
ಬೆಂಗಳೂರು (ಜೂ.8) : ಆರ್‌ಸಿಬಿ ವಿಜಯೋತ್ಸವ ಸಮಯದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಮೃತರಾದ ಎಲ್ಲಾ 11 ಮಂದಿ ಕುಟುಂಬದವರಿಗೆ ಘೋಷಿಸಿದ್ದ ಪರಿಹಾರ ಮೊತ್ತವನ್ನು ತಲಾ 25 ಲಕ್ಷ ರು.ಗಳಿಗೆ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಕಾರ್ಯದರ್ಶಿ ಅವರಿಗೆ ಸೂಚಿಸಿದ್ದಾರೆ.
ಕಾಲ್ತುಳಿತ ದುರ್ಘಟನೆ ನಡೆದ ದಿನವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೃತರ ಕುಟುಂಬದವರಿಗೆ ತಲಾ 10 ಲಕ್ಷ ರು. ಪರಿಹಾರ ಘೋಷಿಸಿದ್ದರು. ಇದೀಗ ಈ ಪರಿಹಾರ ಮೊತ್ತವನ್ನು ತಲಾ 25 ಲಕ್ಷ ರು.ಗಳಿಗೆ ಹೆಚ್ಚಿಸುವಂತೆ ಮುಖ್ಯಮಂತ್ರಿ ಅವರು ಶನಿವಾರ ಆದೇಶಿಸಿದ್ದಾರೆ.
ಸರ್ಕಾರದ ಜೊತೆಗೆ ಮೃತರ ಕುಟುಂಬಗಳಿಗೆ ಈಗಾಗಲೇ ಆರ್‌ಸಿಬಿ ಪ್ರಾಂಚೈಸಿ ತಲಾ 10 ಲಕ್ಷ ರು. ಮತ್ತು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್‌ನವರು ತಲಾ 5 ಲಕ್ಷ ರು. ಪರಿಹಾರ ಘೋಷಿಸಿದೆ.
ಘಟನೆ ಬಗ್ಗೆ ತೀವ್ರವಾಗಿ ಮನನೊಂದಿರುವ ಮುಖ್ಯಮಂತ್ರಿ ಅವರು, ಮೃತರ ಕುಟುಂಬಗಳಿಗೆ ಸರ್ಕಾರ ಎಷ್ಟೇ ಸಾಂತ್ವನ ಹೇಳಬಹುದು. ಸರ್ಕಾರ ನಿಮ್ಮೊಂದಿಗೆ ಇರುತ್ತದೆ ಎಂದು ಹೇಳಬಹುದು. ಇದರಿಂದ ಮಾನಸಿಕವಾಗಿ ಕೊಂಚ ಸಮಾಧಾನ ಆಗಬಹುದಾದರೂ ಭವಿಷ್ಯದ ಜೀವನಕ್ಕೆ ಆರ್ಥಿಕವಾಗಿ ನೆರವಾಗಲು ಹೆಚ್ಚಿನ ಪರಿಹಾರ ನೀಡುವುದು ಸರಿಯಾದ ಮಾರ್ಗ ಎಂದು ಪರಿಹಾರ ಹೆಚ್ಚಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ