* ಬೆಂಗಳೂರು-ಕಾರವಾರ ನಡುವಿನ ರೈಲು ಸಂಚಾರ ಪುನಾರಂಭ
* ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾಹಿತಿ
* ಕೊರೋನಾ ಸೋಂಕಿನಿಂದಾಗಿ ಸ್ಥಗಿತಗೊಂಡಿದ್ದ ಬೆಂಗಳೂರು-ಕಾರವಾರ ರೈಲು
ಬೆಂಗಳೂರು, (ಆ.13): ಕೊರೋನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದ ಬೆಂಗಳೂರು-ಕಾರವಾರ ನಡುವಿನ ರೈಲು ಸಂಚಾರ ಪುನಾರಂಭವಾಗಲಿದೆ.
ವಿಸ್ಟಾಡೋಮ್ ಕೋಚ್‌ಗಳೊಂದಿಗೆ ಆಗಸ್ಟ್ 16ರಿಂದ ರೈಲು ಸಂಚಾರಿಸಲಿದೆ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಇಂದು (ಆ.13) ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
undefined
ರಾಜ್ಯದಲ್ಲಿ ‘ವಿಸ್ಟಾಡೋಮ್’ ಸಂಚಾರ ಶುರು: ಬೆಂಗ್ಳೂರು-ಮಂಗ್ಳೂರು ಮಧ್ಯೆ ಸಂಚಾರ
ಕೋವಿಡ್ ಕಾರಣದಿಂದ ಭಾಗಶಃ ಸಂಚಾರ ಮೊಟಕುಗೊಳಿಸಿದ್ದ ಬೆಂಗಳೂರು ಕಾರವಾರ (06211/06212) ಹಗಲು ರೈಲು ಆಗಸ್ಟ್ 16ರಿಂದ ಒಂದು ಹೊಸ ವಿಸ್ಟಾಡೋಮ್ ಕೋಚ್ (40ಸೀಟು)ನೊಂದಿಗೆ ಪುನಾರಂಭಗೊಳ್ಳಲಿದೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಪ್ರಕೃತಿ ರಮಣೀಯ ಪಶ್ಚಿಮ ಘಟ್ಟಗಳ ಹಾಗೂ ಕರಾವಳಿಯ ಅರಬ್ಬೀ ಸಮುದ್ರದ ವಿಹಂಗಮ ನೋಟವನ್ನು ರೈಲ್ವೆ ಪ್ರಯಾಣದ ನಡುವೆ ಪ್ರಯಾಣಿಕರು ಕಣ್ತುಂಬಿಕೊಳ್ಳಬಹುದು ಎಂದು ಸಚಿವೆ ಶೋಭಾ ಕರಂದ್ಲಾಜೆ ಶುಭ ಹಾರೈಸಿದ್ದಾರೆ.
ಬೆಂಗಳೂರು ಕಾರವಾರ ಹಗಲು ರೈಲು ಸಂಚಾರವನ್ನು ಮಂಗಳೂರಿನಿಂದ ಕಾರವಾರ ತನಕ ಸ್ಥಗಿತಗೊಳಿಸಲಾಗಿದ್ದು, ರೈಲು ಪುನಾರಂಭಕ್ಕೆ ಸಂಘ ಸಂಸ್ಥೆಗಳು, ಸಾರ್ವಜನಿಕರು ಒತ್ತಾಯಿಸಿದ್ದರು.
ಈ ಹಿನ್ನೆಲೆಯಲ್ಲಿ ಶೋಭಾ ಕರಂದ್ಲಾಜೆ ಅವರು ಕೇಂದ್ರ ರೈಲ್ವೆ ಸಚಿವರನ್ನು ಭೇಟಿಯಾಗಿ ಕಾರವಾರ-ಬೆಂಗಳೂರು ಹಗಲು ರೈಲಿನ ಪುನಾರಂಭಕ್ಕೆ ಮನವಿ ಮಾಡಿದ್ದರು. ಮನವಿ ಪುರಸ್ಕರಿಸಿದ ರೈಲ್ವೆ ಇಲಾಖೆ, ಕಾರವಾರ-ಬೆಂಗಳೂರು ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.