Odisha Train Accident: ಬೆಂಗಳೂರಿನಿಂದ ಹೌರಗೆ ಮತ್ತೆ ರೈಲು ಸಂಚಾರ ಆರಂಭ, SMVTಯಿಂದ ಹೊರಟ 3 ರೈಲು

By Gowthami K  |  First Published Jun 4, 2023, 1:45 PM IST

ಒಡಿಶಾ ಭೀಕರ ರೈಲು ದುರಂತದ ನಂತರ ಸ್ಥಗಿತಗೊಂಡಿದ್ದ ರೈಲು ಸಂಚಾರ ಮತ್ತೆ ಒಂದೊಂದಾಗಿ ಆರಂಭಗೊಂಡಿದೆ. ಬೆಂಗಳೂರಿನಿಂದ ಮೂರು ರೈಲುಗಳು ಸಂಚಾರ ಆರಂಭಿಸಿದೆ.


ಬೆಂಗಳೂರು (ಜೂ.4): ಒಡಿಶಾ ಭೀಕರ ರೈಲು ದುರಂತ ಪ್ರಕರಣ ಹಿನ್ನೆಲೆ ರೈಲು ಸಂಚಾರ ಸ್ಥಗಿತಗೊಳಿಸಿದ್ದ ರೈಲ್ವೆ ಇಲಾಖೆ ಮತ್ತೆ ಒಂದೊಂದೇ ರೈಲು ಸಂಚಾರಕ್ಕೆ ಅನುಮತಿ ನಿಡುತ್ತಿದೆ. ಸದ್ಯ ರೈಲ್ವೆ ಹಳಿಯ ಮೇಲೆ ಬಿದ್ದಿದ್ದ ಬೋಗಿಗಳನ್ನ ಕ್ಲಿಯರ್  ಮಾಡಿ, ಹಳಿಗಳನ್ನು ಸಮರ್ಪಕವಾಗಿ ಜೋಡಣೆ ಮಾಡಿದ ಬೆನ್ನಲ್ಲೇ ಮತ್ತೆ ವಿವಿಧ ಭಾಗಗಳಿಂದ ಒಡಿಶಾ ಮಾರ್ಗವಾಗಿ ರೈಲ್ವೆ ಸಂಚಾರ ಆರಂಭಗೊಂಡಿದೆ. ಇದರ ಬೆನ್ನಲ್ಲೇ  ಬೆಂಗಳೂರಿನ ಬೈಯಪ್ಪನಹಳ್ಳಿ SVMT ರೈಲ್ವೆ ನಿಲ್ದಾಣದಿಂದ 3 ರೈಲು ಹೊರಡುತ್ತಿದೆ.   ಅಪಘಾತದ ಹಿನ್ನೆಲೆ ನಿನ್ನೆ ಬೆಂಗಳೂರಿನ  8 ರೈಲು ಸ್ಥಗಿತಗೊಳಿಸಲಾಗಿತ್ತು. 

Odisha Train Accident Reason: ಒಡಿಶಾ ರೈಲು ಅಪಘಾತಕ್ಕೆ ಕಾರಣ ಪತ್ತೆ!

Tap to resize

Latest Videos

ಯಾವೆಲ್ಲ ಮೂರು ರೈಲು ಹೊರಟಿದೆ:
1. ರೈಲು ಸಂಖ್ಯೆ 22305,  SMVT ರೈಲ್ವೆ ನಿಲ್ದಾಣದಿಂದ JSME ಗೆ(ಜಾರ್ಖಂಡ್) ಹೊರಟಿರುವ ರೈಲು. ಇದು ಬೆಳಿಗ್ಗೆ 10 ಗಂಟೆಗೆ ಇತ್ತು. ತಡವಾಗಿ  ಇಂದು ಮಧ್ಯಾಹ್ನ 12.30 ಕ್ಕೆ ಬೈಯಪ್ಪನಹಳ್ಳಿಯಿಂದ ಹೊರಟಿದೆ.

2. ರೈಲು ಸಂಖ್ಯೆ 12864 ಬೈಯಪ್ಪನಹಳ್ಳಿ SMVT ಯಿಂದ ಹೌರಗೆ ಹೊರಟಿರುವ ರೈಲು. ಬೈಯಪ್ಪನಹಳ್ಳಿಯಿಂದ ಬೆಳಿಗ್ಗೆ 10.35 ಕ್ಕೆ ಇದ್ದ ರೈಲು ಮಧ್ಯಾಹ್ನ 1 ಗಂಟೆಗೆ ಹೊರಟಿದೆ.

3. ರೈಲು ಸಂಖ್ಯೆ 12246 ಬೈಯಪ್ಪನಹಳ್ಳಿ SMVT ಯಿಂದ ಹೌರ ಗೆ ಹೊರಟಿರುವ ರೈಲು ಇದು ಬೈಯಪ್ಪನಹಳ್ಳಿಯಿಂದ ಬೆಳಿಗ್ಗೆ 11.20 ಕ್ಕೆ ಹೊರಡಬೇಕಿತ್ತು.  ಮಧ್ಯಾಹ್ನ 1.30 ಕ್ಕೆ  ಹೊರಟಿದೆ. 

1.30 ಕ್ಕೆ ಬೈಯಪ್ಪನಹಳ್ಳಿಯಿಂದ ಹೊರಡಬೇಕಿದ್ದ ಹೌರ ಬೆಂಗಳೂರು ಎಕ್ಸ್‌ಪ್ರೆಸ್‌ ಸ್ವಲ್ಪ ತಡವಾಗಿ ಹೊರಟಿದೆ. ಹೌರ ರೈಲಿನಲ್ಲಿ  1500  ಪ್ರಯಾಣಿಕರು ಇಂದು ಹೊರಟಿದ್ದಾರೆ. ಬೈಯಪ್ಪನಹಳ್ಳಿಯಿಂದ ಮಧ್ಯಾಹ್ನ 1.44 ಕ್ಕೆ ಹೊರಟಿದೆ. ನಾಳೆ ಸಂಜೆ 7.30 ರಿಂದ ರಾತ್ರಿ 8 ಗಂಟೆಗೆ ಹೌರಾ ತಲುಪಲಿದೆ.

Odisha Train Tragedy: ಚಿಕ್ಕಮಗಳೂರಿನ 110 ಜೈನ ಯಾತ್ರಾರ್ಥಿಗಳು ಬದುಕಿರುವುದಕ್ಕೆ ತಿರುವೇ ವಿಶಾಪಟ್ಟಣಂ!

ಹೀಗಾಗಿ ಒಡಿಶಾ ರೈಲು ದುರಂತದ ನಂತರ ಬೈಯಪ್ಪನ ಹಳ್ಳಿಯಿಂದ ಮೊದಲ ರೈಲು ಹೌರಗೆ ಹೊರಟಿದೆ. ಈ ನಡುವೆ ಹೈದರಾಬಾದ್, ಚೆನ್ನೈ, ಬೆಂಗಳೂರು, ಕೋಲ್ಕತ್ತಾ ಮತ್ತು ರಾಂಚಿಯಿಂದ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹೇಳಿಕೆ ನೀಡಿದ್ದು, ಇಂದು 12:05 ಗಂಟೆಗೆ ಪ್ರಮುಖ ಹಳಿಯನ್ನು ಅನ್ನು ಸರಿ ಪಡಿಸಲಾಗಿದೆ ಎಂದು ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದಾರೆ.
 

click me!