೆಗೆ ತಡವಾಗಿ ಬಂದರೆ, ಶಾಲೆಯಲ್ಲಿ ಆಶಿಸ್ತಿನಿಂದ ನಡೆದುಕೊಂಡರೆ, ಶಾಲೆಯಲ್ಲಿ ಗಲಾಟೆ ಮಾಡಿದರೆ ಅಥವಾ ಶಿಕ್ಷಕರ ಮಾತುಗಳನ್ನು ಕೇಳದಿದ್ದರೆ ಡಾರ್ಕ್ ರೂಮಿನಲ್ಲು ಕೂಡಿ ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಇದರಿಂದ ಮಕ್ಕಳ ಮೇಲೆ ಬೌದ್ಧಿಕ ಮತ್ತು ಮಾನಸಿಕ ಪರಿಣಾಮ ಬೀರುತ್ತಿದ್ದು, ಅಂತಹ ಖಾಸಗಿ ಶಾಲೆಗಳನ್ನು ಕಪ್ಪು ಪಟ್ಟಿಗೆ ಸೇರಿಸುವುದಾಗಿ ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ.

ಹೌದು, ಕೆಲವೊಂದು ಖಾಸಗಿ ಶಾಲೆಗಳಲ್ಲಿ ಮಕ್ಕಳು ಶಾಲಾ ಶುಲ್ಕವನ್ನು ಕಟ್ಟಿಲ್ಲವೆಂದರೆ ಅವರನ್ನು ಡಾರ್ಕ್ ರೂಮಿನಲ್ಲಿ (ಕಪ್ಪು ಕೋಣೆ) ಕೂಡಿ ಹಾಕುತ್ತಾರಂತೆ. ಇದಕ್ಕಾಗಿ ಶಾಲಾ ಶುಲ್ಕ ಪಾವತಿಸದ ಮಕ್ಕಳನ್ನು ತರಗತಿ ಅವಧಿಯಲ್ಲಿ ಕತ್ತಲೆಯಿಂದ ತುಂಬಿರುವ ಲೈಬ್ರರಿಯಲ್ಲಿ ಕೂಡಿ ಹಾಕುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಅದರಲ್ಲಿಯೂ ಬೆಂಗಳೂರಿನ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾಗಿರುವ ಮೈಸೂರು ರಸ್ತೆಯಲ್ಲಿರುವ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ಒಂದಾಗಿರುವ ಆರ್ಕಿಡ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಈ ರೀತಿಯಾಗಿ ಮಕ್ಕಳನ್ನು ಕೂಡಿ ಹಾಕಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಶಾಲೆಗೆ ಫೀಸ್ ಕಟ್ಟೋದು ತಡವಾಗಿದೆ ಎಂದು ಆಫೀಸ್ ರೂಮ್ ಅಲ್ಲಿ ಲೈಬ್ರರಿಯಲ್ಲಿ ಕೂಡಿ ಹಾಕಿದ ಆರೋಪ ಕೇಳಿಬಂದಿದೆ. ಮಾನ್ಯತೆ ನವೀಕರಣದಲ್ಲಿ ಸುದ್ದಿಯಾಗಿದ್ದ ಅದೇ ಆರ್ಕಿಡ್ ಶಾಲೆಯ ಮತ್ತೊಂದು ಬ್ರಾಂಚ್ ಮೈಸೂರ್ ರಸ್ತೆ ಆರ್.ವಿ. ಇಂಜಿನಿಯರಿಂಗ್ ಕಾಲೇಜಿನ ಎದುರುಗಡೆ ಇರುವ Orchid the international school ವಿರುದ್ಧ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಶಾಲಾ ಸಿಬ್ಬಂದಿ ನಡೆಯಿಂದ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಮಕ್ಕಳ ಬೌದ್ಧಿಕ ಮಾನಸಿಕ ಸ್ಥಿತಿ ಹದಗೆಡುತ್ತಿದೆ ಎಂದು ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಕಲಾಪದಲ್ಲಿ ಇಂದಿನಿಂದ ಉತ್ತರ ಕರ್ನಾಟಕ ಚರ್ಚೆ: ನೀರಾವರಿ ಸೇರಿ ಹಲವು ವಿಷಯ ಪ್ರಸ್ತಾಪ

ಇನ್ನು ಮಕ್ಕಳು ಈ ವಿಚಾರವನ್ನು ಪೋಷಕರಿಗೆ ಹೇಳಿದರೆ ಮತ್ತೆ ಹೆಚ್ಚಿನ ಟಾರ್ಚರ್ ಕೊಡುತ್ತಾರಂತೆ. ಹೀಗಾಗಿ ಕೂಡಲೇ ಸಂಬಂಧಪಟ್ಟ ಶಿಕ್ಷಣಾಧಿಕಾರಿಗಳು ಈ ಖಾಸಗಿ ಶಾಲೆಯನ್ನು ಪರಿಶೀಲಿಸಿ ಮಕ್ಕಳನ್ನು ಕಪ್ಪು ಕೋಣೆಗೆ ಕೂಡಿಹಾಕು ಈ ಶಾಲೆಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಪೋಷಕರು ಶಿಕ್ಷಣ ಇಲಾಖೆಗೆ ಹಾಗೂ ಮಕ್ಕಳ ಸುರಕ್ಷತಾ & ಸಂರಕ್ಷಣಾ ಇಲಾಖೆಗೆ ದೂರು ಕೊಟ್ಟಿದ್ದಾರೆ. ಈವರೆಗೆ ಒಟ್ಟು 6 ಮಕ್ಕಳಿಗೆ ಕಳೆದೆರಡು ವಾರದಲ್ಲಿ ಕೂಡಿ ಹಾಕಲಾಗಿದ್ದು, ಮಕ್ಕಳನ್ನು ಇಡೀದ ದಿನ ಲೈಟ್ ಇಲ್ಲ್ ಲೈಬ್ರರಿ ಕತ್ತಲೆ ಕೋಣೆಯಲ್ಲಿ ಕೂಡಿ ಹಾಕಲಾಗಿದೆಯಂತೆ. ಈ ಕುರಿತು ಶಾಲಾ ಶಿಕ್ಷಣ & ಅಭಿವೃಧ್ಧಿ ಇಲಾಖೆಯಲ್ಲಿ ದೂರು ದಾಖಲು ಆಗಿದೆ.

ಶಾಲೆಗಳ ಅನುಮತಿ ರದ್ದುಗೊಳಿಸಲು ಶಿಕ್ಷಣ ಇಲಾಖೆ ವಾರ್ನಿಂಗ್: ಇನ್ನು ಯಾವ್ಯಾವ ಖಾಸಗಿ ಶಾಲೆಗಳು ಶಾಲಾ ಶುಲ್ಕದ ವಿಚಾರವಾಗಿ ಮಕ್ಕಳಿಗೆ ಕಿರುಕುಳ ನೀಡುವುದು ಹಾಗೂ ಅವರ ಶೈಕ್ಷಣಿಕ ಕಲಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂತಹ ಕೃತ್ಯಗಳನ್ನು ಎಸಗಿರುವಂತಹ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಶಾಲೆಗಳು ಇರುವ ವ್ಯಾಪ್ತಿಯ ಪೊಲೀಸ್ ಠಾಣೆಯಿಂದ ಪೋಷಕರ ದೂರನ್ನು ಆಧರಿಸಿ ಕ್ರಮ ಕೈಗೊಳ್ಳಬೇಕು. ಮುಂದುವರೆದು ಪೋಷಕರ ಆರೋಪಗಳು ಸಾಬೀತಾದಲ್ಲಿ ಅಂತಹ ಶಾಲೆಗಳ ಅನುಮತಿ ರದ್ದುಗೊಳಿಸಿ ಕಪ್ಪು ಪಟ್ಟಿಗೆ ಸೇರಿಸುವುದಕ್ಕೆ ಪೊಲೀಸ್ ಇಲಾಖೆ ಸಹಕಾರ ನೀಡಬೇಕು ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಇದನ್ನೂ ಓದಿ: ನಾಳೆಯಿಂದ 2 ದಿನ ಬೆಂಗಳೂರು ಸೇರಿ 9 ಜಿಲ್ಲೆಗಳಲ್ಲಿ ಮತ್ತೆ ಮಳೆ ಸಾಧ್ಯತೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!