ಐಟಿ ದಾಳಿ ವೇಳೆ ಸಿಕ್ಕಿದ್ದು ಎಸ್ಎಸ್ಟಿ ವೈಎಸ್ಟಿ ಟ್ಯಾಕ್ಸ್ ಹಣ; ರಾಜ್ಯ ಕಂಡ ಅತ್ಯಂತ ಭ್ರಷ್ಟ ಸರ್ಕಾರ: ಕುಮಾರಸ್ವಾಮಿ

By Kannadaprabha News  |  First Published Oct 17, 2023, 6:20 AM IST

ಐಟಿ ದಾಳಿ ವೇಳೆ ಮೊದಲ‌ ದಿನ‌ ಸಿಕ್ಕಿದ್ದು ಎಸ್ಎಸ್ ಟಿ ಟ್ಯಾಕ್ಸ್ ಹಣ, ಎರಡನೇ ದಿನ ಸಿಕ್ಕಿದ್ದು ವೈಎಸ್ ಟಿ ಟ್ಯಾಕ್ಸ್ ಹಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.


ಮೈಸೂರು (ಅ.17) :  ಐಟಿ ದಾಳಿ ವೇಳೆ ಮೊದಲ‌ ದಿನ‌ ಸಿಕ್ಕಿದ್ದು ಎಸ್ಎಸ್ ಟಿ ಟ್ಯಾಕ್ಸ್ ಹಣ, ಎರಡನೇ ದಿನ ಸಿಕ್ಕಿದ್ದು ವೈಎಸ್ ಟಿ ಟ್ಯಾಕ್ಸ್ ಹಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.

ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಟಿ ದಾಳಿ ವೇಳೆ ಹಣ ಸಿಕ್ಕವರು ದೊಡ್ಡ ಗುತ್ತಿಗೆದಾರರೇನಲ್ಲ. ಗುತ್ತಿಗೆದಾರನಿಗೂ ವಾಸ್ತುಶಿಲ್ಪಿಗೂ ಏನು ಸಂಬಂಧ? ಬೆಂಗಳೂರಿನ ಸಿಎಂ ಮನೆ ನವೀಕರಿಸುತ್ತಿರುವವರು ಯಾರು? ಮೈಸೂರಿನ ಮನೆಯ ವಾಸ್ತುಶಿಲ್ಪದ ಕೆಲಸ ಮಾಡುತ್ತಿರುವವರು ಈ ವಾಸ್ತುಶಿಲ್ಪಿಗೆ ಯಾರೊಂದಿಗೆ ಹತ್ತಿರವಿದ್ದಾರೆ. ಎಲ್ಲವೂ ತನಿಖೆ ಆಗಬೇಕು. ತನಿಖೆಯಾದರೆ ಎಲ್ಲವೂ ಬಯಲಾಗುತ್ತೆ ಎಂದರು.

Latest Videos

undefined

ಐಟಿ ದಾಳಿ ವೇಳೆ ಸಿಕ್ಕ ಹಣಕ್ಕೆ ಮೈಸೂರಿನ ನಂಟು ಇದೆಯಾ? ಅದು ಕೂಡ ತನಿಖೆಯಾಗಲಿ. ಪಂಚ ರಾಜ್ಯಗಳ ಎಲೆಕ್ಷನ್ ನಲ್ಲಿ ಹೈಕಮಾಂಡ್ ಹಣ ಕೇಳಿಲ್ಲ ಅಂತಾರೆ. ಕೇಳದೇನೆ ಇಷ್ಟೊಂದು ಹಣ ಕಲೆಕ್ಷನ್ ಮಾಡ್ತಿದ್ದಾರೆ? ಇನ್ನೂ ಹೈಕಮಾಂಡ್ ಕೇಳಿದ್ರೆ ಎಷ್ಟೊಂದು ಕಲೆಕ್ಷನ್ ಮಾಡ್ತಿದ್ರು? ರಾಜ್ಯದಲ್ಲಿ ಈಗ ಜಿಎಸ್ಟಿ ‌ಕಲೆಕ್ಷನ್ ಗಿಂತ ಎಸ್ಎಸ್ಟಿ ಮತ್ತು ವೈಎಸ್ಟಿ ಟ್ಯಾಕ್ಸ್ ಕಲೆಕ್ಷನ್ ಜೋರಾಗಿ ನಡೆಯುತ್ತಿದೆ ಎಂದು ಅವರು ದೂರಿದರು.

ಕಾವೇರಿ ಜಲ ವಿವಾದ: ನಾಳೆ ದಿಲ್ಲಿಯಲ್ಲಿ ಕರವೇ ಬೃಹತ್ ಹೋರಾಟ: ನಾರಾಯಣಗೌಡ

ರಾಜ್ಯ ಕಂಡ ಅತ್ಯಂತ ಭ್ರಷ್ಟ ಸರ್ಕಾರವಿದು

ರಾಜ್ಯ ಕಂಡ ಅತ್ಯಂತ ಭ್ರಷ್ಟ ಸರ್ಕಾರವಿದು. ಜನ ಭಾರೀ ನಿರೀಕ್ಷೆಯಿಂದ ಇವರನ್ನು ಗೆಲ್ಲಿಸಿದರಲ್ಲ. ಜನರೇ ತಿರುಗಿ ಬೀಳೋ ಕಾಲ ದೂರವಿಲ್ಲ. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ್ವಿ. ನುಡಿದಂತೆ ನಡೆದಿದ್ದೇವೆ ಅಂತಾರಲ್ಲ. ರಾಜ್ಯದಲ್ಲಿ ಬೇರೆ ಅಭಿವೃದ್ಧಿ ಕೆಲಸಗಳು ಏನಾದರೂ ಆಗುತ್ತಿದೆಯಾ? ಹೊಸತಾಗಿ ಗೆದ್ದ ಶಾಸಕರು ಕ್ಷೇತ್ರದ ಕಡೆ ತಲೆ ಹಾಕುತ್ತಿಲ್ಲ. ಜನರ ಪ್ರಶ್ನೆಗೆ ಉತ್ತರಿಸಲು ಆಗುತ್ತಿಲ್ಲ ಅಂತಾ ಗೋಳಾಡುತ್ತಿದ್ದರು ಎಂದು ಅವರು ಆರೋಪಿಸಿದರು.

ನಾನು ಸತ್ಯ ಹರಿಶ್ಚಂದ್ರ, ಸಿದ್ದ ಪುರುಷ ಅಂತಾ ಹೇಳುವ ಸಿಎಂ ಐಟಿ ದಾಳಿ ಬಗ್ಗೆ ತನಿಖೆ ಮಾಡಿಸಲಿ. ಇವರು ತನಿಖೆ ಮಾಡಿದರೇ ಏನಾಗುತ್ತೆ ಅಂತಾ ನಮಗೂ ಗೊತ್ತು. ರಾಜ್ಯಪಾಲರಿಗೆ ಕೃಷಿ‌ ಇಲಾಖೆ ಅಧಿಕಾರಿಗಳು ಪತ್ರ ಬರೆದ ಪ್ರಕರಣ ಬಗ್ಗೆ ತನಿಖೆ ಮಾಡಿಸಿದ್ದೀರಲ್ಲ ಏನಾಯಿತು? ನಾಗಮಂಗಲ ಬಸ್ ಕಂಡಕ್ಟರ್ ವಿಷ ಕುಡಿದ ಪ್ರಕರಣದಲ್ಲಿ ಎಲ್ಲೆಲ್ಲಿ ಯಾರ್ಯಾರನ್ನ ಅಡ್ಜೆಸ್ಟ್ ಮಾಡಿಕೊಳ್ತಿದ್ದೀರಾ ಅನ್ನೋದು ನನಗೂ ಗೊತ್ತಿದೆ.

ನಾವು ಸತ್ಯಹರಿಶ್ಚಂದ್ರರು ಅಂತಾ ಹೇಳುವವರು ಐಟಿ ದಾಳಿಯಲ್ಲಿ ಸಿಕ್ಕ ಹಣದ ಬಗ್ಗೆ ಹೇಳಲಿ. ಐಟಿ ದಾಳಿ ‌ಮಾಡುವಾಗ ನಿಮ್ಮ ರಾಜ್ಯದ ಅಧಿಕಾರಿಗಳು ಇರೋದಿಲ್ವಾ? ಅವರಿಗೂ ಮಾಹಿತಿ ಇರುತ್ತೆ. ಅವರಿಂದಲಾದರೂ ಮಾಹಿತಿ ಪಡೆದು ಸತ್ಯಾಂಶ ಹೇಳಿ. ಐಟಿ ದಾಳಿಯಲ್ಲಿ ಸಿಕ್ಕ 100 ಕೋಟಿ ಹಣ ಜನರ ತೆರಿಗೆ ಹಣ. ಇದು ಯಾವುದೋ ಗುತ್ತಿಗೆದಾರ ಅಥವಾ ಬೇರೆ ವ್ಯಕ್ತಿಗೆ ಸೇರಿದ್ದಲ್ಲ. ಅವೆಲ್ಲಾ ಸುಮ್ಮನೆ. ಹಣ ಯಾರಿಗೆ ಸೇರಿದ್ದೆಂದು ಸರಿಯಾಗಿ ತನಿಖೆಯಾದರೆ ಇವರ ಬಣ್ಣ ಬಯಲಾಗುತ್ತೆ ಎಂದು ಅವರು ವಾಗ್ದಾಳಿ ನಡೆಸಿದರು.

ಹಾಲಿ ಇರುವ ಐವರ ಬದಲಾವಣೆ ಕಾಂಗ್ರೆಸ್ಸಿಗೆ ಹೊಸ ಕಾರ್ಯಾಧ್ಯಕ್ಷರು?

ದಸರಾ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಪಂಡಿತ್ ರಾಜೀವ್ ತಾರಾನಾಥರ ಬಳಿ 3 ಲಕ್ಷ ಲಂಚ ಕೇಳಿದ ಪ್ರಕರಣದಲ್ಲಿ ಅಧಿಕಾರಿ ಲಂಚ ಕೇಳೋಕೆ ಕಾರಣ ಯಾರು? ಆ ಅಧಿಕಾರಿ ಭಾರಿ ಲಂಚ ಕೊಟ್ಟು ಇಲ್ಲಿಗೆ ಬಂದಿದ್ದಾನೆ. ಅದಕ್ಕೆ ಲಂಚ ಕೇಳಿದ್ದಾನೆ. ಸರ್ಕಾರದಲ್ಲಿ ಭ್ರಷ್ಟಾಚಾರ ಯಾವ ಹಂತ ತಲುಪಿದೆ ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ?

- ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

click me!