ಬೆಂಗಳೂರು: 10ನೇ ತರಗತಿ ಬಾಲಕನ ಬೆತ್ತಲೆಗೊಳಿಸಿ ವಿಡಿಯೋ ಮಾಡಿ ಬ್ಲಾಕ್‌ಮೇಲ್!

Published : May 01, 2025, 05:36 PM ISTUpdated : May 01, 2025, 05:42 PM IST
ಬೆಂಗಳೂರು: 10ನೇ ತರಗತಿ ಬಾಲಕನ ಬೆತ್ತಲೆಗೊಳಿಸಿ ವಿಡಿಯೋ ಮಾಡಿ ಬ್ಲಾಕ್‌ಮೇಲ್!

ಸಾರಾಂಶ

ಬೆಂಗಳೂರಿನಲ್ಲಿ ಹತ್ತನೇ ತರಗತಿ ಬಾಲಕನನ್ನು ಸಾಮಾಜಿಕ ಜಾಲತಾಣ ಸ್ನೇಹಿತರು ವಿವಸ್ತ್ರಗೊಳಿಸಿ, ವಿಡಿಯೋ ಮಾಡಿ ಹತ್ತು ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಬಾಲಕನ ಸ್ನೇಹಿತೆಯ ಕುಮ್ಮಕ್ಕಿನಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಆಡುಗೋಡಿ ಪೊಲೀಸರು ಐಟಿ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಬೆಂಗಳೂರು (ಮೇ 01): ಸೋಶಿಯಲ್ ಮೀಡಿಯಾದಲ್ಲಿ ಹುಡುಗಿಯೊಂದಿಗೆ ಜಗಳ ಮಾಡಿದ 10ನೇ ಬಾಲಕನನ್ನು ಬಲವಂತವಾಗಿ ಥಳಿಸಿ ವಿವಸ್ತ್ರಗೊಳಿಸಿ ವಿಡಿಯೋ ಮಾಡಿಕೊಂಡು, ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವುದಾಗಿ ಬೆದರಿಕೆ ಹಾಕಿ 10 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿರುವ ವಿಚಾರ ಬೆಳಕಿಗೆ ಬಂದಿದೆ.

ಹತ್ತನೇ ತರಗತಿ ವಿದ್ಯಾರ್ಥಿಯನ್ನ ವಿವಸ್ತ್ರಗೊಳಿಸಿ ಬ್ಲ್ಯಾಕ್ ಮೇಲ್ ಆರೋಪ ಬೆಂಗಳೂರಿನ ಆಡಿಗೋಡಿ ಪೊಲೀಸ್ ಠಾಣೆಯಲ್ಲಿ ಕೇಳಿಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಸ್ನೇಹಿತರಿಂದ ಕೃತ್ಯ ಎಸಗಲಾಗಿದೆ. ಹಲ್ಲೆಗೊಳಗಾಗಿರೋ ಬಾಲಕನ ಸ್ನೇಹಿತೆಯ ಕುಮ್ಮಕ್ಕಿನಿಂದ ಕೃತ್ಯ ಎಂದು ಆರೋಪ ಮಾಡಲಾಗಿದೆ. ಈ ಘಟನೆಯ ಬಗ್ಗೆ ಸಂತ್ರಸ್ತ ಬಾಲಕನ ತಾಯಿ ಆಡುಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಘಟನೆಯು ಬೆಳಕಿಗೆ ಬಂದಿದೆ.

ಇನ್ನು ಬಾಲಕನಿಂದ ಇಯರ್ ಪಾಡ್ಸ್ ಮತ್ತು ಮೊಬೈಲ್ ಪಡೆದಿದ್ದ ಆರೋಪಿಗಳು, ನಂತರ ಮೊಬೈಲ್ ವಾಪಸ್ ನೀಡಿದ್ದರು. ಆದರೆ, ಬ್ಲೂಟೂತ್ ಬಡ್ಸ್ ಅನ್ನು ವಾಪಸ್ ನೀಡಿರಲಿಲ್ಲ. ಈ ಬಗ್ಗೆ ಕೇಳಿದಾಗ ಕಳೆದ 3 ತಿಂಗಳಿಂದ ಬಾಲಕನ ಸಂಪರ್ಕಕ್ಕೆ ಸಿಗದೇ ತಪ್ಪಿಸಿಕೊಂಡಿದ್ದರು. ಇದಾದ ಬಳಿಕ ಕಳೆದ ಏ.05ರಂದು ಹಿಂದೆ ಬಾಲಕನನ್ನ ಸಂಪರ್ಕ ಮಾಡಿದ್ದ ಆರೋಪಿಗಳು, ಭೇಟಿ ಮಾಡುವುದಕ್ಕೆ ಕರೆದಿದ್ದಾರೆ. ಆಗ ಬಾಲಕ ಅವರನ್ನು ಭೇಟಿ ಮಾಡಿದಾಗ ಒಂದು ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್ ಜಾಗಕ್ಕೆ ಕರೆದೊಯ್ದಿದ್ದಾರೆ.

ನಂತರ ಬಾಲಕನನ್ನ ಬೆತ್ತಲೆ ಮಾಡಿ ಹಣ ಡಿಮ್ಯಾಂಡ್ ಮಾಡಿದ್ದಾರೆ. ಈ ವೇಳೆ ಬಾಲಕನಿಂದಲೇ ಮಾತನಾಡಿಸಿ ವಿಡಿಯೋ ಮಾಡಿಕೊಂಡಿದ್ದಾರೆ. ಸಂತ್ರಸ್ತ ಬಾಲಕನಿಂದ ತಾನು ಹುಡುಗಿಯರ ಅಶ್ಲೀಲ ಚಿತ್ರ ತೆಗೆದು ಹಣ ಡಿಮ್ಯಾಂಡ್ ಮಾಡುತ್ತೇನೆ. ಹೀಗೆ, ಹುಡುಗಿಯರ ಅಶ್ಲೀಲ ವಿಡಿಯೋಗಳನ್ನು ಮಾಡಿದ್ದು, ಒಂದು ಹುಡುಗಿಯ ಬಳಿ 50 ಸಾವಿರ ರೂ. ಹಣವನ್ನು ಪಡೆದಿಕೊಂಡಿದ್ದೇನೆ ಎಂದು ಸುಳ್ಳು ಮಾತಾನಾಡಿಸಿ ವಿಡಿಯೋ ಮಾಡಿಕೊಂಡಿದ್ದಾರೆ. ಇದಾದ ನಂತರ ನೀನು ನಮಗೆ ಈಗ 10,000 ರೂ. ಹಣವನ್ನು ಕೊಡು. ಇಲ್ಲವಾದರೆ ಈ ನಿನ್ನ ನಗ್ನ ವಿಡಿಯೋ ಮತ್ತು ಹುಡುಗಿಯರನ್ನು ಬ್ಲಾಕ್ ಮೇಲ್ ಮಾಡಿ ಹಣ ಪಡೆದಿದ್ದಾಗಿ ಹೇಳಿದ ವಿಡಿಯೋ ವೈರಲ್ ಬೆದರಿಕೆ ಹಾಕಿದ್ದಾರೆ ಎಂದು ಬಾಲಕನ ತಾಯಿ ದೂರಿನಲ್ಲಿ ಆರೋಪ ಮಾಡಿದ್ದಾರೆ.

ಕಳೆದ 20 ದಿನಗಳಿಂದ ಭಯದಲ್ಲಿಯೇ ದೂರು ಕೊಡದೇ ಸುಮ್ಮನಿದ್ದ ಬಾಲಕನ ಕುಟುಂಬಸ್ಥರು, ನಂತರ ಇದಕ್ಕೆ ಕಾರಣ ಬಾಲಕನ ಸ್ನೇಹಿತೆಯೇ ಎಂದು ತಿಳಿದುಕೊಂಡಿದ್ದಾರೆ. ಹಲ್ಲೆಗೊಳಗಾದ ಬಾಲಕನಿಗೆ ಹುಡುಗಿಯೊಬ್ಬಳ ಸಂಪರ್ಕವಿತ್ತು. ಆಕೆಯೂ ಸಾಮಾಜಿಕ ಜಾಲತಾಣದಲ್ಲಿ ಈತನಿಗೆ ಪರಿಚಯವಾಗಿದ್ದಳು. ಆದರೆ, ಕೆಲ ದಿನಗಳಿಂದ ಸಂಪರ್ಕ ಖಡಿತವಾಗಿ ಜಗಳವಾಗಿತ್ತು. ಬಾಲಕನಿಗೆ ಬುದ್ದಿ ಕಲಿಸುವ ಸಲುವಾಗಿ ಹುಡುಗಿ ವಿಡಿಯೋ ಮಾಡಿಸಿದ್ದಾಋಎ ಎಂದು ಆರೋಪ ಮಾಡಿದ್ದಾರೆ.

ಇದೀಗ ವಿಡಿಯೋ ಮಾಡಿಕೊಂಡಿರೋ ಆರೋಪಿ ಕೂಡ ಆಕೆಗೆ ವಿಡಿಯೋ ಕಳಿಸೋದಾಗಿ ಹೇಳಿದ್ದಾನಂತೆ. ಆಡುಗೋಡಿ ಠಾಣೆಯಲ್ಲಿ ಹುಡುಗಿ ಸೇರಿದಂತೆ ವಿಡಿಯೋ ಮಾಡಿದವರ ವಿರುದ್ಧ ಐಟಿ ಆ್ಯಕ್ಟ್, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಈ ಪ್ರಕರಣ ಆಧಾರದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಈ ಹೀನಕೃತ್ಯದ ಈ ಪ್ರಕರಣದ ಬಳಿಕ ಬಾಲಕನ ತಾಯಿ ಆಡುಗೋಡಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾಳೆ. ಪೊಲೀಸರು ವಿಡಿಯೋ ಮಾಡಿದ ಯುವಕರ ವಿರುದ್ಧ ಹಾಗೂ ಸಹಕಾರ ನೀಡಿದ ಹುಡುಗಿಯ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಆರೋಪಿಗಳ ಬಂಧನವಾಗುವ ನಿರೀಕ್ಷೆಯಿದೆ. ಈ ಘಟನೆ ಪೋಷಕರಿಗೆ, ಶಾಲಾ ಆಡಳಿತಮಂಡಳಿಗೆ ಮತ್ತು ಸಮಾಜದ ಪ್ರತಿಯೊಬ್ಬ ಸದಸ್ಯನಿಗೂ ಎಚ್ಚರಿಕೆಯ ಗಂಟೆಯಾಗಬೇಕಾಗಿದೆ. ಮಕ್ಕಳ ಆತ್ಮವಿಶ್ವಾಸ ಮತ್ತು ಭದ್ರತೆಗೆ ಧಕ್ಕೆಯುಂಟುಮಾಡುವ ಇಂತಹ ಘಟನೆಗಳು ಮರುಕಳಿಸಿದರೆ, ಸುಮ್ಮನಿರದೇ ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ನಿಮಗೆ ಧಮ್ ಇದ್ರೆ..; ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗಿರೋ ಕಾಂಗ್ರೆಸ್ ಸರ್ಕಾರಕ್ಕೆ ಸಿಟಿ ರವಿ ನೇರ ಸವಾಲು!
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!