ಕೊರೋನಾದಿಂದ ಮೃತಪಟ್ಟವರನ್ನ ಗೌರವದಿಂದ ಅಂತ್ಯಸಂಸ್ಕಾರ ಮಾಡಿ: ವಕ್ಫ್ ಅಧಿಕಾರಿ

By Suvarna NewsFirst Published Jul 20, 2020, 1:16 PM IST
Highlights

ಆಯಾ ಖಬರಸ್ತಾನಗಳ ಆಡಳಿತ ಸಮಿತಿಗಳಿಗೆ ಸದರಿ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಕ್ತ ಕ್ರಮ| ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಕೇವಲ ಅನುಪಾಲನೆಯನ್ನು ಹೊರತು ಪಡಿಸಿ ಯಾವುದೇ ರೀತಿಯ ಚರ್ಚೆಗೆ ಆಸ್ಪದ ನೀಡಕೂಡದು| ಈ ಆದೇಶವನ್ನು ಉಲ್ಲಂಘಿಸಿದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ|

ಬೆಂಗಳೂರು(ಜು.20): ಮಾರಕ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಬೆಂಗಳೂರು ನಗರ ಪ್ರದೇಶದಲ್ಲಿ ಇತ್ತೀಚಿಗೆ ಸಂಭವಿಸುವ ಮರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮೃತಪಟ್ಟ ಮುಸ್ಲಿಂ ಸಮುದಾಯದ ಶವಗಳನ್ನು ಸಭ್ಯವಾಗಿ ಸರ್ಕಾರದ ಮಾರ್ಗಸೂಚಿಗಳನ್ವಯ ಅಂತ್ಯಸಂಸ್ಕಾರ ಮಾಡಬೇಕೆಂದು ಬೆಂಗಳೂರು ಉತ್ತರ ಜಿಲ್ಲೆಯ ಜಿಲ್ಲಾ ವಕ್ಫ್ ಮಂಡಳಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಜಿಲ್ಲಾ ವಕ್ಫ್ ಮಂಡಳಿ, ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ವಕ್ಫ್ ನೋಂದಾಯಿತ ಅಥವಾ ನೋಂದಾಯಿಸಲಾಗದೆ ಇರುವ ಖಬರಸ್ತಾನಗಳ ಆಡಳಿತ ಸಮಿತಿಗಳು/ಮುತವಲ್ಲಿಗಳು/ಆಡಳಿತಾಧಿಕಾರಿಗಳು ಕೋವಿಡ್ ಸಾಂಕ್ರಾಮಿಕ ರೋಗದಿಂದ ಮೃತಪಟ್ಟ ಮುಸ್ಲಿಮರ ಶವಸಂಸ್ಕಾರ ಮಾಡುವುದನ್ನು ತಡೆಯಬಾರದು, ಸದರಿ ಕಾರ್ಯಕ್ಕಾಗಿ ನೇಮಿಸಲಾದಂತಹ ನೋಡಲ್ ಅಧಿಕಾರಿಗಳ ಸಹಯೋಗದೊಂದಿಗೆ ಮೃತ ವ್ಯಕ್ತಿಯ ಸಭ್ಯ ಶವ ಸಂಸ್ಕಾರಕ್ಕೆ ಕ್ರಮ ಕೈಗೊಳ್ಳಬೇಕು. ಖಬರಸ್ತಾನಗಳ ಆಡಳಿತ ಸಮಿತಿಗಳ ಪ್ರತಿನಿಧಿಗಳಿಂದ ಅಸಹಕಾರ ಅಥವಾ ತಿರಸ್ಕರಣೆಯನ್ನು ಮೃತ ವ್ಯಕ್ತಿಗೆ ಮಾಡಲಾದ ಅವಮಾನ ಎಂದು ಭಾವಿಸಲಾಗುವುದು.

ಬೆಂಗಳೂರು: ನಾಲ್ಕೂವರೆ ತಿಂಗಳಲ್ಲಿ ಬರೋಬ್ಬರಿ 7232 ಜನರ ಸಾವು, ಕಾರಣ?

ಸದರಿ ಆದೇಶದ ಉಲ್ಲಂಘನೆಯು ಭಾರತೀಯ ದಂಡ ಸಂಹಿತೆಯ ನಿಬಂಧನೆಗಳಡಿ ದಂಡನಾತ್ಮಕವಾಗಿರುತ್ತದೆ ಹಾಗೂ ವಕ್ಫ್ ಕಾಯ್ದೆ 1995 ರ ಪ್ರವಾಧಾನಗಳಡಿ ಆಡಳಿತ ಸಮಿತಿಯಿಂದ ಹೊರ ಹಾಕುವ ಷರತ್ತಿಗೊಳ್ಳಪಟ್ಟಿರುತ್ತದೆ.
ಆಯಾ ಖಬರಸ್ತಾನಗಳ ಆಡಳಿತ ಸಮಿತಿಗಳಿಗೆ ಸದರಿ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಕ್ತ ಕ್ರಮ ಕೈಗೊಳ್ಳುವುದು, ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಕೇವಲ ಅನುಪಾಲನೆಯನ್ನು ಹೊರತು ಪಡಿಸಿ ಯಾವುದೇ ರೀತಿಯ ಚರ್ಚೆಗೆ ಆಸ್ಪದ ನೀಡಕೂಡದು, ಈ ಆದೇಶವನ್ನು ಉಲ್ಲಂಘಿಸಿದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

click me!