‘ಸ್ವಚ್ಛ, ಕಸ ಮುಕ್ತ’ ಪ್ರಶಸ್ತಿಗೆ ಬೆಂಗಳೂರು ಆಯ್ಕೆ

Suvarna News   | Asianet News
Published : Nov 18, 2021, 03:29 PM IST
‘ಸ್ವಚ್ಛ, ಕಸ ಮುಕ್ತ’ ಪ್ರಶಸ್ತಿಗೆ ಬೆಂಗಳೂರು ಆಯ್ಕೆ

ಸಾರಾಂಶ

ಕೇಂದ್ರದ ‘ಸ್ವಚ್ಛ, ಕಸ ಮುಕ್ತ’ ಪ್ರಶಸ್ತಿಯನ್ನು ನಮ್ಮ ಹೆಮ್ಮೆಯ ರಾಜಧಾನಿ ಬೆಂಗಳೂರು ಗೆದ್ದಿದೆ ‘ಸ್ವಚ್ಛ, ಕಸ ಮುಕ್ತ’ ಪ್ರಶಸ್ತಿಗೆ  ರಾಜ್ಯದ 8 ನಗರಗಳನ್ನು ಕೇಂದ್ರ  ಸರ್ಕಾರದಿಂದ ಆಯ್ಕೆ 

ಬೆಂಗಳೂರು (ನ.18):  ಕೇಂದ್ರದ ‘ಸ್ವಚ್ಛ, ಕಸ ಮುಕ್ತ’ ಪ್ರಶಸ್ತಿಯನ್ನು (Award) ನಮ್ಮ ಹೆಮ್ಮೆಯ ರಾಜಧಾನಿ ಬೆಂಗಳೂರು (Bengaluru) ಗೆದ್ದಿದೆ.  

‘ಸ್ವಚ್ಛ, ಕಸ ಮುಕ್ತ’ ಪ್ರಶಸ್ತಿಗೆ  ರಾಜ್ಯದ 8 ನಗರಗಳನ್ನು ಕೇಂದ್ರ  ಸರ್ಕಾರ (Govt of India) ಆಯ್ಕೆ ಮಾಡಿದ್ದು, ನವೆಂಬರ್ 20ರಂದು ದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಬಿಬಿಎಂಪಿ ಉನ್ನತ ಅಧಿಕಾರಿಗಳಿಂದ ಪ್ರಶಸ್ತಿ ಸ್ವೀಕಾರ ಮಾಡಲಿದ್ದಾರೆ. 

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ವಚ್ಛ ಸರ್ವೇಕ್ಷಣಾ 2021, ಸಫಾಯಿ ಮಿತ್ರ  ಸುರಕ್ಷಾ ಚಾಲೆಂಜ್ ಮತ್ತು ಕಸ ಮುಕ್ತ ನಗರಗಳ ಅಡಿಯಲ್ಲಿ ಅರ್ಜಿಗಳನ್ನ ಆಹ್ವಾನಿಸಿತ್ತು. ಇದರಲ್ಲಿ ರಾಜ್ಯದ ಒಟ್ಟು 9 ನಗರಗಳು ಸ್ವಚ್ಛ ನಗರಗಳೆಂದು (Celan city) ಪ್ರಶಸ್ತಿ ತಮ್ಮದಾಗಿಸಿಕೊಂಡಿವೆ. 

ರಾಜ್ಯಕ್ಕೆ ಒಟ್ಟು 9 ಪ್ರಶಸ್ತಿಗಳು

1) ಕರ್ನಾಟಕ ರಾಜ್ಯ
2) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)
3) ಹುಬ್ಬಳ್ಳಿ-ಧಾರವಾಡ 
4) ಮೈಸೂರು
5) ಮುಧೋಳ
6) ಹೊಸದುರ್ಗ
7) ಕೃಷ್ಣರಾಜನಗರ
8) ಕುಮಟಾ
9) ಪಿರಿಯಾಪಟ್ಟಣ

ಬಿಬಿಎಂಪಿ (BBMP) ಮುಖ್ಯ ಆಯುಕ್ತ ಗೌರವ್ ಗುಪ್ತಾ, ವಿಶೇಷ ಆಯುಕ್ತ ಡಾ. ಹರೀಶ್ ಕುಮಾರ್. ಕೆ ಮತ್ತು ಜಂಟಿ ಆಯುಕ್ತ ಸರ್ಫರಾಜ್ ಖಾನ್  ನವೆಂಬರ್ 20 ರಂದು ನವ ದೆಹಲಿಯ (New Delhi) ವಿಜ್ಞಾನ ಭವನದಲ್ಲಿ ಪ್ರಶಸ್ತಿಯನ್ನ ಸ್ವೀಕರಿಸಲಿದ್ದಾರೆ. ಪ್ರಶಸ್ತಿ (award) ಪಡೆದ ಇತರ ನಗರಗಳನ್ನ ಪ್ರತಿನಿಧಿಸುವ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ನವ ದೆಹಲಿಯಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್  ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. 

ಬೇರ್ಪಡಿಸದೇ ತ್ಯಾಜ್ಯ ನೀಡುವವರಿಗೆ ದಂಡ : 

ಹಸಿ ಹಾಗೂ ಒಣ ಕಸ (garbage) ಬೇರ್ಪಡಿಸದೇ ತ್ಯಾಜ್ಯ ಕೊಡುವ ಮನೆಗಳಿಗೆ ದಂಡ (Penalty) ವಿಧಿಸಬೇಕು, ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡ ಹಾಗೂ ವಾಸ ಯೋಗ್ಯವಲ್ಲದ ಕಟ್ಟಡಗಳನ್ನು (Building) ಪತ್ತೆ ಮಾಡಿ ಅವುಗಳನ್ನು ತೆರವುಗೊಳಿಸುವಂತೆ ಉಪ ಲೋಕಾಯುಕ್ತ ಬಿ.ಎಸ್‌. ಪಾಟೀಲ್‌ (BS patil) ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಾಲಿಕೆಯ ರಾಜರಾಜೇಶ್ವರಿ ನಗರ (Rajrajeshwari Nagar) ವಲಯ ಕಚೇರಿಗೆ ಭೇಟಿ ನೀಡಿದ ಅವರು, ಅಲ್ಲಿನ ಕಾರ್ಯ ಚಟುವಟಿಕೆ ಪರಿಶೀಲಿಸಿ ಮಾತನಾಡಿದರು. ನಗರದಲ್ಲಿ ತ್ಯಾಜ್ಯ ವಿಲೇವಾರಿ, ಖಾತೆಗಳ ವಿಷಯ, ಒಳ ಚರಂಡಿ, ರಸ್ತೆ ಅಭಿವೃದ್ಧಿ (Road) ಸೇರಿದಂತೆ ಜನಸಾಮಾನ್ಯರು ಯಾವುದೇ ಸಮಸ್ಯೆಗಳಿಗೆ ಒಳಗಾಗದಂತೆ ಬಿಬಿಎಂಪಿ (BBMP) ಅಧಿಕಾರಿಗಳು, ಸಿಬ್ಬಂದಿಗಳು ಮೂಲಸೌಕರ್ಯ ಒದಗಿಸಬೇಕು ಎಂದು ಹೇಳಿದರು.

  ಕಳಪೆ ಕಾಮಗಾರಿ, ಸ್ವಚ್ಛತೆ, ತ್ಯಾಜ್ಯ ವಿಲೇವಾರಿ, ಮಳೆಯಿಂದ ರಾಜಕಾಲುವೆ ನೀರು ಬಡಾವಣೆಗೆ ನುಗ್ಗುತ್ತಿರುವ ಕುರಿತು ವರದಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆಗಳು ಮರುಕಳಿಸದಂತೆ ಎಂಜಿನಿಯರ್‌ಗಳು (Engineering) ಕರ್ತವ್ಯವನ್ನು ಜವಾಬ್ದಾರಿಯುತವಾಗಿ ಕೈಗೊಳ್ಳಬೇಕು. ತ್ಯಾಜ್ಯ ವಿಲೇವಾರಿಯಲ್ಲಿಯೂ ಘನತ್ಯಾಜ್ಯ ವಿಭಾಗದ ಎಂಜಿನಿಯರ್‌ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಬೇಕು. ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸದೆ ಕೊಡುವ ಮನೆಗಳಿಗೆ ದಂಡ ವಿಧಿಸಬೇಕೆಂದು ಸೂಚನೆ ನೀಡಿದರು.

ವಿಶ್ವೇಶ್ವರಯ್ಯ ಬಡಾವಣೆ ಮುಖ್ಯರಸ್ತೆ, ಮಾಗಡಿ ರಸ್ತೆ, ಪೀಣ್ಯ, ಗೊರಗುಂಟೆಪಾಳ್ಯ ರಸ್ತೆ ಸೇರಿದಂತೆ ರಾಜರಾಜೇಶ್ವರಿ ನಗರ ವಲಯದ ಅನೇಕ ರಸ್ತೆಗಳು ಮಳೆಯಿಂದ ಹದಗೆಟ್ಟಿವೆ. ಕೂಡಲೇ ಅವುಗಳನ್ನು ಅಭಿವೃದ್ಧಿಪಡಿಸಿ, ಕಿತ್ತು ಹೋಗಿರುವ ಮತ್ತು ರಸ್ತೆಗಳು ಗುಂಡಿಗಳನ್ನು ಶೀಘ್ರವೇ ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆ ನಿವಾರಿಸುವಂತೆ ಉಪಲೋಕಾಯುಕ್ತರು ಸೂಚನೆ ನೀಡಿದರು.

ಬೆಂಗಳೂರು ಅಭಿವೃದ್ಧಿಗೆ ಮಿಷನ್ 2022 : 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಭಾನುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಬೆಂಗಳೂರು ಮಿಷನ್‌-2022ರ (Bengaluru Mission 2022) ಪ್ರಗತಿ ಪರಿಶೀಲನೆ ನಡೆಸಿದರು

ಮಳೆಯಿಂದಾಗಿ (Rain) ನಗರದ ರಸ್ತೆಗಳಲ್ಲಿ ಗುಂಡಿ ಬಿದ್ದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾನುವಾರ ಬೆಂಗಳೂರು ಮಿಷನ್‌-2022 ರ ಪ್ರಗತಿ ಪರಿಶೀಲನೆ ನಡೆಸಿ, ರಸ್ತೆಗಳ ಅತ್ಯುತ್ತಮ ನಿರ್ವಹಣೆ ಹಾಗೂ ಸುಗಮ ಸಂಚಾರ ವ್ಯವಸ್ಥೆಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿನಿಮಾ ರಿಲೀಸ್‌ಗೂ ಮುನ್ನವೇ ಜೈಲಲ್ಲಿ ಡೆವಿಲ್ ರೂಪ ತಾಳಿದ ದರ್ಶನ್; ಸಹ ಕೈದಿಗಳಿಗೆ ಕಾಲಿನಿಂದ ಒದ್ದು ದುರಹಂಕಾರ!
CM Siddaramaiahಗೆ ಈಶ್ವರಪ್ಪ ವಾರ್ನಿಂಗ್: ಭಗವದ್ಗೀತೆ ಓದಲಿ, ತಾಕತ್ತಿದ್ದರೆ ಕುರಾನ್ ಬಗ್ಗೆ ಮಾತನಾಲಿ