
ಬೆಂಗಳೂರು (ಜೂ. 14): ಕನ್ನಡ ನಾಡಿನಲ್ಲಿ ಕನ್ನಡ ಭಾಷೆಯಲ್ಲಿ ಮಾತನಾಡಿದ್ದಕ್ಕೆ ಹಾಗೂ ವಿದ್ಯಾರ್ಥಿಗೆ ಅರ್ಥವಾಗುವಾಗುವಂತೆ ಮಾತೃಭಾಷೆಯಲ್ಲಿ ಉತ್ತರ ನೀಡಿದ ಉಪನ್ಯಾಸಕರನ್ನು ಅಮಾನತು ಮಾಡಿದ ಘಟನೆ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ನಡೆದಿದೆ.
ಬೆಂಗಳೂರಿನ ಆರ್.ವಿ ಲರ್ನಿಂಗ್ ಹಬ್ ಕಾಲೇಜಿನಲ್ಲಿ ಒಂದು ಅಚ್ಚರಿಯ ಘಟನೆ ನಡೆದಿದೆ. ಕಾಲೇಜಿನಲ್ಲಿ ಉಪನ್ಯಾಸಕನೊಬ್ಬ ವಿದ್ಯಾರ್ಥಿಯೊಬ್ಬರು ಕೇಳಿದ ಪ್ರಶ್ನೆಗೆ ಕನ್ನಡದಲ್ಲಿ ಉತ್ತರಿಸಿದ್ದಕ್ಕೆ ಅವರನ್ನು ಅಮಾನತು ಮಾಡಲಾಗಿದೆ ಎಂಬ ಮಾಹಿತಿ ಭಾರಿ ವೈರಲ್ ಆಗುತ್ತಿದೆ.
ಘಟನೆಯ ವಿವರ ಇಲ್ಲಿದೆ:
ಮಾಹಿತಿಯ ಪ್ರಕಾರ, ಈ ಕಾಳೇಜಿನಲ್ಲಿ ರಾಸಾಯನಶಾಸ್ತ್ರ ಉಪನ್ಯಾಸಕರೊಬ್ಬರು ಪಾಠ ಮಾಡುತ್ತಿದ್ದಾಗ ವೇಳೆ, ವಿದ್ಯಾರ್ಥಿಯೊಬ್ಬರು ಪ್ರಶ್ನೆಯನ್ನು ಕನ್ನಡದಲ್ಲಿ ಕೇಳಿದರು. ಶಿಕ್ಷಕರು ಸಹ ಆ ಪ್ರಶ್ನೆಗೆ ತಮ್ಮ ದೈನಂದಿನ ನೈಸರ್ಗಿಕ ಶೈಲಿಯಲ್ಲಿ ಕನ್ನಡದಲ್ಲೇ ಉತ್ತರಿಸಿದರು. ಆದರೆ, ತರಗತಿಯ ಮತ್ತೊಬ್ಬ ವಿದ್ಯಾರ್ಥಿ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. 'ನನಗೆ ಕನ್ನಡ ಬಾರದಿದ್ದರೆ ಹೇಗೆ ಪಾಠ ಅರ್ಥ ಮಾಡಿಕೊಳ್ಳಲಿ? ಇಂಗ್ಲಿಷ್‌ನಲ್ಲಿ ಮಾತ್ರ ಮಾತನಾಡಬೇಕು' ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಉಪನ್ಯಾಸಕರು ಸಂಯಮ ಕಳೆದುಕೊಳ್ಳದೇ, 'ಕನ್ನಡ ಈ ನೆಲದ ಭಾಷೆ, ಕ್ರಿಮಿನಲ್ ಭಾಷೆ ಅಲ್ಲ. ಇಲ್ಲಿ ಕೇಳಿದ ಪ್ರಶ್ನೆಗೆ ನಾನು ಉತ್ತರಿಸಿದ್ದೇನು ತಪ್ಪು ಅಲ್ಲ' ಎಂದು ಬುದ್ಧಿವಾದ ಹೇಳೀದರು. ಆದರೆ ಇದನ್ನು ಭಾಷಾತ್ಮಕ ವಾದವಾಗಿ ಪರಿಗಣಿಸಿದ ಕಾಲೇಜು ಆಡಳಿತ ಮಂಡಳಿ, ಮುಂದಿನ ದಿನ ಉಪನ್ಯಾಸಕನಿಗೆ ರಾಜೀನಾಮೆ ನೀಡುವಂತೆ ಒತ್ತಡ ಹಾಕಿದುದಾಗಿ ಆರುಣ್ ಎಂಬ ಉಪನ್ಯಾಸಕ ಸ್ವತಃ ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಅಳಲು ತೋಡಿಕೊಂಡು ಬಹಿರಂಗಪಡಿಸಿದ್ದಾರೆ.
'ಕನ್ನಡ ಮಾತಾಡಿದ್ದು ತಪ್ಪಾ?'
ಆರುಣ್ ಅವರು ವಿಡಿಯೋದಲ್ಲಿ ಅಳುತ್ತಾ ಹೇಳುವ ಮಾತುಗಳು ನಿಜಕ್ಕೂ ಮನ ಕಲಕುವಂತಿದೆ. 'ಕನ್ನಡದಲ್ಲಿ ಮಾತಾಡಿದ್ದು ತಪ್ಪೇನು? ಇದೇ ಕಾಲೇಜಿನ ಮತ್ತೊಂದು ಶಾಖೆಯಲ್ಲಿ ನನ್ನ ಮಗ ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದಾನೆ. ನೀನು ಈಗ ಕೆಲಸಕ್ಕೆ ರಾಜೀನಾಮೆ ಕೊಡದಿದ್ದರೆ, ನಿನ್ನ ಮಗನ ಯಾವುದೇ ವ್ಯಾಸಂಗ ದಾಖಲೆಗಳನ್ನು ಕೊಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಕೊನೆಗೆ ಮಗನ ವಿದ್ಯಾಭ್ಯಾಸಕ್ಕೆ ತೊಂದರೆ ಆಗಬಾರದು ಎಂದು ರಾಜೀನಾಮೆ ಕೊಟ್ಟಿದ್ದಾಗಿ ಭಾವುಕರಾಗಿ ಹೇಳಿಕೊಂಡಿದ್ದಾರೆ. ಇದಾದ ನಂತರ, ನನ್ನ ಮಗನ ವಿದ್ಯಾಭ್ಯಾಸಕ್ಕಾಗಿ ಕನ್ನಡ ನಾಡಿನಲ್ಲಿ ಕನ್ನಡ ಮಾತನಾಡಿದ್ದಕ್ಕೆ ಅವಮಾನಗೊಂಡು ಕೆಲಸಕ್ಕೆ ರಾಜೀನಾಮೆ ನೀಡಿದ ಸ್ಥಿತಿಯಿಂದ ಮನಸ್ಸು ಘಾಸಿಯಾಗಿದೆ. ಆದ್ದರಿಂದ ಪುನಃ ನಾನು ವಿಡಿಯೋ ಹಂಚಿಕೊಂಡು ಕನ್ನಡ ಮಾತನಾಡಿದ್ದಕ್ಕೆ ಕೆಲಸ ಕಳೆದುಕೊಂಡ ಏಕೈಕ ಶಿಕ್ಷಕ ಅಥವಾ ಉಪನ್ಯಾಸಕ ಎಂದರೆ ನಾನೇ ಎಂದು ಹೇಳಿಕೊಂಡು, ಇಂತಹ ಶಿಕ್ಷಣ ಸಂಸ್ಥೆಯ ವಿರುದ್ಧ ಕ್ರಮ ಕನ್ನಡಿಗರು ಹೋರಾಟಕ್ಕೆ ಮುಂದಾಗಬೇಕು ಎಂದು ಕರೆ ನೀಡಿದ್ದಾರೆ.
ಈ ವೀಡಿಯೋ ಇದೀಗ ನೂರಾರು ಕನ್ನಡಪ್ರೇಮಿಗಳಿನೆ ನೋವುಂಟು ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಹಲವರು 'ಇದು ಕನ್ನಡ ಭಾಷೆಗೆ ಅವಮಾನ. ನಾವು ನಮ್ಮ ಭೂಮಿಯ, ನಮ್ಮ ಮಾತೃ ಭಾಷೆಯನ್ನೇ ಮಾತನಾಡಬೇಕಾದರೆ ಇದಕ್ಕೂ ಶಿಕ್ಷಣ ಸಂಸ್ಥೆ ಅಡ್ಡಿಯಾಗುತ್ತದೆಯಾ? ಎಂದು ಗಂಭೀರ ಪ್ರಶ್ನೆ ಎತ್ತಿದ್ದಾರೆ. 'ಕನ್ನಡದಲ್ಲಿ ಶಿಕ್ಷಕರು ಮಾತನಾಡಿದರೆ ಅದು ತಪ್ಪು ಎಂದರೆ, ಇಂತಹ ಶಿಕ್ಷಣ ಸಂಸ್ಥೆಗಳು ಕರ್ನಾಟಕದಲ್ಲಿ ಏಕೆ ಬೇಕು? ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ