ಸಿಎಂ ಬಸವರಾಜ ಬೊಮ್ಮಾಯಿ ಬೆಂಬಲಕ್ಕೆ ನಿಂತ ಕಾಂಗ್ರೆಸ್ ಶಾಸಕ

Published : Aug 13, 2021, 05:49 PM IST
ಸಿಎಂ ಬಸವರಾಜ ಬೊಮ್ಮಾಯಿ ಬೆಂಬಲಕ್ಕೆ ನಿಂತ ಕಾಂಗ್ರೆಸ್ ಶಾಸಕ

ಸಾರಾಂಶ

* ಸಿಎಂ ಬಸವರಾಜ ಬೊಮ್ಮಾಯಿ ಬೆಂಬಲಕ್ಕೆ ನಿಂತ ಕಾಂಗ್ರೆಸ್ ಶಾಸಕ * ಕೇರಳ ಗಡಿಗೆ ಭೇಟಿ ನೀಡದ ಸಿಎಂ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಕೇರಳಿಗರ ವಿರುದ್ದ ಗುಡುಗಿದ ಖಾದರ್ * ಬಸವರಾಜ ಬೊಮ್ಮಾಯಿ ಪರ ಯುಟಿ ಖಾದರ್ ಬ್ಯಾಟಿಂಗ್

ಮಂಗಳೂರು, (ಆ.13): ಕೇರಳ ಗಡಿಗೆ ಭೇಟಿ ನೀಡದ ಸಿಎಂ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಕೇರಳಿಗರ ವಿರುದ್ದ ಕಾಂಗ್ರೆಸ್ ಶಾಸಕ ಯುಟಿ ಖಾದರ್ ಗುಡುಗಿದ್ದು,  ಬಸವರಾಜ ಬೊಮ್ಮಾಯಿ ಬೆಂಬಲಕ್ಕೆ ನಿಂತಿದ್ದಾರೆ.

ನಗರದಲ್ಲಿ ಇದು (ಆ.13) ಮಾಧ್ಯಮಗಳೊಂದಿಗೆ ಮಾತನಾಡಿದ ಖಾದರ್​,  ಸಿ‌ಎಂ ಬಸವರಾಜ ಬೊಮ್ಮಾಯಿ ಕೇರಳ ಗಡಿ ಭೇಟಿ ರದ್ದು ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಶಾಸಕ ಯು.ಟಿ ಖಾದರ್​, ಸಾಮಾಜಿಕ ಜಾಲತಾಣದಲ್ಲಿ ಸಿಎಂ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ಹೇಳುವ ಮೂಲಕ ಸಿಎಂ ಪರ ಬ್ಯಾಟಿಂಗ್ ಮಾಡಿದರು.

ಸಿದ್ದರಾಮಯ್ಯ ಭೇಟಿಗೆ ಸ್ಪಷ್ಟನೆ ಕೊಟ್ಟ ಬಿಜೆಪಿ ಶಾಸಕ

ಕೇರಳದ ಕೆಲವು ಮಂದಿ ತಮಗೆ ಹೆದರಿ ಗಡಿಗೆ ಸಿಎಂ ಬಂದಿಲ್ಲ ಅಂತಾ ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಎಂ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಇದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಕರ್ನಾಟಕ ಸಿಎಂ ಯಾರ ಬೆದೆರಿಕೆಗೂ ಬಗ್ಗೆ ಗಡಿ ಭೇಟಿ ರದ್ದು ಮಾಡಿಲ್ಲ ಎಂದು ಹೇಳಿದರು.

ಗಡಿಯ ಬಗ್ಗೆ ಕೇರಳದಿಂದ ಬರುವವರಿಗೆ RTPCR ನೆಗೆಟಿವ್ ರಿಪೋರ್ಟ್ ಇರಲೇಬೇಕು ಎಂದು ಸಿಎಂ ಅಧಿಕಾರಿಗಳಿಗೆ ಸ್ಪಷ್ಟಪಡಿಸಿದ್ದಾರೆ. ಗಡಿಯಲ್ಲಿ ಬಂದೋಬಸ್ತ್​, ಚೆಕ್ ಪೋಸ್ಟ್ ನಿರ್ವಹಣೆ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಕನ್ನಡಿಗರು ಒಟ್ಟಾದರೇ ಸಿಎಂ ಅವರನ್ನು ಪಾದಯಾತ್ರೆ ಮೂಲಕ ಕರೆದುಕೊಂಡು ಹೋಗುತ್ತೇವೆ. ತಲಪಾಡಿ ಗಡಿಯಿಂದ ತಿರುವನಂತಪುರದ ತನಕ ಪಾದಯಾತ್ರೆ ಮಾಡುತ್ತೇವೆ. ಅಷ್ಟು ಧೈರ್ಯ ಕರ್ನಾಟಕದ ಜನರಲ್ಲಿದೆ ಎಂದರು.

ರಾಜ್ಯದ ಜನರ ಆರೋಗ್ಯ ದೃಷ್ಟಿಯಿಂದ ಸಿಎಂ ಆದೇಶ ಮಾಡಿದ್ದಾರೆ. ಗಡಿ ಭಾಗದ ನಿರ್ಧಾರಗಳನ್ನು ಅಧಿಕಾರಿಗಳು ಚರ್ಚಿಸಿ ತೀರ್ಮಾನ ಮಾಡುತ್ತಾರೆ. ಈ ಹಿಂದೆ ಕಾಸರಗೋಡಿನ ಜನರ‌ನ್ನೇ ಕೇರಳದ ಬೇರೆ ಜಿಲ್ಲೆಗೆ ಹೋಗಲು ಬಿಟ್ಟಿಲ್ಲ. ಈಗ ಕರ್ನಾಟಕ ಸರ್ಕಾರದ ವಿರುದ್ಧ ಮಾತನಾಡೋರು ಆಗ ಎಲ್ಲಿ ಹೋಗಿದ್ದರು. ಇದರ ಬಗ್ಗೆ ಯಾರೂ ಕರ್ನಾಟಕ ಸರ್ಕಾರದ ವಿರುದ್ಧ ಮಾತನಾಡಬಾರದು ಎಂದು ಎಚ್ಚರಿಕೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿಎಂ ಗೊಂದಲಕ್ಕೆ ಮತ್ತೆ ಬೆಂಕಿ: ಸಿದ್ದರಾಮಯ್ಯ 5 ವರ್ಷ ಸಿಎಂ, ಬದಲಾದರೆ ಡಿಕೆಶಿ ಒಬ್ರೇ ರೇಸ್‌ನಲ್ಲಿಲ್ಲ..; - ಕೆಎನ್ ರಾಜಣ್ಣ
ಗಡೀಪಾರು ಸಂಕಷ್ಟದಲ್ಲಿ Mahesh Shetty Timarodi: ಎಸಿ ಕೋರ್ಟ್‌ಗೆ ಹಾಜರಾಗುವ ಮುನ್ನ ಮಹಾಲಿಂಗೇಶ್ವರ ದೇಗುಲದಲ್ಲಿ ಪ್ರಾರ್ಥನೆ