ಆಸ್ತಿಗಾಗಿ ಕಿತ್ತಾಡುತ್ತಿರುವ ಅಣ್ಣ- ತಂಗಿಗೆ ಹೈಕೋರ್ಟ್‌ ಬುದ್ಧಿಮಾತು

By Kannadaprabha News  |  First Published Nov 18, 2021, 6:51 AM IST

*  ಇಳಿವಯಸ್ಸಿನ ತಂದೆ-ತಾಯಿಯನ್ನು ನೋಯಿಸಬೇಡಿ: ನ್ಯಾಯಪೀಠ
*  ಮಕ್ಕಳು ವೃದ್ಧ ತಂದೆ-ತಾಯಿಗಳನ್ನು ಜೊತೆಯಲ್ಲೇ ಇರಿಸಿಕೊಂಡು ಆರೈಕೆ ಮಾಡಬೇಕು
*  ಆಸ್ತಿಗಾಗಿ ಹೊಡೆದಾಡುತ್ತಾ ಪೋಷಕರನ್ನು ಕೈಬಿಟ್ಟರೆ, ಅವರ ಗತಿ ಏನು?


ಬೆಂಗಳೂರು(ನ.18):  ಇವತ್ತಿನ ದಿನಗಳಲ್ಲಿ ಹೊರಗೆ ಹೊದವರು ಸುರಕ್ಷಿತವಾಗಿ ಮರಳಿ ಮನೆ ವಾಪಸ್ಸಾಗುವ ಖಾತರಿಯೇ ಇರುವುದಿಲ್ಲ. ಈ ಪರಿಸ್ಥಿತಿಯಲ್ಲಿ ಆಸ್ತಿಗಾಗಿ ಕಿತ್ತಾಡುತ್ತಾ ಇಳಿವಯಸ್ಸಿನಲ್ಲಿರುವ ತಂದೆ-ತಾಯಿಗಳ ಮನಸ್ಸನ್ನು ನೋಯಿಸುವುದು ಯಾವ ರೀತಿ ಸರಿ? ಅಂತಹ ಅಲೆಕ್ಸಾಂಡರ್‌ನ ಸಾಮ್ರಾಜ್ಯವೇ(Kingdom of Alexander) ಉಳಿಯಲಿಲ್ಲ. ಇನ್ನು ಸಾಮಾನ್ಯ ಮನುಷ್ಯರಾದ ನಮ್ಮ ಕಥೆ ಏನು? ಎಂದು ತಂದೆ ಸಂಪಾದಿಸಿದ ಆಸ್ತಿಗಾಗಿ ನ್ಯಾಯಾಲಯದ ಮೆಟ್ಟಿಲೇರಿ ಕಾನೂನು ಹೋರಾಟ ನಡೆಸುತ್ತಿರುವ ಅಣ್ಣ-ತಂಗಿಗೆ ಹೈಕೋರ್ಟ್‌(Highcourt) ಪ್ರಶ್ನಿಸಿದೆ.

ಜೀವನದ ಸಂಧ್ಯಾಕಾಲದಲ್ಲಿ ತಂದೆ ತಾಯಿಯನ್ನು(Mother) ನೋಯಿಸಬಾರದು. ಮಕ್ಕಳು ವೃದ್ಧ ತಂದೆ-ತಾಯಿಗಳನ್ನು ಜೊತೆಯಲ್ಲೇ ಇರಿಸಿಕೊಂಡು ಆರೈಕೆ ಮಾಡಬೇಕು. ಆಸ್ತಿಗಾಗಿ(Property) ಹೊಡೆದಾಡುತ್ತಾ ಪೋಷಕರನ್ನು(Parents) ಕೈಬಿಟ್ಟರೆ, ಅವರ ಗತಿ ಏನು, ಅವರನ್ನು ಯಾರು ನೋಡಿಕೊಳ್ಳುತ್ತಾರೆ, ಮನುಷ್ಯ ಬದುಕು ಪ್ರೀತಿ ಹಾಗೂ ಸದ್ಗುಣಗಳ ಮೇಲೆ ಅವಲಂಬಿತವಾಗಿರುತ್ತದೆ ಹೊರತು ಒಪ್ಪಂದದ ಅಡಿಪಾಯದ ಮೇಲೆ ಅಲ್ಲ ಎಂದು ಹೈಕೋರ್ಟ್‌ ಅಣ್ಣ-ತಂಗಿಗೆ ಬುದ್ಧಿಮಾತು ಹೇಳಿತು.

Tap to resize

Latest Videos

BBMP ಮುಖ್ಯ ಆಯುಕ್ತರನ್ನೇ ಜೈಲಿಗೆ ಕಳಿಸ್ತೀವಿ: ಹೈಕೋರ್ಟ್‌ ಕೆಂಡಾಮಂಡಲ

ಬೆಂಗಳೂರು(Bengaluru) ನಗರದ ವಾಸವಿರುವ ಕುಟುಂಬವೊಂದರ ಆಸ್ತಿ ಹಂಚಿಕೆ ವಿವಾದವನ್ನು ಬುಧವಾರ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರ ಏಕ ಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಪ್ರಕರಣದಲ್ಲಿ ಅಣ್ಣನ ವಿರುದ್ಧ ತಂಗಿ ಸಿವಿಲ್‌ ದಾವೆ(Civil Case) ಹೂಡಿದ್ದಾರೆ. ಇದೇ ಆಸ್ತಿ ವಿವಾದದಿಂದ ಮಗಳ ಮನೆಯಲ್ಲಿಯೇ ವೃದ್ಧ ತಂದೆ-ತಾಯಿ ವಾಸವಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಅಣ್ಣ-ತಂಗಿಗೆ ಬುದ್ಧಿವಾದ ಹೇಳಿತು. ವಿಚಾರಣೆಯನ್ನು ಇದೇ 29ಕ್ಕೆ ಮುಂದೂಡಿದೆ.

ಡಿಗ್ರಿಯಲ್ಲಿ ಕನ್ನಡ ಕಡ್ಡಾಯ : ಮತ್ತೆ ಹೈಕೋರ್ಟ್‌ ಆಕ್ಷೇಪ

ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ರಾಜ್ಯದ ಪದವಿ ಕಾಲೇಜುಗಳಲ್ಲಿ (College) ಕನ್ನಡ (kannada) ಕಲಿಕೆ ಕಡ್ಡಾಯಗೊಳಿಸುವ ರಾಜ್ಯ ಸರ್ಕಾರದ ನಿಲುವಿಗೆ ಮತ್ತೊಮ್ಮೆ ಆಕ್ಷೇಪಿಸಿರುವ ಹೈಕೋರ್ಟ್‌, ಶಿಕ್ಷಣದಲ್ಲಿ (Education) ರಾಜಕೀಯವನ್ನು (Politics) ಏಕೆ ಬೆರೆಸುತ್ತೀರಿ ಎಂದು ಕಟುವಾಗಿ ಪ್ರಶ್ನಿಸಿದೆ. ಜತೆಗೆ, ರಾಷ್ಟ್ರೀಯ ಶಿಕ್ಷಣ ನೀತಿಯಡಿ ಕನ್ನಡ (Kannada) ಕಲಿಸಬಹುದು ಎಂದಿದ್ದರೆ ಅದಕ್ಕೆ ದಾಖಲೆ ತೋರಿಸಿ ಎಂದೂ ನಿರ್ದೇಶಿಸಿದೆ.

ಪದವಿ ಕಾಲೇಜುಗಳಲ್ಲಿ(Degree College) ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವುದನ್ನು ಕಡ್ಡಾಯಗೊಳಿಸಿದ ಸರ್ಕಾರದ ಆದೇಶ ಪ್ರಶ್ನಿಸಿ ಬೆಂಗಳೂರಿನ ಸಂಸ್ಕೃತ ಭಾರತಿ ಕರ್ನಾಟಕ ಟ್ರಸ್ಟ್‌ (Sanskrith Bharthi Karnataka trust) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಕರ್ನಾಟಕ ಹೈಕೋರ್ಟ್‌ಗೆ 3 ಹೆಚ್ಚುವರಿ ಜಡ್ಜ್‌ಗಳ ನೇಮಕ

ರಾಜ್ಯ ಸರ್ಕಾರಿ ವಕೀಲರು ಹಾಜರಾಗಿ, ಉನ್ನತ ಶಿಕ್ಷಣದಲ್ಲಿ (Higher education) ಕೇವಲ ಆರು ತಿಂಗಳ ಕಾಲ ಬೇಸಿಕ್‌ ಕನ್ನಡ ಕಲಿಸಲಾಗುವುದು. ರಾಷ್ಟ್ರೀಯ ಶಿಕ್ಷಣ ನೀತಿಯಡಿಯಲ್ಲಿ (national education Policy) ಕನ್ನಡ ಕಲಿಕೆಯನ್ನು ಪ್ರೋತ್ಸಾಹಿಸಬಹುದು ಎಂದು ನ್ಯಾಯಾಲಯಕ್ಕೆ ವಿವರಿಸಿದರು. ಜತೆಗೆ, ಸರ್ಕಾರದ ನೀತಿಯನ್ನು ಸಮರ್ಥಿಸಿಕೊಂಡು ಸರ್ಕಾರದ ಪರ ಅಡ್ವೋಕೇಟ್‌ ಜನರಲ್‌ ವಾದ ಮಂಡಿಸಲಿದ್ದಾರೆ. ಅದಕ್ಕಾಗಿ ಸೋಮವಾರಕ್ಕೆ ಅರ್ಜಿ ವಿಚಾರಣೆ ಮುಂದೂಡುವಂತೆ ನ್ಯಾಯಪೀಠವನ್ನು ಕೋರಿದರು.

ಇದಕ್ಕೆ ಆಕ್ಷೇಪಿಸಿದ ನ್ಯಾಯಾಲಯ, ಕಡ್ಡಾಯ ಕಲಿಕೆ ನಿಲುವಿನ ಕುರಿತು ಸರ್ಕಾರಕ್ಕೆ ಸಲಹೆ ನೀಡುವುದಾಗಿ ಅಡ್ವೋಕೇಟ್‌ ಜನರಲ್‌ ಕಳೆದ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಭರವಸೆ ನೀಡಿದ್ದರು. ಆದರೆ ಈಗ ನಿಮ್ಮ ನೀತಿಯನ್ನು ಸಮರ್ಥಿಸಿಕೊಳ್ಳುತ್ತೀದ್ದೀರಿ. ಹಾಗಾದರೆ ಈ ವಿಚಾರದಲ್ಲಿ ರಾಜ್ಯ ಸರ್ಕಾರದ ನಿಲುವು ಏನು ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು ಎಂದು ತಾಕೀತು ಮಾಡಿತು.
 

click me!