Road Accidents: ತಲೆ ಮೇಲೆ ಟಿಪ್ಪರ್‌ ಚಕ್ರ ಹತ್ತಿ ಬಿಇ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು

Kannadaprabha News   | Asianet News
Published : Jan 05, 2022, 06:20 AM ISTUpdated : Jan 05, 2022, 06:21 AM IST
Road Accidents: ತಲೆ ಮೇಲೆ ಟಿಪ್ಪರ್‌ ಚಕ್ರ ಹತ್ತಿ ಬಿಇ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು

ಸಾರಾಂಶ

*  ದಿಚಕ್ರವಾಹನಕ್ಕೆ ಡಿಕ್ಕಿ ಹೊಡೆದ ಟಿಪ್ಪರ್‌ *  ಗರುಡಾ ಮಾಲ್‌ ಬಳಿ ಘಟನೆ *  ರಾಜಸ್ಥಾನದಲ್ಲಿ ಬೆಳಗಾವಿ ಯೋಧ ಸಾವು  

ಬೆಂಗಳೂರು(ಜ.05):  ಟಿಪ್ಪರ್‌ ಡಿಕ್ಕಿಯಾಗಿ ದ್ವಿ ಚಕ್ರ ವಾಹನದ ಹಿಂದೆ ಕುಳಿತಿದ್ದ ವಿದ್ಯಾರ್ಥಿನಿ ತಲೆ ಮೇಲೆ ಚಕ್ರ ಹರಿದ ಪರಿಣಾಮ ಸ್ಥಳದಲ್ಲೇ ಮೃತಟ್ಟಿರುವ(Death) ಘಟನೆ ಅಶೋಕನಗರ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆರ್‌.ಎಸ್‌.ಪಾಳ್ಯ ನಿವಾಸಿ ಸಂಜನಾ ಪ್ರಿಯಾ (21) ಮೃತ ವಿದ್ಯಾರ್ಥಿನಿ(Student). ದ್ವಿಚಕ್ರ ವಾಹನ ಚಾಲಕ ವಿನಯ್‌ಕುಮಾರ್‌(24) ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು(Police) ತಿಳಿಸಿದ್ದಾರೆ.

ಸಂಜನಾ ಪ್ರಿಯಾ ನಗರದ ಖಾಸಗಿ ಎಂಜಿನಿಯರ್‌ ಕಾಲೇಜಿನಲ್ಲಿ ಅಂತಿಮ ಬಿಇ ವ್ಯಾಸಂಗ ಮಾಡುತ್ತಿದ್ದರು. ಸೋದರ ಸಂಬಂಧಿ ವಿನಯ್‌ಕುಮಾರ್‌ ಜತೆಗೆ ದ್ವಿಚಕ್ರ ವಾಹನದಲ್ಲಿ ಜಯ ನಗರದ ಸಂಬಂಧಿಕರ ಮನೆಗೆ ತೆರಳುತ್ತಿದ್ದರು. ಬೆಳಗ್ಗೆ ಸುಮಾರು 7ರ ಸುಮಾರಿಗೆ ಗರುಡಾ ಮಾಲ್‌(Garuda Mall) ಬಳಿ ಅತಿವೇಗವಾಗಿ ಟಿಪ್ಪರ್‌ ಚಲಾಯಿಸುತ್ತಿದ್ದ ಚಾಲಕ ಬಲಕ್ಕೆ ತಿರುಗಿಸಲು ಮುಂದಾಗಿ ತಕ್ಷಣ ಎಡಕ್ಕೆ ತಿರುಗಿಸಿದ್ದಾನೆ. ಈ ವೇಳೆ ಪಕ್ಕದಲ್ಲೆ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಟಿಪ್ಪರ್‌ ಡಿಕ್ಕಿಯಾಗಿದ್ದು(Collision), ದ್ವಿಚಕ್ರ ವಾಹನ ಸವಾರ ನವೀನ್‌ ಬಲಕ್ಕೆ ಬಿದ್ದಿದ್ದಾರೆ. ಹಿಂಬದಿ ಕುಳಿತಿದ್ದ ಸಂಜನಾ ಪ್ರಿಯಾ ಎಡಕ್ಕೆ ಬಿದ್ದಿದ್ದಾರೆ. ಈ ವೇಳೆ ಟಿಪ್ಪರ್‌ ಹಿಂಬದಿ ಎಡಚಕ್ರ ಆಕೆಯ ತಲೆ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Accident: ಹಿಟಾಚಿ ಹರಿದು ಮೂರು ವರ್ಷದ ಮಗು ದಾರುಣ ಸಾವು

ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ನವೀನ್‌ಕುಮಾರ್‌ಗೆ ಮೈ-ಕೈಗೆ ಗಾಯಗಳಾಗಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತಕ್ಕೆ(Accident) ಟಿಪ್ಪರ್‌ ವಾಹನ ಚಾಲಕನ ನಿರ್ಲಕ್ಷ್ಯ ಹಾಗೂ ಅತಿವೇಗದ ಚಾಲನೆಯೇ ಕಾರಣ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಘಟನೆ ಬಳಿಕ ಸ್ಥಳದಲ್ಲೇ ಟಿಪ್ಪರ್‌ ವಾಹನ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಟಿಪ್ಪರ್‌ ವಾಹನ ಜಪ್ತಿ ಮಾಡಿದ್ದು, ಚಾಲಕನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎರಡು ಬೈಕುಗಳಿಗೆ ಟಿಪ್ಪರ್‌ ಡಿಕ್ಕಿ: ದಂಪತಿ ಸಾವು

ನವಲಗುಂದ(Navalgund): ರಾಷ್ಟ್ರೀಯ ಹೆದ್ದಾರಿ ಹುಬ್ಬಳ್ಳಿ ಸೊಲ್ಲಾಪುರ(Hubballi-Solapur) ರಸ್ತೆಯಲ್ಲಿ ಟಿಪ್ಪರ್‌ ಒಂದು ಎರಡು ಬೈಕುಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ರೋಣ ಕ್ರಾಸ್‌ ಬಳಿ ಇರುವ ದ್ವಾರಬಾಗಿಲ ಹತ್ತಿರ ಮೃತಪಟ್ಟ ಘಟನೆ ನಡೆದಿದೆ.

ತಾಲೂಕಿನ ಬೆಳವಟಗಿ ಗ್ರಾಮದ ಸುಷ್ಮಾ ಆನಂದ್‌ ಸಿದ್ದಗಿರಿ (32) ಆನಂದ್‌ ನೀಲಪ್ಪ ಸಿದ್ದಗಿರಿ (36) ಮೃತಪಟ್ಟದುರ್ದೈವಿ ದಂಪತಿ ಮೂರು ವರ್ಷದ ಮಗುವನ್ನು ಆಸ್ಪತ್ರೆಗೆ ತೋರಿಸಲು ಬರುತ್ತಿದ್ದಾಗ ಟಿಪ್ಪರ್‌ ಚಾಲಕ ಕುಡಿದ ಅಮಲಿನಲ್ಲಿ ಅವರ ಬೈಕ್‌ಗೆ ಡಿಕ್ಕಿ ಹೊಡೆದು ಅಲ್ಲಿಂದ ಪಾರಾದರೂ, ಮುಂದೆ ಹೋಗಿ ಕಂಬಕ್ಕೆ ಡಿಕ್ಕಿ ಹೊಡೆದು ಅಲ್ಲಿಂದ ಟಿಪ್ಪರ್‌ ಬಿಟ್ಟು ಪರಾರಿಯಾಗಿದ್ದಾನೆ. ಈ ದಂಪತಿ ಮಗು ಮತ್ತು ಇನ್ನೊಬ್ಬ ಬೈಕ್‌ ಸವಾರ ಮಂಜು ಗಾಣಿಗೇರ್‌ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಇನ್ನು ಘಟನಾ ಸ್ಥಳಕ್ಕೆ ಪೊಲೀಸರು ಕ್ಷಣಾರ್ಧದಲ್ಲಿ ಭೇಟಿ ನೀಡಿ ಸುಷ್ಮಾಳನ್ನು ರಕ್ಷಿಸಲು ಪ್ರಯತ್ನಿಸಿದರು. ಆದರೆ ಚಿಕಿತ್ಸೆ ನೀಡುವ ಮುನ್ನವೇ ಆಕೆ ಮೃತಪಟ್ಟಿದ್ದಳು. ಇನ್ನು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Heavy Fog: 11 ವಾಹನ ನಡುವೆ ಸರಣಿ ಅಪಘಾತ: ಇಬ್ಬರ ದುರ್ಮರಣ

ರಾಜಸ್ಥಾನದಲ್ಲಿ ಬೆಳಗಾವಿ ಯೋಧ ಸಾವು

ಬೆಳಗಾವಿ(Belagavi): ರಾಜಸ್ಥಾನದ(Rajasthan) ಬರ್ಮೇರದಲ್ಲಿ ದ್ವಿಚಕ್ರ ವಾಹನ ಅಪಘಾತದಲ್ಲಿ ಗಾಯಗೊಂಡು ಮೃತಪಟ್ಟಿದ್ದ ಬೆಳಗಾವಿ ತಾಲೂಕಿನ ಇದ್ದಲಹೊಂಡ ಗ್ರಾಮದ ಯೋಧ(Soldier) ಬಾಳಪ್ಪ ತಾನಾಜೀ ಮೊಹಿತೆ (32 ಅಂತ್ಯಕ್ರಿಯೆ ಸೋಮವಾರ ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು. ಮದ್ರಾಸ್‌ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಮೃತಯೋಧ ತಾಯಿ, ಪತ್ನಿ, ಮತ್ತು 5 ವರ್ಷದ ಮಗನನ್ನು ಅಗಲಿದ್ದು, ಇಡೀ ಗ್ರಾಮವೇ ದುಃಖದ ಮಡುವಲ್ಲಿ ಮುಳುಗಿತ್ತು.

ಡಿ.31 ರಂದು ರಾತ್ರಿ ರಾಜಸ್ಥಾನದ ಬರ್ಮೆರನಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿ ಮೃತಪಟ್ಟಿದ್ದರು. ಭಾನುವಾರ ರಾತ್ರಿ ರಾಜಸ್ಥಾನದಿಂದ ಯೋಧನ ಪಾರ್ಥೀವ ಶರೀರವನ್ನು ತೆಗೆದುಕೊಂಡು ಬಂದು ಬೆಳಗಾವಿಯ ಮರಾಠಾ ಲಘು ಪದಾತಿದಳ (ಎಂಎಲ್‌ಐಆರ್‌ಸಿ) ಕ್ಯಾಂಪಸ್‌ನಲ್ಲಿ ಇರಿಸಲಾಗಿತ್ತು. ಸೋಮವಾರ ಬೆಳಗ್ಗೆ 9 ಗಂಟೆಗೆ ಸ್ವಗ್ರಾಮ ಇದ್ದಲಹೊಂಡಕ್ಕೆ ಸೇನಾ ವಾಹನದ ಮೂಲಕ ಸಾಗಿಸಿ, ಮಧ್ಯಾಹ್ನ 1.30ರ ಸುಮಾರಿಗೆ ವಿಧಿವಿಧಾನದಂತೆ, ಸಕಲ ಸರ್ಕಾರಿ ಗೌರವ ಸಲ್ಲಿಸಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್
ಪ್ರಧಾನಿಗೆ ಪತ್ರ ಬರೆಯುವುದರಲ್ಲಿ ಸಿದ್ದರಾಮಯ್ಯ, ಡಿಕೆಶಿ ನಿಸ್ಸೀಮರು: ಬಿ.ವೈ.ವಿಜಯೇಂದ್ರ