ಪ್ರತಿ ದಿನ 25 ಕಿ.ಮಿ ಇವಿ ಯೂನಿಸೈಕಲ್‌ನಲ್ಲಿ ಬೆಂಗಳೂರಿಗನ ಪ್ರಯಾಣ, ಪೊಲೀಸ್ ತಡೆದಿದ್ದೇಕೆ?

Published : May 10, 2026, 03:43 PM IST
Bengaluru Man ev unicycle ride

ಸಾರಾಂಶ

ಬೆಂಗಳೂರಿನ ಯವಕ ಪ್ರತಿ ದಿನ ಮನೆಯಿಂದ ಕಚೇರಿಗೆ ಎಲೆಕ್ಟ್ರಿಕ್ ಯೂನಿಸೈಕಲ್‌ನಲ್ಲಿ ಪ್ರಯಾಣ ಮಾಡುತ್ತಾನೆ. ಟ್ರಾಫಿಕ್ ನಡುವೆ ಸರಾಗವಾಗಿ ಸಾಗಬಹುದು, ಪಾರ್ಕಿಂಗ್ ಸಮಸ್ಯೆ ಇಲ್ಲ, ದಿಢೀರ್ ಟ್ರಾಫಿಕ್ ಪೊಲೀಸರು ತಡೆದು ಮಾಡಿದ್ದೇನು?

ಬೆಂಗಳೂರು (ಮೇ.10) ಬೆಂಗಳೂರಿನ ಟ್ರಾಫಿಕ್‌ನಲ್ಲಿ ಬೈಕ್, ಸ್ಕೂಟರ್ ಕೂಡ ದೊಡ್ಡದಾಗುತ್ತಿದೆ. ನುಗ್ಗಿಸಲು ಸ್ಥಳವೇ ಇಲ್ಲದಾಗಿದೆ. ಈ ಕಿರಿಕಿರಿ ತಪ್ಪಿಸಲು ಬೆಂಗಳೂರಲ್ಲಿ ಹಲವರು ಎಲೆಕ್ಟ್ರಿಕ್ ಯೂನಿಸೈಕಲ್ ಮೂಲಕ ಪ್ರಯಾಣ ಮಾಡುತ್ತಾರೆ. ಈ ಪೈಕಿ ಯುವಕನೊಬ್ಬ ಪ್ರತಿ ದಿನ ತನ್ನ ಮನೆಯಿಂದ ಕಚೇರಿ ಹಾಗೂ ಕಚೇರಿಯಿಂದ ಮನೆಗೆ ಇದೇ ಇವಿ ಯೂನಿಸೈಕಲ್ ಮೂಲಕ ಪ್ರಯಾಣ ಮಾಡುತ್ತಿದ್ದಾನೆ. ಅಚಾನಕ್ಕಾಗಿ ಬೆಂಗಳೂರಿನ ಟ್ರಾಫಿಕ್ ಪೊಲೀಸರು ಈತನ ನೋಡಿದ್ದೇ ತಡೆದಿದ್ದಾರೆ. ಬಳಿಕ ನಡೆದ ಘಟನೆಯನ್ನು ಈತ ವಿವರಿಸಿದ್ದಾನೆ.

ಬೆಂಗಳೂರು ಪೊಲೀಸರು ತಡೆದಿದ್ದೇಕೆ?

ಎಂದಿನಂತೆ ಆಫೀಸ್‌ನಿಂದ ಮರಳಿ ಬರುತ್ತಿದ್ದ ವೇಳೆ ಈತನ ಯೂನಿಸೈಕಲ್ ನೋಡಿ ಟ್ರಾಫಿಕ್ ಪೊಲೀಸರು ಅಚ್ಚರಿಗೊಂಡಿದ್ದಾರೆ. ತಕ್ಷಣವೇ ನಿಲ್ಲಿಸಲು ಸೂಚಿಸಿದ್ದಾರೆ. ಬಳಿಕ ಈ ಹೊಸ ಮಾದರಿ ಇವಿ ಸೈಕಲ್ ಕುರಿತು ಯುವಕನ ಬಳಿ ಕೇಳಿದ್ದಾರೆ. ಪೊಲೀಸರು ತಡೆದಾಗ, ದಂಡ ಹಾಕುತ್ತಾರೋ, ಅಥವಾ ಹಲವು ದಾಖಲೆಗಳಿಗಾಗಿ ಅಲೆದಾಡಬೇಕಾಗುತ್ತೋ ಅನ್ನೋ ಸಣ್ಣ ಆತಂಕ ಕಾಡಿದ್ದು ಸುಳ್ಳಲ್ಲ. ಆದರೆ ಪೊಲೀಸರು ನಿಲ್ಲಿಸಿ ಕೇಳಿದ್ದು, ಈ ಇವಿ ಯೂನಿಸೈಕಲ್ ಕುರಿತು. ಇದರ ಪ್ರಯಾಣ, ಪ್ರಯೋಜನ, ಸಾಧಕ ಬಾಧಕ ಕುರಿತು ಟ್ರಾಫಿಕ್ ಪೊಲೀಸರು ಮಾಹಿತಿ ಕೇಳಿದ್ದಾರೆ.

ಟ್ರಾಫಿಕ್ ಪೊಲೀಸರು ಪ್ರಶ್ನೆಗಳಿಗೆ ಯುವಕ ಉತ್ತರ ನೀಡಿದ್ದಾರೆ. ಇದು ಎಲೆಕ್ಟ್ರಿಕ್ ಯೂನಿಸೈಕಲ್. ಬೆಂಗಳೂರಿಂತ ಟ್ರಾಫಿಕ್ ಸಿಟಿಗಳಲ್ಲಿ ಈ ರೀತಿಯ ಯೂನಿಸೈಕಲ್ ಉಪಯೋಗವಾಗುತ್ತದೆ. ಟ್ರಾಫಿಕ್ ನಡುವೆ ಸಾಗಬಹುದು. ಪಾರ್ಕಿಂಗ್ ಸಮಸ್ಯೆಗೂ ಉದ್ಭವಿಸುವುದಿಲ್ಲ. ಬ್ಯಾಲೆನ್ಸ್ ಕಲಿತರೆ ಸಾಕು ಸುಲಭವಾಗಿ ಮನೆಯಿಂದ ಕಚೇರಿ ಸೇರಿದಂತೆ ಬೆಂಗಳೂರು ಓಡಾಟಕ್ಕೆ ಉಪಯುಕ್ತ ಅನ್ನೋ ಮಾಹಿತಿ ನೀಡಿದ್ದಾರೆ.

ಇವಿ ಯೂನಿಸೈಕಲ್ ರೈಡ್ ಮಾಡಿದ ಟ್ರಾಫಿಕ್ ಪೊಲೀಸ್

ಟ್ರಾಫಿಕ್ ಪೊಲೀಸರಿಗೆ ಮಾಹಿತಿ ನೀಡಿದ ಯುವಕ ನೀವು ಒಂದು ಬಾರಿ ರೈಡ್ ಟ್ರೈ ಮಾಡಿ ಎಂದು ಸೂಚಿಸಿದ್ದಾನೆ. ಇದರಂತೆ ಪೊಲೀಸ್ ಯೂನಿಸೈಕಲ್ ಹತ್ತಿ ಕೆಲ ದೂರ ಪ್ರಯತ್ನಸಿದ್ದಾರೆ. ಯುವಕನ ಸಹಾಯದೊಂದಿಗೆ ರೈಡ್ ಮಾಡಿದ್ದಾರೆ. ಮುಂದೇ ಬೆಂಗಳೂರು ಟ್ರಾಫಿಕ್ ಅತಿಯಾಗಿ ಪೊಲೀಸರು ಕೂಡ ಈ ರೀತಿಯ ವಾಹನ ಉಪಯೋಗಿಸಿದರೂ ಅಚ್ಚರಿಯಿಲ್ಲ ಎಂದು ಯುವಕ ಹೇಳಿದ್ದಾನೆ.

 

 

ಟ್ರಾಫಿಕ್ ಪೊಲೀಸರು ತಮ್ಮ ಕುತೂಹಲಕ್ಕಾಗಿ ಯೂನಿಸೈಕಲ್ ತಡೆದು ಮಾಹಿತಿ ಪಡೆದಿದ್ದಾರೆ. ಯುವಕನ ಜೊತೆ ಫೋಟೋ ಕ್ಲಿಕ್ಕಿಸಿದ್ದಾರೆ. ಇದೀಗ ಬೆಂಗಳೂರಲ್ಲಿ ಇವಿ ಯೂನಿಸೈಕಲ್ ಟ್ರೆಂಡ್ ಆಗುತ್ತಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪ್ರಧಾನಿ ಮೋದಿ ಸಾಗುವ ದಾರಿ ಸ್ಫೋಟಿಸೋದಾಗಿ ಪೊಲೀಸರಿಗೆ ಸಂದೇಶ; ತಾತಗುಣಿಯಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆ!
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ರಾಜ್ಯಾದ್ಯಂತ 5 ದಿನ ಮಳೆ; ನಿಮ್ಮ ಜಿಲ್ಲೆ ಇದೆಯಾ ಚೆಕ್ ಮಾಡಿ!