ಚೌಕಟ್ಟಿಗೆ ಸೀಮಿತವಾಗದೆ ಸಮಾಜಮುಖಿಯಾಗಿ; ಸಚಿವ ಅಶ್ವತ್ಥ್ ನಾರಾಯಣ

Published : Oct 10, 2022, 12:06 PM IST
ಚೌಕಟ್ಟಿಗೆ ಸೀಮಿತವಾಗದೆ ಸಮಾಜಮುಖಿಯಾಗಿ; ಸಚಿವ ಅಶ್ವತ್ಥ್ ನಾರಾಯಣ

ಸಾರಾಂಶ

ಚೌಕಟ್ಟಿಗೆ ಸೀಮಿತವಾಗದೆ ಸಮಾಜಮುಖಿಯಾಗಿ’ ಒಂದೇ ಕ್ಷೇತ್ರಕ್ಕೆ ವ್ಯಕ್ತಿತ್ವ ಸೀಮಿತ ಮಾಡಿಕೊಳ್ಳಲಾಗದು: ಸಚಿವ ಅಶ್ವತ್ಥ ನಾರಾಯಣ

ಬೆಂಗಳೂರು (ಅ.10) : ಕೇವಲ ಒಂದು ಚೌಕಟ್ಟಿಗೆ ಸೀಮಿತವಾಗದೆ ಸಮಾಜಮುಖಿಯಾಗಿ ಬದುಕಿ ಒಳಿತಿಗಾಗಿ ಕೈಜೋಡಿಸಬೇಕು ಶ್ರಮಿಸಬೇಕು ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಡಾ ಸಿ.ಎನ್‌.ಅಶ್ವತ್ಥ ನಾರಾಯಣ ತಿಳಿಸಿದರು. ಅವರು ಕಬ್ಬನ್‌ ಪಾರ್ಕ್ ನಡಿಗೆದಾರರ ಸಂಘ ಹಾಗೂ ಕಬ್ಬನ್‌ ಪಾರ್ಕ್ ನಡಿಗೆದಾರರ ಫೋರಂ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ಮತ್ತು ಮಕ್ಕಳ ಸಾಧಕರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನದಿಯಲ್ಲಿ ತೇಲುತ್ತಿದ್ದ 38 ಲಕ್ಷ ರೂಪಾಯಿ ಮೌಲ್ಯದ 317 ಮೊಬೈಲ್‌ ಫೋನ್‌ ವಶಪಡಿಸಿಕೊಂಡ ಬಿಎಸ್‌ಎಫ್‌!

ಕಬ್ಬನ್‌ ಪಾರ್ಕ್ ಇಡೀ ಬೆಂಗಳೂರಿಗರನ್ನು ಸೆಳೆಯುವ ಅದ್ಭುತ ಸ್ಥಳ. ಅಲ್ಲಿ ಪ್ರತಿದಿನ ನಡೆವ ಆಸೆ ನನಗೂ ಇದೆ. ಆರೋಗ್ಯ ಕಾಪಾಡಿಕೊಳ್ಳಲು, ದಿನನಿತ್ಯದ ಒತ್ತಡ ನಿವಾರಿಸಿಕೊಳ್ಳಲು ಈ ಉದ್ಯಾನ ನೆಲೆಯಾಗಿದೆ. ಇದನ್ನು ವೇದಿಕೆಯಾಗಿಟ್ಟುಕೊಂಡು ಎಲ್ಲರೂ ಒಂದಾಗಿ ಸಮಗ್ರತೆ ಸಾಧಿಸಬೇಕು ಎಂದರು.

ನಾವಿಂದು ಜಾಗತಿಕ ಸ್ಪರ್ಧಾ ಯುಗದಲ್ಲಿದ್ದೇವೆ. ಪ್ರಸ್ತುತ ಒಂದೇ ಕ್ಷೇತ್ರಕ್ಕೆ ವ್ಯಕ್ತಿತ್ವ ಸೀಮಿತ ಮಾಡಿಕೊಳ್ಳಲಾಗದು. ಜ್ಞಾನಾರ್ಜನೆ ವಿಚಾರದಲ್ಲಿ ನಮಗೆ ನಾವೇ ಗಡಿ ಹಾಕಿಕೊಳ್ಳಬಾರದು. ಸಾಧನೆಗಾಗಿ ಸಮಗ್ರ ತಿಳಿವಳಿಕೆ ಅಗತ್ಯವಾಗಿದೆ. ನಮ್ಮ ಮಕ್ಕಳಿಗಾಗಿ ಆರೋಗ್ಯಕರ ಸಮಾಜವನ್ನು ಕಟ್ಟಲು ಮುಂದಾಗೋಣ. ಪಠ್ಯದ ಜೊತೆ ಸಾಂಸ್ಕೃತಿಕ, ಕ್ರೀಡೆ, ಸಾಮಾಜಿಕ ಕಾರ್ಯ, ಸಂವಹನ ಕೌಶಲ, ತಾಂತ್ರಿಕ ಜ್ಞಾನವನ್ನು ವಿಸ್ತರಿಸಿಕೊಳ್ಳಲು ಸಹಕರಿಸೋಣ ಎಂದು ಹೇಳಿದರು. ಪ್ರಶಸ್ತಿ ಪುರಸ್ಕೃತೆ ಡಾಪ್ರತಿಮಾ ಮೂರ್ತಿ, ಸಾಧನೆ ಹಾದಿಯಲ್ಲಿ ಎದುರಾಗುವ ಅಡ್ಡಿ ನಿವಾರಿಸುವ ತಾಳ್ಮೆ ಇಟ್ಟುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು. 

ಓಲಾ, ಉಬರ್ ಕಂಪನಿಗಳ ಕಳ್ಳಾಟಕ್ಕೆ ಇಂದೇ ಬೀಳುತ್ತಾ ಬ್ರೇಕ್..?

ಪ್ರಶಸ್ತಿ ಪ್ರದಾನ

ಈ ವೇಳೆ ನಿಮ್ಹಾನ್ಸ್ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ, ಕ್ರೀಡಾಪಟು ಡಾ ಅಶ್ವಿನಿ ನಾಚಪ್ಪ, ಪತ್ರಕರ್ತೆ ಮಂಜುಶ್ರೀ ಕಡಕೋಳ, ನೃತ್ಯ ಕಲಾವಿದೆ ರೇಖಾ ಸುರೇಶ, ಶೈಕ್ಷಣಿಕ ಕ್ಷೇತ್ರದಲ್ಲಿ ನಿಶಿತಾ ಪೂಜಾರಿ ಸೇರಿ ಸಾಧಕರಿಗೆ ಅಂತಾರಾಷ್ಟ್ರೀಯ ಮಹಿಳಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ ಪುನೀತ್‌ ರಾಜ…ಕುಮಾರ್‌ ಅವರ ಹೆಸರಲ್ಲಿ ನೀಡಲಾಗುವ ಪ್ರಶಸ್ತಿಯನ್ನು ಯುವ ಸಂಗೀತ ನಿರ್ದೇಶಕ ಸುರೇಶ ಅವರಿಗೆ ಪ್ರದಾನ ಮಾಡಲಾಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

20000 ರೈತರ ಜತೆ ಸೇರಿ ಡಿ. 9ಕ್ಕೆ ಸುವರ್ಣಸೌಧಕ್ಕೆ ಮುತ್ತಿಗೆ : ಬಿವೈವಿ
ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ