5 ಕೋಟಿ ಡೀಲ್‌, ದ್ವೇಷ ಭಾಷಣ ಮಾಡುವ ಚೈತ್ರಾ ಕುಂದಾಪುರ ಬಂಧನಕ್ಕೂ ಮುನ್ನ ಇದ್ದಿದ್ದು ಮುಸ್ಲಿಂರ ಮನೆಯಲ್ಲಿ!

By Gowthami K  |  First Published Sep 13, 2023, 10:04 AM IST

ಸಿಸಿಬಿಯಿಂದ ಚೈತ್ರಾ ಕುಂದಾಪುರ ಬಂಧನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಸದಾ ಮುಸ್ಲೀಂರ ಮೇಲೆ ದ್ವೇಷ ಕಾರೋ ಭಾಷಣ ಮಾಡುವ ಚೈತ್ರಾ ಆಶ್ರಯ ಪಡೆದಿದ್ದು ಮುಸ್ಲಿಂ ಭಾಂದವರ ಮನೆಯಲ್ಲಿ ಎಂಬುದು ಬಹಿರಂಗವಾಗಿದೆ.


ಮಂಗಳೂರು (ಸೆ.13): ಬಿಜೆಪಿ ಎಂಎಲ್ಎ ಟಿಕೆಟ್ ಗಾಗಿ 5 ಕೋಟಿ ಡೀಲ್ ಪ್ರಕರಣ  ಆರೋಪದಡಿ ಹಿಂದೂಪರ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅವರನ್ನು ಬೆಂಗಳೂರು ಸಿಸಿಬಿ‌ ಪೊಲೀಸರು ಬಂಧಿಸಿದ್ದಾರೆ. ಉದ್ಯಮಿಯೊಬ್ಬರಿಗೆ ಕಳೆದ ವಿಧಾನಸಭೆ ಚುನಾವಣೆ ವೇಳೆ ಟಿಕೆಟ್​ ಕೊಡಿಸುವುದಾಗಿ ನಂಬಿಸಿ ಅವರಿಂದ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿರುವ ಆರೋಪದ ಮೇಲೆ ಈ ಬಂಧನವಾಗಿದೆ.

ಗೋವಿಂದಬಾಬು ಪೂಜಾರಿ ಎಂಬುವರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಕೊಡಿಸುವುದಾಗಿ  ಒಟ್ಟು 5ಕೋಟಿ ರೂಪಾಯಿ ಹಣ ಪಡೆದಿದ್ದರು ಎಂಬ ಆರೋಪವಿದೆ. ಗೋವಿಂದಬಾಬು ಪೂಜಾರಿ ಅವರಿಗೆ ಟಿಕೆಟ್​ ಸಿಗದ ಕಾರಣ ಕೊಟ್ಟ ಹಣವನ್ನು ವಾಪಸ್ಸು ಕೇಳಿದ್ದಾರೆ. ಆದರೆ ಚೈತ್ರಾ ಕುಂದಾಪುರ ಹಣ ನೀಡದೇ ವಂಚಿಸಿದ್ದಾರೆ ಎಂದು ಗೋವಿಂದಬಾಬು ಪೂಜಾರಿ ಅವರು ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಚೈತ್ರಾಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Tap to resize

Latest Videos

undefined

ಉದ್ಯಮಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ₹7 ಕೋಟಿ ವಂಚನೆ ಆರೋಪ; ಚೈತ್ರಾ ಕುಂದಾಪುರ ಪೊಲೀಸರ ವಶಕ್ಕೆ!

ಕೇಂದ್ರದ ನಾಯಕರು, ಆರೆಸ್ಸೆಸ್ ಪ್ರಮುಖರ ಹೆಸರಿನಲ್ಲಿ ಪಂಗನಾಮ ಹಾಕಿದ್ದು, ಚೈತ್ರಾ ಜೊತೆಗೆ ಶ್ರೀಕಾಂತ್ ನಾಯಕ್ ಪೆಲತ್ತೂರು,  ಗಗನ್ ಕಡೂರು, ಪ್ರಸಾದ್ ಎಂಬವರನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿಸಿಬಿ ಪೊಲೀಸರ ವಶದಲ್ಲಿರುವ ಚೈತ್ರಾ ಕುಂದಾಪುರ ಜೊತೆಗೆ ಬಂಧನವಾಗಿರುವ ಇತರರನ್ನು ಕೂಡ ಬೆಂಗಳೂರಿಗೆ ಕರೆದೊಯ್ಯಲಾಗುತ್ತಿದ್ದು, ಇಂದು ಸಂಜೆ  ಜಡ್ಜ್ ಮುಂದೆ ಹಾಜರುಪಡಿಸಲಾಗುತ್ತದೆ. ನಿನ್ನೆ ರಾತ್ರಿ ಶ್ರೀ ಕೃಷ್ಣ ಮಠದ ಬಳಿ  ಚೈತ್ರಾ ಕುಂದಾಪುರಳನ್ನು ವಶಕ್ಕೆ ಪಡೆಯಲಾಗಿತ್ತು. ವಶಕ್ಕೆ ಪಡೆದ ವೇಳೆ ಆತ್ಮಹತ್ಯೆ ನಾಟಕವಾಡಿದ್ದಳು. ಕೈ ಬಳೆ ಪಡೆದು ಉಂಗುರ ನುಂಗಲು ಯತ್ನಸಿದ್ದಳು ಎಂದು ತಿಳಿದುಬಂದಿದೆ.

ಇದೀಗ ಸಿಸಿಬಿಯಿಂದ ಚೈತ್ರಾ ಕುಂದಾಪುರ ಬಂಧನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಸದಾ ಮುಸ್ಲೀಂರ ಮೇಲೆ ದ್ವೇಷ ಕಾರೋ ಭಾಷಣ ಮಾಡುವ ಚೈತ್ರಾ ಆಶ್ರಯ ಪಡೆದಿದ್ದು ಮುಸ್ಲಿಂ ಭಾಂದವರ ಮನೆಯಲ್ಲಿ ಎಂಬುದು ಬಹಿರಂಗವಾಗಿದೆ. ಸಿಸಿಬಿ ಪೊಲೀಸರು ಅರೆಸ್ಟ್ ಮಾಡ್ತಾರೆ ಎಂದು ತಿಳಿಯುತ್ತಿದ್ದಂತೆ ಅಲರ್ಟ್ ಆಗಿದ್ದ ಚೈತ್ರಾ ಮುಸ್ಲಿಂ ಲೀಗ್ ನ ಅಂಜುಂ ಎಂಬ ಮಹಿಳೆ ಮನೆಯಲ್ಲಿ ಆಶ್ರಯ ಪಡೆದಿದ್ದರು.

ಬಿಟ್‌ ಕಾಯಿನ್‌ ಕೇಸ್‌ ವಿಚಾರಣೆಗೆ ಹ್ಯಾಕರ್‌ ಶ್ರೀಕಿಗೆ ಹೈಕೋರ್ಟ್ ವಿನಾಯಿತಿ, ಮನೆ ಮೇಲೆ ಎಸ್‌ಐಟಿ
 
ಸಿಸಿಬಿ ಪೊಲೀಸರ ತನಿಖೆ ವೇಳೆ ಈ ವಿಚಾರ ಬಯಲಾಗಿದೆ. ಏನೇ ಕೇಳಿದ್ರೂ ಕಾಂಗ್ರೆಸ್ ಕಡೆ ಬೊಟ್ಟು ಮಾಡ್ತಿರೋ ಚೈತ್ರಾ, ನಾನೇನು ತಪ್ಪು ಮಾಡಿಲ್ಲ, ಎಲ್ಲಾ ತಪ್ಪು ಎಫ್ ಐ ಆರ್ ಆಗಿದೆ ಎಂದು ಚೈತ್ರಾ ಹೇಳುತ್ತಿದ್ದಾಳೆ. ಕಾಂಗ್ರೆಸ್ ಹಿಂದೂ ಹೋರಾಟಗಾರರನ್ನು ಟಾರ್ಗೆಟ್ ಮಾಡ್ತಿದೆ ಎನ್ನುತ್ತಿದ್ದಾಳೆ.

ಕಾಂಗ್ರೆಸ್ ನಿಂದಲೇ ಬೇಕು ಅಂತ ಎಫ್ ಐ ಆರ್ ಆಗಿದೆ. ಎಫ್ ಐ ಆರ್ ಮಾಡ್ಸಿ ಅರೆಸ್ಟ್ ಮಾಡಿಸಿದ್ದಾರೆ ಎಂದು ಚೈತ್ರಾ ಹೇಳುತ್ತಿದ್ದಾಳೆ. ಈ ಎಲ್ಲಾ ವಿಚಾರ ಸಿಸಿಬಿ ಪೊಲೀಸರ ಪ್ರಾಥಮಿಕ ವಿಚಾರಣೆ ವೇಳೆ ಬಯಲು

click me!