ಬಾಣಂತನಕ್ಕೆ ಹೋದ ಹೆಂಡ್ತಿ: ಊಟಕ್ಕೆಂದು ಹೊಟೇಲ್‌ಗೆ ಹೋದಾಗ ಆಕಸ್ಮಿಕವಾಗಿ ಕಾಲ್ತುಳಿದಿದ್ದಕ್ಕೆ ಯುವಕನ ಕೊಲೆ

Published : Mar 04, 2026, 07:50 AM IST
Loan recovery agent killed in bengaluru

ಸಾರಾಂಶ

ಬೆಂಗಳೂರಿನ ಬಸವೇಶ್ವರ ನಗರದ ಹೋಟೆಲ್‌ನಲ್ಲಿ ದೋಸೆ ತಿನ್ನುವಾಗ ಆಕಸ್ಮಿಕವಾಗಿ ಕಾಲು ತುಳಿದಿದ್ದರಿಂದ ರೊಚ್ಚಿಗೆದ್ದ ಯುವಕರಿಬ್ಬರು, ಖಾಸಗಿ ಕಂಪನಿ ಉದ್ಯೋಗಿಯೊಬ್ಬರನ್ನು ಡ್ಯಾಗರ್‌ನಿಂದ ಇರಿದು ಕೊಲೆ ಮಾಡಿದ್ದಾರೆ. ಮೃತ ವ್ಯಕ್ತಿಗೆ 11 ತಿಂಗಳ ಮಗುವಿದೆ.

ಆಕಸ್ಮಿಕವಾಗಿ ಕಾಲ್ತುಳಿದ ಕಾರಣಕ್ಕೆ ಯುವಕನ ಕೊಲೆ

ಬೆಂಗಳೂರು: ಹೋಟೆಲ್‌ನಲ್ಲಿ ದೋಸೆ ತಿನ್ನುವ ವೇಳೆ ಆಕಸ್ಮಿಕವಾಗಿ ಕಾಲ್ತುಳಿದ ಕಾರಣಕ್ಕೆ ಖಾಸಗಿ ಕಂಪನಿ ಉದ್ಯೋಗಿಯೊಬ್ಬರ ಮೇಲೆ ಸೋದರರಿಬ್ಬರು ಡ್ಯಾಗರ್‌ನಿಂದ ಹಲ್ಲೆ ನಡೆಸಿ ಕೊಂದು ಪರಾರಿಯಾಗಿರುವ ಘಟನೆ ಬಸವೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಂಜುನಾಥ ನಗರದ ಶಶಿಕುಮಾರ್ (31) ಹತ್ಯೆಗೀಡಾದ ದುರ್ದೈವಿ. ಈ ಹತ್ಯೆ ಕೃತ್ಯ ಎಸಗಿ ತಪ್ಪಿಸಿಕೊಂಡಿರುವ ಸೋದರರಾದ ಭಾಗ್ಯರಾಜ್ ಹಾಗೂ ಮಂಜುನಾಥ್ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಬಸವೇಶ್ವರ ನಗರದ ಗುರು ರಾಘವೇಂದ್ರ ಹೋಟೆಲ್ ಬಳಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಖಾಸಗಿ ಸಾಲ ವಸೂಲಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಶಶಿ, ತನ್ನ ಕುಟುಂಬದ ಜತೆ ಮಂಜುನಾಥ ನಗರದಲ್ಲಿ ನೆಲೆಸಿದ್ದರು. ಮನೆ ಸಮೀಪದ ಹೋಟೆಲ್‌ಗೆ ರಾತ್ರಿ ದೋಸೆ ತಿನ್ನಲು ಅವರು ಹೋಗಿದ್ದರು. ಅದೇ ವೇಳೆ ಮಂಜುನಾಥ ಸಹ ಹೋಟೆಲ್‌ಗೆ ಹೋಗಿದ್ದ. ಆಗ ದೋಸೆ ತಿನ್ನುವಾಗ ಆಕಸ್ಮಿಕವಾಗಿ ಮಂಜುನಾಥ್ ಕಾಲನ್ನು ಶಶಿ ತುಳಿದಿದ್ದಾನೆ. ಈ ವಿಚಾರಕ್ಕೆ ಜಗಳವಾಗಿ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.

ಇದನ್ನೂ ಓದಿ: ಬೈಕ್ ಶೋರೂಮ್‌ಗಳಿಂದ ಮಹಾ ವಂಚನೆ: ಸಬ್ಸಿಡಿ ಸಿಗುತ್ತೆ ಅಂತ ಸಾಲ ಮಾಡಿಸಿ ಬೈಕ್: 3250 ಜನರಿಗೆ 35 ಕೋಟಿ ರೂ ವಂಚನೆ

ಈ ಗಲಾಟೆ ವಿಷಯನ್ನು ತನ್ನ ಸೋದರ ಭಾಗ್ಯರಾಜ್‌ಗೆ ಮಂಜುನಾಥ್ ಹೇಳಿ ಕರೆಸಿಕೊಂಡಿದ್ದಾನೆ. ಆಗ ಡ್ಯಾಗರ್ ಸಮೇತ ಹೋಟೆಲ್‌ಗೆ ಬಂದ ಭಾಗ್ಯ ರಾಜ್, ಏಕಾಏಕಿ ಶಶಿ ಮೇಲೆ ಮಾರಕಾಸ್ತ್ರ ದಿಂದ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಶಶಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

11 ತಿಂಗಳ ಮಗುವಿನ ತಂದೆ

ಮೃತ ಶಶಿಕುಮಾರ್‌ ಅವರಿಗೆ 11 ತಿಂಗಳ ಮಗುವಿದೆ. ಅವರ ಪತ್ನಿ ಬಾಣಂತನಕ್ಕೆ ತವರು ಮನೆಗೆ ಹೋಗಿದ್ದರಿಂದ ರಾತ್ರಿ ಊಟ ಮಾಡಲು ಹೋಟೆಲ್‌ಗೆ ಶಶಿಕುಮಾ‌ರ್ ಅವರು ತೆರಳಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ:  ಯುದ್ಧದಿಂದಾಗಿ ಭಾರತಕ್ಕೆ ರಷ್ಯಾದಿಂದ ಕಚ್ಚಾತೈಲ ಖರೀದಿ ಹೆಚ್ಚಿಸುವ ಅನಿವಾರ್ಯತೆ: ಮತ್ತೆ ಸುಂಕ ಹೇರಲಿದೆಯಾ ಅಮೆರಿಕಾ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೈಕ್ ಶೋರೂಮ್‌ಗಳಿಂದ ಮಹಾ ವಂಚನೆ: ಸಬ್ಸಿಡಿ ಸಿಗುತ್ತೆ ಅಂತ ಸಾಲ ಮಾಡಿಸಿ ಬೈಕ್: 3250 ಜನರಿಗೆ 35 ಕೋಟಿ ರೂ ವಂಚನೆ
ಸ್ವಾರ್ಥಕ್ಕಾಗಿ ಬ್ಲ್ಯಾಕ್‌ಮೇಲ್‌ ಮಾಡಲು ಇಷ್ಟವಿಲ್ಲ: ಡಿಸಿಎಂ