ಸರ್ಕಾರದ ನಿರ್ಲಕ್ಷ್ಯ, ಆಸ್ಪತ್ರೆಗಳ ಅವ್ಯವಸ್ಥೆ: ಹೋಂ ಐಸೋಲೇಷನ್‌ ಮೊರಿ ಹೋದ ಸಿಟಿ ಮಂದಿ

By Suvarna NewsFirst Published Jul 25, 2020, 2:49 PM IST
Highlights

ಕೊರೋನಾ ಸೋಂಕಿತರನ್ನ ಪ್ರಾಣಿಗಳಿಗಿಂತಲೂ ಕೀಳಾಗಿ ನೋಡಲಾಗುತ್ತಿದ್ದು, ಕೊರೋನಾ ಕಾಲಿಟ್ಟಾಗಿನಿಂದ ಜನ ನರಕ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಟಿ ಮಂದಿ ಆಸ್ಪತ್ರೆಗಳ ಸಹಾವಾಸ ಬೇಡವೇ ಬೇಡ ಎನ್ನುತ್ತಿದ್ದಾರೆ. 

ಬೆಂಗಳೂರು, (ಜುಲೈ.25): ಸರ್ಕಾರದ ನಿರ್ಲಕ್ಷ್ಯ ಮತ್ತು ಆಸ್ಪತ್ರೆಗಳ ಅವ್ಯವಸ್ಥೆಯಿಂದ ಕೊರೋನಾ ಸೋಂಕಿತರು ನರಕ ಅನುಭವಿಸುತ್ತಿದ್ದಾರೆ. ಈ ಹಿನ್ನೆಯಲ್ಲಿ ಆಸ್ಪತ್ರೆಗಳ ಸಹವಾಸ ಬೇಡವೇ ಬೇಡ ಎಂದು ಬೆಂಗಳೂರು ಜನ ಹೋಂ ಐಸೋಲೇಷನ್ ಮೊರೆ ಹೋಗಿದ್ದಾರೆ.

ಹೌದು...ನಗರದ ಕೊರೋನಾ ಆಸ್ಪತ್ತೆಗಳಲ್ಲಿ ಅವ್ಯವಸ್ಥೆ ಹಿನ್ನೆಲೆಯಲ್ಲಿ ಬೆಂಗಳೂರಿನ ಹೆಚ್ಚಿನ ಸೋಂಕಿತರು ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋವಿಡ್‌ ಮಟ್ಟ ಹಾಕಲು ಬಂದಿದೆ ಒಂದೆರಡಲ್ಲ, ನಾಲ್ಕು ಔಷಧಗಳು..!

ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಮಸ್ಯೆ ಉಂಟಾಗಿದ್ದರಿಂದ ರಾಜ್ಯ ಸರ್ಕಾರ ಕೋವಿಡ್‌ ರೋಗಿಗಳ ಮನೆ ಆರೈಕೆಗೆ ಅವಕಾಶ ಮಾಡಿಕೊಟ್ಟಿದೆ.ಇದರಿಂದ ಬೆಂಗಳೂರಿಗರು ಕೂಡ  ಮನೆ ಆರೈಕೆಗೆ ಆದ್ಯತೆ ನೀಡುತ್ತಿದ್ದು, ಸದ್ಯ ಕೊರೋನಾ ಸೋಂಕಿತರಲ್ಲಿ 10,319 ಮಂದಿಗೆ ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ನಗರದಲ್ಲಿ ನಾಲ್ಕನೇ ಹಂತದ ಲಾಕ್‌ಡೌನ್ ಅಂತ್ಯವಾಗುವ ವೇಳೆ 3,221 ಪ್ರಕರಣಗಳು ಪತ್ತೆಯಾಗಿದ್ದವು. ಲಾಕ್ ಡೌನ್ ಸಡಿಲಿಕೆ ಬಳಿಕ ಸೋಂಕಿತರ ಸಂಖ್ಯೆ ಏಕಾಏಕಿ ಹೆಚ್ಚಳವಾಗಿರುವ ಪರಿಣಾಮ ಕೋವಿಡ್ ಆಸ್ಪತ್ರೆಗಳೆಲ್ಲವೂ ಭರ್ತಿಯಾಗಿದ್ದು, ಉಳಿದ ಆಸ್ಪತ್ರೆಗಳಲ್ಲೂ ಹಾಸಿಗೆಗಳ ಸಮಸ್ಯೆ ಎದುರಾಗಿದೆ. ಹಾಗಾಗಿ ರೋಗ ಲಕ್ಷಣ ಇಲ್ಲದಿರುವವರಿಗೆ ಮನೆಯಲ್ಲಿಯೇ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗಿದೆ.

ಬೆಂಗ್ಳೂರಿನ ಈ ಏರಿಯಾಗಳಲ್ಲಿ ಹೋಂ ಐಸೋಲೇಷನ್‌ ಅವಕಾಶವಿಲ್ಲ..!

ಮನೆ ಆರೈಕೆಗೆ ಅವಕಾಶ ಕಲ್ಪಿಸಿದ್ದರಿಂದ ವೈದ್ಯರು, ಶುಶ್ರೂಷಕರು ಹಾಗೂ ಆರೋಗ್ಯ ಸಿಬ್ಬಂದಿಯ ಮೇಲಿನ ಒತ್ತಡ ಕಡಿಮೆಯಾಗಿದೆ. ಅಲ್ಲದೇ ಸರ್ಕಾರದ ಬೊಕ್ಕಸಕ್ಕೆ ಕೂಡ ಹೊರೆ ಇಳಿಕೆಯಾಗಿದೆ.

ಆಯುಷ್ಮಾನ್ ಭಾರತ್–ಆರೋಗ್ಯ ಕರ್ನಾಟಕ ಯೋಜನೆಯ ಫಲಾನುಭವಿಗಳು ಖಾಸಗಿ ಆಸ್ಪತ್ರೆಗೆ ದಾಖಲಾದಲ್ಲಿ ಸರ್ಕಾರವೇ ದಿನಕ್ಕೆ 5,200 ರೂಪಾಯಿ ಪಾವತಿಸಬೇಕಾಗಿತ್ತು.

click me!