* ಸವದತ್ತಿ ಶ್ರೀ ಯಲ್ಲಮ್ಮ ದೇವಸ್ಥಾನ ಬಾಗಿಲು ತೆರೆಯಲು ಬೆಳಗಾವಿ ಜಿಲ್ಲಾಡಳಿ ಗ್ರೀನ್ ಸಿಗ್ನಲ್
* 28ರಿಂದ ಭಕ್ತರಿಗೆ ಸಿಗಲಿದೆ ಯಲ್ಲಮ್ಮನ ದರ್ಶನ
* ಉತ್ತರ ಕರ್ನಾಟಕದ ಆರಾಧ್ಯ ದೇವತೆ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ
ಬೆಳಗಾವಿ, (ಸೆ.22): ಉತ್ತರ ಕರ್ನಾಟಕದ ಆರಾಧ್ಯ ದೇವತೆ ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ಬಾಗಿಲು ತೆರೆಯಲು ಬೆಳಗಾವಿ (Belagavi) ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅನುಮತಿ ನೀಡಿದ್ದಾರೆ.
ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಹಲವು ತಿಂಗಳುಗಳಿಂದ ಯಲ್ಲಮ್ಮ ದೇವಿಯ ದೇವಸ್ಥಾನ (Temple) ಬಾಗಿಲು ಮುಚ್ಚಿತ್ತು. ಇದೀಗ ಇದೇ ಸೆ. 28ರಿಂದ ಯಲ್ಲಮ್ಮನ ದರ್ಶನಕ್ಕೆ ಜಿಲ್ಲಾಡಳಿತ ಗ್ರೀನ್ ಸಿಗ್ನಲ್ ನೀಡಿದೆ.
undefined
ಆದ್ರೆ. ಕೋವಿಡ್ (Covid19) ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಭಕ್ತರು ದರ್ಶನ ಪಡೆದುಕೊಳ್ಳಬೇಕು. ದೇವಾಲಯದಲ್ಲಿ ಜನಸಂದಣಿ ಸೇರುವಂತಹ ಎಲ್ಲ ಸೇವೆ, ಜಾತ್ರೆ, ವಿಶೇಷ ಉತ್ಸವ ಕಾರ್ಯಕ್ರಮಗಳನ್ನು ನಿರ್ಬಂಧಿಸಲಾಗಿದೆ.
ಭಕ್ತರು ಸರಾಗವಾಗಿ ಸರದಿ ಸಾಲಿನಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ದರ್ಶನ ಪಡೆದುಕೊಳ್ಳಬೇಕು. ದೇವಸ್ಥಾನ ಆವರಣದಲ್ಲಿ ಕಡ್ಡಾಯವಾಗಿ ಮಾಸ್ಕ್, ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸರ್ ವ್ಯವಸ್ಥೆ ಇರಬೇಕೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.