
ಬೆಂಗಳೂರು (ಮೇ.06): ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮೇಲೆ ನಂಬಿಕೆ ಹೆಚ್ಚಾಗುತ್ತಿದೆ. ಹೈಕೋರ್ಟ್ ಮಧ್ಯಪ್ರವೇಶದಿಂದ ತನಿಖೆಗೆ ಆದೇಶ ನೀಡಲಾಗಿದೆ. ನ್ಯಾಯಾಲಯದ ಅಭಿಪ್ರಾಯಕ್ಕೆ ತಲೆಬಾಗಿ ನಮಸ್ಕರಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಚಾಮರಾಜನಗರ ಆಕ್ಸಿಜನ್ ದುರಂತದ ಬಗ್ಗೆ ತನಿಖೆಗೆ ಆದೇಶ ನೀಡಿದ ಬಗ್ಗೆ ಶ್ಲಾಘಿಸಿದರು.
ಬೆಡ್ ಬುಕಿಂಗ್ ದಂಧೆ ಪ್ರಸ್ತಾಪ : ಬೆಂಗಳೂರಿನಲ್ಲಿ ನಡೆದ ಕರಾಳ ಬೆಡ್ ಬುಕಿಂಗ್ ದಂಧೆ ಬಗ್ಗೆ ಪ್ರಸ್ತಾಪಿಸಿದ ಡಿಕೆಶಿ ಈ ಬಗ್ಗೆ ಮಾಹಿತಿ ನೀಡಿದ ಸಂಸದರು ಒಂದು ಕೋಮಿನವರ ಹೆಸರನ್ನು ಮಾತ್ರ ಹೇಳಿದರು. 250 ಜನರು ಕೆಲಸ ಮಾಡುತ್ತಿದ್ದರೂ, 17 ಜನರ ಹೆಸರನ್ನು ಸಂಸದರು ಓದಿದರು. ಅವನಿಗೆ ಸಂವಿಧಾನದ ಬಗ್ಗೆ ಗೊತ್ತಿಲ್ಲ ಯಡಿಯೂರಪ್ಪ ನವರೇ..? ಎನೋ ಹುಡುಗರು ಅಂದುಕೊಂಡಿದ್ದೆ. ಆದರೆ ಎಂತಹವರನ್ನು ಕರೆದುಕೊಂಡು ಬಂದಿರಿ ಯಡಿಯೂರಪ್ಪ ನವರೇ ಎಂದು ಪ್ರಶ್ನೆ ಮಾಡಿದರು.
ಬೆಡ್ ಮಾಫಿಯಾ : 17 ಸಿಬ್ಬಂದಿಗೆ ಗೇಟ್‌ಪಾಸ್, ಬಿಬಿಎಂಪಿ ಸಿಬ್ಬಂದಿಯೂ ಶಾಮೀಲು?
ದಂಧೆ ಬಗ್ಗೆ ಮಾಹಿತಿ ಹೊರ ಹಾಕಿದ್ದಾರೆ ಎಂದು ನನಗೆ ಸಂತೋಷವಾಗಿತ್ತು. ಸಂಸದರು ಹಾಗೂ ನನ್ನ ಸ್ನೇಹಿತರು ಮಾಡಿದ ಕೆಲಸ ನೋಡಿ. ಆದರೆ ಅವರು ಅಲ್ಲಿ ಹೆಸರನ್ನು ಓದಿದರು ಅದನ್ನ ನೋಡಬೇಕಿತ್ತು. ಅವರಿಗೆ ಸಂವಿಧಾನದ ಅರಿವೇ ಇಲ್ಲ. ಒಳ್ಳೆ ಎಳಸನ್ನ ಕರೆದುಕೊಂಡು ಬಂದು ಯಡಿಯೂರಪ್ಪನವರು ಇಟ್ಟುಕೊಂಡಿದ್ದಾರೆ ಎಂದು ಡಿಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಮೊದಲು ಪಂಕ್ಚರ್ ಹಾಕೋರ್ ಎಂದರು. ಬೆಂಗಳೂರು ಟೆರರಿಸ್ಟ್ ಹಬ್ ಎಂದರು. ಈಗ ಏನು ಮಾಡುತ್ತಿದ್ದಾರೆ. ಇವರನ್ನೆಲ್ಲಾ ವಿದ್ಯಾವಂತರು ಎಂದುಕೊಂಡಿದ್ದೆ. ಆದರೆ ಇವರ ನಡೆ ಉವರ ಬಗ್ಗೆ ತಿಳಿಸುತ್ತದೆ ಎಂದು ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.
ವಾರ್ ರೂಂಗೆ ಸೂರ್ಯ, ಸಾರಿ ಎಂದು ಜಾರಿಕೊಳ್ಳಲು ಮುಂದಾದ ಅಧಿಕಾರಿಗಳು!
ಬೆಡ್ ಬುಕಿಂಗ್ ದಂಧೆ ಬಗ್ಗೆ ಸಂದೀಪ್ ಪಾಟೀಲ್ ಗೆ ನೀಡಿದ್ದಾರೆ. ನನಗೆ ಸಂದೀಪ್ ಪಾಟೀಲ್ ಸೇರಿ ಯಾವ ಅಧಿಕಾರಿಗಳ ಮೇಲೂ ನಂಬಿಕೆ ಇಲ್ಲ. ಮುಖರ್ಜಿ, ಅನುಚೇತ್ ಮೇಲೂ ನಂಬಿಕೆ ಇಲ್ಲ ಎಂದರು.
ಮುಖ್ಯಮಂತ್ರಿಗಳೆ ಈ ಕಡೆ ನೋಡಿ. ನಿಮ್ಮ ಶಾಸಕರು ಮಂತ್ರಿಗಳು ಕೋಮವಾದ ಪ್ರೇರಪಣೆ ಮಾಡುತ್ತಿದ್ದಾರೆ. ಇದಕ್ಕೆಲ್ಲ ಯಾರು ಹೊಣೆ...? ಕೂಡಲೇ ಇವರ ಮೇಲೆ ಕ್ರಮ ಆಗಬೇಕು. ಆರ್. ಅಶೋಕ್ ಮಾತಾಡದೇ ಓಡಿ ಹೋಗ್ತಾರೆ. ಇಂಚಾರ್ಜ್ ಮಂತ್ರಿಗಳು ಎಲ್ಲಿ ಹೋಗಿದ್ದಾರೆ. ನೀವ್ ಏನ್ ಬೇಕಾದ್ರು ಬಣ್ಣ ತಿರುಗಿಸಿ ನಮ್ಮ ಮೇಲೆ. ನಾವು ಡೈಜೆಸ್ಟ್ ಮಾಡಿಕೊಳ್ಳುತ್ತೇವೆ. ಇಷ್ಟೆಲ್ಲ ಆಗುತ್ತಿದ್ದರು ಕಾಂಗ್ರೆಸ್ ಸುಮ್ಮನೆ ಇದೆ ಎಂದುಕೊಂಡಿದ್ದೀರಾ ಎಂದರು.
ಬೆಡ್ ಬ್ಲಾಕಿಂಗ್ ಪ್ರಕರಣದಲ್ಲಿ ಬಿಜೆಪಿ ಶಾಸಕರೇ ಭಾಗಿಯಾಗಿದ್ದಾರೆ. ಇದರಲ್ಲಿ ಭಾಗಿಯಾದ ಬಿಜೆಪಿಗರನ್ನು ಮೊದಲು ಬಂಧಿಸಬೇಕು. ಯಡಿಯೂರಪ್ಪ ಅವರೇ ನಿಮಗಿದು ಒಳ್ಳೆ ಅವಕಾಶ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು. ಕೊನೆ ಸಂದರ್ಭದಲ್ಲಿ ಕೆಟ್ಟ ಹೆಸರು ತೆಗೆದುಕೊಳ್ಳುವುದು ಬೇಕಾ ನಿಮಗೆ. ಬೆಡ್ ಬ್ಲಾಕಿಂಗ್ ಕೇಸ್ ನಲ್ಲಿ ಭಾಗಿಯಾದ 217 ಜನರನ್ನೂ ಆರೆಸ್ಟ್ ಮಾಡಿ. 17 ಜನರ ಹೆಸರು ಮಾತ್ರ ಯಾಕ್ ಹೇಳುತ್ತೀರಾ ಎಂದರು.
ರಮೇಶ್ ಜಾರಕಿಹೊಳಿ ಸೀಡಿ ಕೇಸ್ ಆಗಿ ಒಂದೂವರೆ ತಿಂಗಳ ಮೇಲಾಗಿದೆ. ಇನ್ನೂ ಏನು ಮಾಡುತ್ತಾ ಇದ್ದೀರಿ. ಇದರ ಬಗ್ಗೆ ಯಾವ ಬೆಳವಳಿಗೆಗಳಾಗಿದೆ ಎಂದು ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಶ್ನೆ ಮಾಡಿದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ