ಬೆಂಗಳೂರಿನ ಹಲವೆಡೆ ವರುಣ ಅಬ್ಬರಿಸಿದ್ದು, ಆಲಿಕಲ್ಲು ಮಳೆಯಾಗಿದೆ. ಯಲಹಂಕದಲ್ಲಿ ರಸ್ತೆಗಳು ಜಲಾವೃತವಾಗಿ, ಸಂಚಾರ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಮರಗಳು ಧರೆಗುರುಳಿದ್ದು, ಗೋಡೆ ಕುಸಿದಿದೆ.
ರಾಜ್ಯದ ರಾಜಧಾನಿ ಬೆಂಗಳೂರಿನ ಹಲವು ಕಡೆ ವರುಣ ಧರೆಗೆ ಅಪ್ಪಳಿಸಿದ್ದಾನೆ. ಬಿಸಿ ಗಾಳಿ, ತಪಮಾನದಲ್ಲಿನ ಭಾರಿ ಏರಿಕೆಯಿಂದಾಗಿ ಕಾದ ಕಾವಲಿಯಾಗಿದ್ದ ನಗರಕ್ಕೆ ತಂಪಿನ ಅನುಭವವಾಯ್ತು. ಮಾತ್ರವಲ್ಲ ಅವಾಂತರವೂ ಅಷ್ಟೇ ಆಗಿದೆ. ಬೆಂಗಳೂರಿನ ಹಲವು ಕಡೆ ಆಲಿಕಲ್ಲು ಮಳೆ ಕೂಡ ಆಗಿದೆ.
ಯಲಹಂಕದಲ್ಲಿ ಜೋರು ಮಳೆಯಾಗಿದೆ. ಅರ್ಧಗಂಟೆಯಿಂದ ಗಾಳಿ ಸಹಿತ ಸುರಿಯುತ್ತಿರುವ ಮಳೆಗೆ ಅವಾಂತರ ಸೃಷ್ಟಿಯಾಗಿದೆ. ರಸ್ತೆಗಳು ಸಂಪೂರ್ಣ ಜಲಾವೃತವಾಗಿ ಸಂಚಾರ ಕಷ್ಟವಾಗಿದೆ.
ಹೆಬ್ಬಾಳ, ಮೇಕ್ರಿ ಸರ್ಕಲ್, ಯಲಹಂಕ ಭಾಗದಲ್ಲಿ ಮಳೆಯಿಂದ ಟ್ರಾಫಿಕ್ ಸಮಸ್ಯೆಯಾಗಿದೆ.ಯಲಹಂಕ ವಿದ್ಯಾರಣ್ಯಪುರ ಪೊಲೀಸ್ ಠಾಣೆ ಬಳಿ ಮರ ಧರೆಗುರುಳಿದೆ. ಇನ್ನು ಬೇಸಿಗೆ ಮಳೆಗೆ ಯಲಹಂಕ ಬ್ಯಾಟರಾಯನಪುರದ 6 ನೇ ಮುಖ್ಯ ರಸ್ತೆಯಲ್ಲಿ ಬಳಿ ಇರೋ ಎಲ್ ಅಂಡ್ ಟಿ ಕಾಂಪೌಂಡ್ ಗೋಡೆ ಕುಸಿತವಾಗಿದೆ.
ಅಮೇಜಾನ್ ಕಾಡು ಕಡಿದು ಜಾಗತಿಕ ಪರಿಸರ ಸಮ್ಮೇಳನ!
ಯಲಹಂಕದ ಓಲ್ಡ್ ಟೌನ್ ನಲ್ಲಿ 10 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ವ್ಯಕ್ತಿಯೋರ್ವ ರಾಜಕಾಲುವೆಗೆ ಮಣ್ಣು ತುಂಬಿದ್ದು, ಇದೇ ರಾಜಕಾಲುವೆ ತುಂಬಿ ಮನೆಗಳಿಗೆ ನೀರು ನುಗ್ಗಿದೆ. ಇನ್ನು ನಾಗವಾರ ಕಡೆಯಿಂದ ಹೆಬ್ಬಾಳ ಕಡೆಗೆ ಮಳೆ ನೀರು ನಿಂತಿರುವುದರಿಂದ ತೀವ್ರ ಸಂಚಾರ ದಟ್ಟಣೆ ಎದುರಾಗಿದೆ.
ಮುಂದಿನ 1 ವಾರಗಳ ಕಾಲ ಕರ್ನಾಟಕದ ಹಲವು ಕಡೆ ವರುಣನ ಆರ್ಭಟ ಇರಲಿದೆ ಎಂದು ವರದಿಯಾಗಿದೆ. ಇನ್ನು ಬೆಂಗಳೂರಿನ ಹೊರ ಜಿಲ್ಲೆಗಳಾದ ಕೊಡಗು, ಕೋಲಾರ, ಚಿಕ್ಕಮಗಳೂರಿನಲ್ಲಿ ಸುಮಾರು 1 ಗಂಟೆಗೂ ಹೆಚ್ಚು ಕಾಲ ಮಳೆಯಾಗಿದೆ.
ಧಾರಾಕಾರ ಮಳೆಗೆ ಇರಾನ್‌ನಲ್ಲಿ 'ರಕ್ತದ ಹೊಳೆ' : ವೀಡಿಯೋ ವೈರಲ್
ಸಂಚಾರ ಸಲಹೆ:
ಈ ಕೆಳಕಂಡ ಸ್ಥಳಗಳಲ್ಲಿ ಮಳೆ ನೀರು ನಿಂತಿರುವುದರಿಂದ ನಿಧಾನಗತಿಯ ಸಂಚಾರವಿರುತ್ತದೆ,
1.ಕೋಗಿಲು ಮೇಲ್ಸೇತುವೆ , ನಗರದ ಕಡೆಗೆ
2.ಪುಟ್ಟೇನಹಳ್ಳಿ ,ನಗರದ ಕಡೆಗೆ
3.ಮಧರವುಡ್,ನಗರದ ಕಡೆಗೆ
4.ಕಸ್ತೂರಿ ನಗರ , ಎಂ ಎಂ ಟಿ (ಟಿನ್ ಪ್ಯಾಕ್ಟರಿ) ಕಡೆಗೆ
5.ಸ್ಪರ್ಶ ಆಸ್ಪತ್ರೆ ,ನಗರದ ಕಡೆಗೆ