
ಬೆಂಗಳೂರು (ಸೆ.15) ಬೆಂಗಳೂರಿನಲ್ಲಿ ಮೆಟ್ರೋ ಸೇವೆ ವಿಸ್ತರಣೆಯಾಗುತ್ತಿದೆ. ಈಗಾಗಲೇ ಹಳದಿ ಮಾರ್ಗದ ಮೆಟ್ರೋ ಸೇವೆ ಜನರ ಓಡಾಟಕ್ಕೆ ಮುಕ್ತವಾಗಿದೆ. ಪರ್ಪಲ್ ಹಾಗೂ ಗ್ರೀನ್ ಲೈನ್ ಜೊತೆಗೆ ಯೆಲ್ಲೋ ಲೈನ್ ಸೇರ್ಪಡೆಗೊಂಡಿದೆ. ಇದೀಗ ಇದರ ಜೊತೆಗೆ ಮತ್ತೊಂದು ಲೈನ್ ಸೇರ್ಪಡೆಯಾಗುತ್ತಿದೆ. ಅದು ಗುಲಾಬಿ ಮಾರ್ಗ. ಕಾಳೇನ ಅಗ್ರಹಾರದಿಂದ ನಾಗಾವಾರದವರೆಗಿನ ಈ ಮೆಟ್ರೋ ಮಾರ್ಗ ಬಹುತೇಕ ಬೆಂಗಳೂರು ಕವರ್ ಮಾಡಲಿದೆ. ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೂ ಪರಿಹಾರ ನೀಡಲಿದೆ. ಮುಂದಿನ ವರ್ಷದೊಳಗೆ ಈ ಗುಲಾಬಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಮುಕ್ತವಾಗಲಿದೆ.
ಗುಲಾಬಿ ಮಾರ್ಗ ಮೆಟ್ರೋ ರೈಲು 21.3 ಕಿಲೋಮೀಟ್ ಸಂಚಾರ ಸೇವೆ ನೀಡಲಿದೆ. ಕಾಳೇನಅಗ್ರಹಾರ ನಾಗಾವಾರಕ್ಕೆ ಈ ಗುಲಾಬಿ ಮೆಟ್ರೋ ಸಂಪರ್ಕ ಕಲ್ಬಿಸಲಿದೆ. ಈ ಮೆಟ್ರೋ ಮಾರ್ಗ ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣ ನಡುವಿನ ಸಂಪರ್ಕವಾಗಿದೆ. ಗೊಟ್ಟಿಗೆರೆ, ತಾವರೇಕೆರೆ, ಕಾಳೇನಅಗ್ರಹಾರ, ಡೈರಿ ಸರ್ಕಲ್, ನಾಗಾವರ ಮೂಲಕ ಹಾದು ಹೋಗಲಿದೆ.
ಕಾಳೇನ ಅಗ್ರಹಾರದಿಂದ ನಾಗಾವರವರೆಗಿನ 21.3 ಕಿಲೋಮೀಟರ್ ಮೆಟ್ರೋ ಮಾರ್ಗದಲ್ಲಿ 13 ಕಿಲೋಮೀಟರ್ ಸುರಂಗ ಮಾರ್ಗ ಇರಲಿದೆ. ಡೈರಿ ಸರ್ಕಲ್‌ನಿಂದ ನಾಗಾವರ ವರೆಗೆ ಸುರಂಗ ಮಾರ್ಗ ಇರಲಿದೆ. ಇನ್ನು ತಾವರೆಕೆರೆಯಿಂದ ಕಾಳೇನಾ ಅಗ್ರಹಾರದ ವರೆಗೆ 7.5 ಕಿಲೋಮೀಟರ್ ದೂರ ಫ್ಲೇ ಓವರ್ ಮಾರ್ಗದ ಮೂಲಕ ಸಂಚಾರ ನಡೆಸಲಿದೆ.
ಇನ್ನು ಐದು ತಿಂಗಳಲ್ಲಿ ಶೇಕಡಾ 5ರಷ್ಟು ಮೆಟ್ರೋ ಟಿಕೆಟ್ ದರ ಏರಿಕೆ, ಬೆಂಗಳೂರಿಗರಿಗೆ ಶಾಕ್
ಗುಲಾಬಿ ಮೆಟ್ರೋ ಮಾರ್ಗವನ್ನು ಎರಡು ಹಂತದಲ್ಲಿ ಚಾಲನೆ ನೀಡಲು ಮೆಟ್ರೋ ನಿಗಮ ಸಿದ್ಧತೆ ಮಾಡಿದೆ. ಮೊದಲ ಹಂತದ ಮೆಟ್ರೋ ಸಂಚಾರ 2026ರ ಮಾರ್ಚ್ ತಿಂಗಳಲ್ಲಿ ನಡೆಯಲಿದೆ. ಇನ್ನು ಎರಡನೇ ಹಂತದ ಮೆಟ್ರೋ ಸಂಚಾರ 2026ರ ಸೆಪ್ಟೆಂಬರ್ ತಿಂಗಳಲ್ಲಿ ಆರಂಭಗೊಳ್ಳಲಿದೆ. ಈ ಮೂಲಕ ಇನ್ನು ಕೆಲವೇ ತಿಂಗಳಲ್ಲಿ ಬೆಂಗಳೂರಿನಲ್ಲಿ ನಾಲ್ಕನೇ ಮೆಟ್ರೋ ಲೈನ್ ಕಾರ್ಯನಿರ್ವಹಿಸಲಿದೆ.
ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರ ಮಾರ್ಗದಲ್ಲಿ ಹಳದಿ ಮೆಟ್ರೋ ಸಂಚಾರ ಆರಂಭಿಸಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಯೆಲ್ಲೋ ಲೈನ್ ಮೆಟ್ರೋ ಉದ್ಘಾಟನೆ ಮಾಡಿದ್ದರು. ಆರಂಭದಲ್ಲಿ ಎರಡು ರೈಲುಗಳ ಮೂಲಕ ಸಂಚಾರ ಆರಂಭಿಸಿದ ಹಳದಿ ಮೆಟ್ರೋ ಮಾರ್ಗ ಇದೀಗ ಮೂರನೇ ರೈಲು ಸೇರಿಕೊಂಡಿದೆ. ಹೀಗಾಗಿ 25 ನಿಮಿಷಕ್ಕೊಂದು ರೈಲು ಸೇವೆಯಿಂದ ಇದೀಗ 17 ನಿಮಿಷಕ್ಕೊಂದು ರೈಲು ಸೇವೆ ಲಭ್ಯವಿದೆ. 19.15 ಕಿಲೋಮೀಟರ್ ಉದ್ದದ ಈ ಮೆಟ್ರೋ ರೈಲು 7,160 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಅತೀ ಹೆಚ್ಚು ಟ್ರಾಫಿಕ್ ಸಮಸ್ಯೆ ಎದುರಿಸುತ್ತಿದ್ದ ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ಬೊಮ್ಮಸಂದ್ರ ಇಂಡಸ್ಟ್ರಿಯಲ್ ಏರಿಯಾ ಮೂಲಕ ಹಾದು ಹೋಗಲಿದೆ. ಪ್ರಮುಖವಾಗಿ ಇನ್ಫೋಸಿಸ್, ಬಯೋಕಾನ್, ಟಿಸಿಎಲ್ ಸೇರಿದಂತೆ ಹಲವು ಟೆಕ್ ಕಂಪನಿಗಳ ಉದ್ಯೋಗಿಳಿಗೂ ಈ ಹಳದಿ ಮೆಟ್ರೋ ನೆರವಾಗಿದೆ.
ಬೇರಾವ ಮಾರ್ಗದಲ್ಲಿರದ ವಿಶೇಷ ಸೌಲಭ್ಯ ನೀಡಲಿದೆ ನೀಲಿ ಮೆಟ್ರೋ ರೈಲು
ಇನ್ನು ಗ್ರೀನ್ ಲೈನ್ ಮೆಟ್ರೋ ಮಾದಾವರದಿಂದ ಕನಕಪುರ ರಸ್ತೆಯ ರೇಷ್ಮೆ ಸಂಸ್ಥೆವರೆಗೆ ವಿಸ್ತರಣೆಗೊಂಡಿದೆ. ಒಟ್ಟು 32 ನಿಲುಗಡೆ ಹೊಂದಿದೆ. ಇತ್ತ ಪರ್ಪಲ್ ಲೈನ್ ಮೆಟ್ರೋ ವೈಟ್‌ಫೀಲ್ಡ್ ಕಾಡುಗೋಡಿಯಿಂದ ಮೈಸೂರು ರಸ್ತೆಯ ಚಲ್ಲಘಟ್ಟವರಗೆ ವಿಸ್ತರಣೆಗೊಂಡಿದೆ. ಒಟ್ಟು 37 ನಿಲುಗಡೆ ಹೊಂದಿದೆ. ಮೂರು ಮೆಟ್ರೋ ಲೈನ್ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸುತ್ತಿದೆ. ಈ ಪೈಕಿ ಹಳದಿ ಮೆಟ್ರೋ ಲೈನ್‌ಗೆ ಶೀಘ್ರದಲ್ಲೇ ಮತ್ತೆರೆಡು ಮೆಟ್ರೋ ಸೇರಿಕೊಳ್ಳಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ