
ಬೆಂಗಳೂರು(ಜ.15): ದೇಶದ ನಾಲ್ಕು ಪ್ರಮುಖ ನಗರಗಳಾದ ಮುಂಬೈ, ಬೆಂಗಳೂರು, ದೆಹಲಿ ಹಾಗೂ ಪುಣೆಯಲ್ಲಿ ವಾಹನ ದಟ್ಟಣೆ ಕೊರೋನಾ ಪೂರ್ವ ಸ್ಥಿತಿಗೆ ಮರಳಿದ್ದು, ಬೆಂಗಳೂರು ವಿಶ್ವದಲ್ಲೇ 6ನೇ ಅತ್ಯಂತ ವಾಹನ ದಟ್ಟಣೆ ಇರುವ ನಗರ ಎನಿಸಿಕೊಂಡಿದೆ.
ಟಾಮ್ ಟಾಮ್ ಟ್ರಾಫಿಕ್ ಇಂಡೆಕ್ಸ್‌ನ 2020ರ ವರದಿಯ ಪ್ರಕಾರ, ವಿಶ್ವದ ಅಗ್ರ 10 ವಾಹನ ದಟ್ಟಣೆ ಇರುವ ನಗರಗಳ ಪೈಕಿ ಭಾರತದ ಮೂರು ನಗರಗಳು ಸ್ಥಾನ ಪಡೆದುಕೊಂಡಿವೆ. ಮುಂಬೈ ವಿಶ್ವದಲ್ಲೇ 2ನೇ ಅತಿ ಹೆಚ್ಚು ವಾಹನ ದಟ್ಟಣೆಯ ನಗರ ಎನಿಸಿಕೊಂಡಿದ್ದರೆ, ಬೆಂಗಳೂರು 6ನೇ ಹಾಗೂ ದೆಹಲಿ 8ನೇ ಸ್ಥಾನ ಪಡೆದಿದೆ. ಈ ಪಟ್ಟಿಯಲ್ಲಿ ಪುಣೆ 16ನೇ ಸ್ಥಾನದಲ್ಲಿದೆ. ರಷ್ಯಾದ ಮಾಸ್ಕೋ ವಿಶ್ವದಲ್ಲೇ ಅತಿ ಹೆಚ್ಚು ವಾಹನ ದಟ್ಟಣೆ ಇರುವ ನಗರ ಎನಿಸಿಕೊಂಡಿದೆ. 2020ರಲ್ಲಿ ವಿಶ್ವದ 56 ದೇಶಗಳ 416 ನಗರಗಳಲ್ಲಿ ಇದ್ದ ವಾಹನ ದಟ್ಟಣೆಯ ಪ್ರಮಾಣವನ್ನು ಅಧ್ಯಯನ ನಡೆಸಿ ಶ್ರೇಯಾಂಕವನ್ನು ಪ್ರಕಟಿಸಲಾಗಿದೆ.
ಬೆಂಗಳೂರು ವಿಶ್ವದ ನಂ.1 ಅತೀವೇಗದ ಟೆಕ್ನಾಲಜಿ ಹಬ್..!
2019ರಲ್ಲಿ ಬೆಂಗಳೂರು ವಾಹನ ದಟ್ಟಣೆಯಲ್ಲಿ ವಿಶ್ವದಲ್ಲೇ ನಂ.1 ಸ್ಥಾನ ಪಡೆದಿತ್ತು. ಆದರೆ, ಕೊರೋನಾದಿಂದಾಗಿ ಬೆಂಗಳೂರಿನಲ್ಲಿ ವಾಹನ ದಟ್ಟಣೆ ಶೇ.20ರಷ್ಟು ಇಳಿಕೆ ಕಂಡಿದೆ. ಆದಾಗ್ಯೂ ವಿಶ್ವದ ಅತಿ ಹೆಚ್ಚಿನ ವಾಹನ ದಟ್ಟಣೆ ಇರುವ ನಗರಗಳಲ್ಲಿ ಬೆಂಗಳೂರು ಸ್ಥಾನ ಪಡೆದಿದೆ. ಅದೇ ದೆಹಲಿಯಲ್ಲಿ ವಾಹನ ದಟ್ಟಣೆ ಶೇ.9ರಷ್ಟು ಇಳಿಕೆ ಆಗಿದೆ ಎಂದು ವರದಿ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ