ಬೆಳಗಾವಿ ಉ.ವಿಧಾನಸಭಾ ಕ್ಷೇತ್ರದಲ್ಲಿಒಂದೇ ಮನೆಯಲ್ಲಿ 389 ಮತದಾರರು! ದಿಲ್ಲಿಲೀ ಹೋರಾಟ ಮಾಡೋ ಸಿಎಂ, ಈಗ ಏನ್ ಮಾಡ್ತಾರೆ?

Kannadaprabha News   | Kannada Prabha
Published : Oct 13, 2026, 07:12 AM IST
Belagavi North Fake Voters Anil Benake Questions CM

ಸಾರಾಂಶ

ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ 10 ಸಾವಿರಕ್ಕೂ ಹೆಚ್ಚು ಬೋಗಸ್ ಮತದಾರರಿದ್ದಾರೆ ಎಂದು ಮಾಜಿ ಶಾಸಕ ಅನಿಲ್ ಬೆನಕೆ ಗಂಭೀರ ಆರೋಪ ಮಾಡಿದ್ದಾರೆ. ಒಂದೇ ಮನೆಯಲ್ಲಿ 389 ಮತದಾರರ ಹೆಸರಿದ್ದು, ನಕಲಿ ಮತದಾರರ ಬಗ್ಗೆ ದೂರು ನೀಡಲು ಹೋದರೆ ಬೆದರಿಕೆ ಹಾಕಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಬೆಂಗಳೂರು (ಅ.13): ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ 10 ಸಾವಿರಕ್ಕೂ ಹೆಚ್ಚು ಬೋಗಸ್ ಮತದಾರರಿದ್ದು, ಒಂದೇ ಮನೆಯಲ್ಲಿ 389 ಮತದಾರರ ಹೆಸರಿದೆ ಎಂದು ಆ ಕ್ಷೇತ್ರದ ಮಾಜಿ ಶಾಸಕರೂ ಆಗಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ ಆರೋಪಿಸಿದ್ದಾರೆ.

ಫಾರ್ಮ್ ನಂಬರ್ 7 ಕೊಡಲು ಹೋದರೆ ಬೆದರಿಕೆ!

ಸೋಮವಾರ ಪಕ್ಷದ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಫಾರ್ಮ್ ನಂಬರ್ 7 ಕೊಡಲು ಹೋದರೆ ಬೆದರಿಸುವ ಕೆಲಸ ನಡೆದಿದೆ. ಆದರೆ, ಪಕ್ಷದ ಬಿಎಲ್‌ಎ 2ಗಳು ಇದಕ್ಕೆ ಹೆದುರುವುದಿಲ್ಲ. ಬೇರೆ ಬೇರೆ ಕ್ಷೇತ್ರದ ಹಲವು ಬೂತ್‌ಗಳಲ್ಲಿ ನಾವು ಹತ್ತತ್ತು ಫಾರ್ಮ್ ಕೊಟ್ಟಿದ್ದೇವೆ. ಎಫ್ಐಆರ್ ಆಗುವ ಆತಂಕದಿಂದ ಇದೀಗ ಬಿಎಲ್ಒಗಳು ನಮ್ಮಿಂದ ಅರ್ಜಿ ಪಡೆಯಲು ಸಿದ್ಧರಿಲ್ಲ ಎಂದು ಆರೋಪಿಸಿದರು.

ಎಸ್‌ಐಆರ್‌ ಸಿಎಂ ದಿಲ್ಲಿಯಲ್ಲಿ ಹೋರಾಟ ಮಾಡ್ತಾರೆ, ಇಲ್ಲಿ ಬೋಗಸ್ ಮತದಾರರು ಕಾಣಲ್ವ?

ರಾಜ್ಯದ ಮುಖ್ಯಮಂತ್ರಿಗಳು, ಕಾಂಗ್ರೆಸ್ ರಾಜ್ಯಾಧ್ಯಕ್ಷರು ದಿಲ್ಲಿಯೊಳಗೆ ಹೋರಾಟ ಮಾಡುತ್ತಾರೆ. ನಾವು ಬೋಗಸ್ ಮತದಾರರಿರುವ ಬೂತ್ ನಂಬರ್ 196, 197 ನಲ್ಲಿ ತಕರಾರು ಮಾಡಿದಾಗ ಅರ್ಜಿ ಪಡೆಯುತ್ತಿಲ್ಲ ಕೆಲವೆಡೆ ಅರ್ಜಿ ಕೊಟ್ಟು ದುಡ್ಡು ತುಂಬಿದರೂ ಮಾಹಿತಿ ಕೊಡುತ್ತಿಲ್ಲ ಎಂದು ದೂರಿದರು.

ಒಂದೇ ಮನೆಯಲ್ಲಿ 389 ಮತದಾರರು

ಕ್ಷೇತ್ರದಲ್ಲಿ ಒಂದು ಕಡೆ ಒಂದೇ ಮನೆಯಲ್ಲಿ 389 ಮತದಾರರ ಹೆಸರಿದೆ. ಇನ್ನೊಂದು ಮನೆಯಲ್ಲಿ 20, ಮತ್ತೊಂದು ಕಡೆ 15 ನಕಲಿ ಮತದಾರರ ಹೆಸರು ಸೇರಿಸಿದ್ದನ್ನು ಅವರು ವಾರ್ಡ್, ಬೂತ್ ಸಂಖ್ಯೆಗಳ ವಿವರ ನೀಡಿ ಗಮನಕ್ಕೆ ತಂದರೂ ಈಗ ಫಾರ್ಮ್ 7 ಪಡೆದ ಬಿಎಲ್ಒಗಳಿಗೆ ಎಆರ್‌ಒಗಳು ಅಮಾನತು ಮಾಡುವ ಬೆದರಿಕೆ ಹಾಕುತ್ತಿದ್ದಾರೆ ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live: ಬೆಳಗಾವಿ ಉ.ವಿಧಾನಸಭಾ ಕ್ಷೇತ್ರದಲ್ಲಿಒಂದೇ ಮನೆಯಲ್ಲಿ 389 ಮತದಾರರು! ದಿಲ್ಲಿಲೀ ಹೋರಾಟ ಮಾಡೋ ಸಿಎಂ, ಈಗ ಏನ್ ಮಾಡ್ತಾರೆ?
ರಾಜ್ಯಕ್ಕೆ ನೂತನ ರಾಜ್ಯಪಾಲರಾಗಿ ಡಾ.ಸುಧಾ ಯಾದವ್ ನೇಮಕ! ಕರ್ನಾಟಕದ 2ನೇ ಮಹಿಳಾ ರಾಜ್ಯಪಾಲರ ಹಿನ್ನೆಲೆ ಇಲ್ಲಿದೆ