ಧಾರ್ಮಿಕ ಸ್ಥಳದಲ್ಲಿ ಧ್ವನಿವರ್ಧಕ ಬಳಕೆ: ಹೈಕೋರ್ಟ್ ಮಹತ್ವದ ತೀರ್ಪು

By Suvarna NewsFirst Published Jan 13, 2021, 4:39 PM IST
Highlights

ಧಾರ್ಮಿಕ ಸ್ಥಳದಲ್ಲಿ ಪರವಾನಿಗೆ ಇಲ್ಲದೇ ಧ್ವನಿವರ್ಧಕ ಬಳಕೆ|  ಪರವಾನಿಗೆ ಇಲ್ಲದೇ ಧ್ವನಿವರ್ಧಕ ಬಳಸಿದ್ರೆ ಕ್ರಮ: ಹೈಕೋರ್ಟ್ ಮಹತ್ವದ ತೀರ್ಪು| 

ಬೆಂಗಳೂರು(ಜ.13): ಅನುಮತಿ ಇಲ್ಲದೇ ಹಾಗೂ ನಿಯಮಗಳನ್ನು ಉಲ್ಲಂಘಿಸಿ ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ಬಳಸುತ್ತಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ KSPCB ಹಾಗೂ ರಾಜ್ಯ ಪೊಲೀಸ್ ಇಲಾಖೆಗೆ ಸೂಚಿಸಿ ಎಂದು ಕರ್ನಾಟಕ ಹೈಕೋರ್ಟ್, ಸರ್ಕಾರಕ್ಕೆ ಆದೇಶಿಸಿದೆ.

ಬೆಂಗಳೂರಿನ ನಿವಾಸಿ ಗಿರೀಶ್ ಭಾರದ್ವಾಜ್ ಎನ್‌ನುವವರು ಸಾರ್ವಜನಿಕ ಹಿತಾಸಕ್ತಿಯಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಹಾಗೂ ಜಸ್ಟೀಸ್ ಸಚಿನ್ ಶಂಕರ್ ನೇತೃತ್ವದ ದ್ವಿಸದಸ್ಯ ಪೀಠ ಇಂತಹುದ್ದೊಂದು ಮಹತ್ವದ ಆದೇಶ ಹೊರಡಿಸಿದೆ. 

ಭಾರತೀಯ ಸಂವಿಧಾನದ ಆರ್ಟಿಕಲ್ 21ರನ್ವಯ ರಾಜ್ಯ ಸರ್ಕಾರ ನಾಗರಿಕರ ಹಕ್ಕು ರಕ್ಷಣೆ ಮಾಡಬೇಕೆಂದೂ ಹೇಳಿದೆ.  2000ರದ ಶಬ್ಧ ಮಾಲಿನ್ಯ ನಿಯಮ ಉಲ್ಲಂಘಿಸಿ ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ಬಳಸಲಾಗುತ್ತಿದೆ ಎಂಬ ವಿಚಾರ ಉಲ್ಲೇಖಿಸಿ ಅನೇಕ ಸಾರ್ವಜಮಿಕ ಹಿತಾಸಕ್ತಿಗಳು ಸಲ್ಲಿಕೆಯಾಗಿದ್ದವು. ಅಲ್ಲದೇ ಸರ್ಕಾರ ಇವನ್ನು ತಡೆಯುವಲ್ಲಿ ವಿಫಲವಾಗಿವೆ ಎಂದೂ ತಿಳಿಸಿದ್ದವು. 

ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ತೀರ್ಪು ನೀಡಿರುವ ಹೈಕೋರ್ಟ್ ಸರ್ಕಾರಕ್ಕೆ ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.

click me!