ಏಕರೂಪ್ ಕೌರ್ ಮತ್ತು ಅಲಿಕಾನ್ ಎಸ್.ಮೂರ್ತಿ ಅವರ ತಂಡಕ್ಕೆ ಮೂರು ಆಸ್ಪತ್ರೆ| ಮಹೇಶ್ವರರಾವ್ ಮತ್ತು ಕೆ.ಟಿ.ಬಾಲಕೃಷ್ಣ ತಂಡಕ್ಕೆ ನಾಲ್ಕು ಆಸ್ಪತ್ರೆ| ಕಪಿಲ್ ಮೋಹನ್, ರಾಮಚಂದ್ರ ರಾವ್ ತಂಡಕ್ಕೆ ಐದು ಆಸ್ಪತ್ರೆ| ಹರ್ಷ ಗುಪ್ತ ಮತ್ತು ಡಿ. ರೂಪ ಅವರ ತಂಡಕ್ಕೆ ಮೂರು ಆಸ್ಪತ್ರೆ| ಗೌರವ್ ಗುಪ್ತ ಮತ್ತು ಅಲೋಕ್ ಕುಮಾರ್ ಅವರ ತಂಡಕ್ಕೆ ನಾಲ್ಕು ಆಸ್ಪತ್ರೆಗಳ ಉಸ್ತುವಾರಿ|
ಬೆಂಗಳೂರು(ಜು.20): ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಹಾಸಿಗೆ ಮತ್ತು ಚಿಕಿತ್ಸಾ ನಿರ್ವಹಣೆ ಹೊಣೆಯನ್ನು ಓರ್ವ ಐಎಎಸ್, ಮತ್ತೋರ್ವ ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ಏಳು ಪ್ರತ್ಯೇಕ ತಂಡಗಳಿಗೆ ವಹಿಸಿ ಸರ್ಕಾರ ಆದೇಶ ಮಾಡಿದೆ.
ಉಮಾ ಮಹದೇವನ್ ಮತ್ತು ಸುನಿಲ್ ಅಗರವಾಲ್ ಅವರ ತಂಡಕ್ಕೆ ಐದು ಆಸ್ಪತ್ರೆ, ಮೊಹಮದ್ ಮೊಹಿಸಿನ್ ಮತ್ತು ಹರಿಶೇಖರನ್ ನೇತೃತ್ವದ ತಂಡಕ್ಕೆ ಆರು ಆಸ್ಪತ್ರೆ, ಡಾ. ಏಕರೂಪ್ ಕೌರ್ ಮತ್ತು ಅಲಿಕಾನ್ ಎಸ್.ಮೂರ್ತಿ ಅವರ ತಂಡಕ್ಕೆ ಮೂರು ಆಸ್ಪತ್ರೆ, ಮಹೇಶ್ವರರಾವ್ ಮತ್ತು ಕೆ.ಟಿ.ಬಾಲಕೃಷ್ಣ ತಂಡಕ್ಕೆ ನಾಲ್ಕು ಆಸ್ಪತ್ರೆ, ಕಪಿಲ್ ಮೋಹನ್, ರಾಮಚಂದ್ರ ರಾವ್ ತಂಡಕ್ಕೆ ಐದು ಆಸ್ಪತ್ರೆ, ಹರ್ಷ ಗುಪ್ತ ಮತ್ತು ಡಿ. ರೂಪ ಅವರ ತಂಡಕ್ಕೆ ಮೂರು ಆಸ್ಪತ್ರೆ, ಗೌರವ್ ಗುಪ್ತ ಮತ್ತು ಅಲೋಕ್ ಕುಮಾರ್ ಅವರ ತಂಡಕ್ಕೆ ನಾಲ್ಕು ಆಸ್ಪತ್ರೆಗಳ ಉಸ್ತುವಾರಿ ವಹಿಸಲಾಗಿದೆ.
ಮಹಾಮಾರಿ ಕೊರೋನಾ ಸೇವೆಗೆ ವಿವಿ ವಿದ್ಯಾರ್ಥಿಗಳು..!
ದಾಖಲಾತಿ ಸಿಗದ ರೋಗಿಗಳು ಅಧಿಕಾರಿಗಳಿಗೆ ತಮ್ಮ ಕುಂದು ಕೊರತೆ ಸಲ್ಲಿಸಬಹುದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಆದೇಶ ಮಾಡಿದ್ದಾರೆ.