Bengaluru Pothole: ರಸ್ತೆಗುಂಡಿ ಮುಚ್ಚಲು ನ.19ವರೆಗೆ ಗಡುವು ವಿಸ್ತರಿಸಿಕೊಂಡ ಬಿಬಿಎಂಪಿ

Published : Nov 15, 2022, 03:26 PM IST
Bengaluru Pothole: ರಸ್ತೆಗುಂಡಿ ಮುಚ್ಚಲು ನ.19ವರೆಗೆ ಗಡುವು ವಿಸ್ತರಿಸಿಕೊಂಡ ಬಿಬಿಎಂಪಿ

ಸಾರಾಂಶ

ನಗರದಲ್ಲಿರುವ ಎಲ್ಲ ರಸ್ತೆಗುಂಡಿಗಳನ್ನು ನ.15ರೊಳಗಾಗಿ ಮುಚ್ಚುವುದಾಗಿ ಗಡುವು ಹಾಕಿಕೊಂಡಿದ್ದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‍‌ ಗಿರಿನಾಥ್‌, ಈಗ ಮಳೆಯ ನೆಪವೊಡ್ಡಿ ಈ ಅವಧಿಯನ್ನು ನ.19ರವರೆಗೆ ವಿಸ್ತರಣೆ ಮಾಡಿಕೊಂಡಿದ್ದಾರೆ. 

ಬೆಂಗಳೂರು (ನ.15): ರಾಜಧಾನಿಯಲ್ಲಿನ ಎಲ್ಲ ರಸ್ತೆ ಗುಂಡಿಗಳನ್ನು ನ.15ರೊಳಗೆ ಮುಚ್ಚುವುದಾಗಿ ಭರವಸೆ ನೀಡಿದ್ದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್‍‌ ಗಿರಿನಾಥ್‌, ಗಡುವು ಮುಗಿಯುತ್ತಿದ್ದಂತೆ ಮಳೆಯ ನೆಪವೊಡ್ಡಿಮತ್ತೆ 3 ದಿನಗಳು ಗಡುವು ವಿಸ್ತರಣೆ ಮಾಡಿಕೊಂಡಿದ್ದಾರೆ. ಈವರೆಗೆ 32 ಸಾವಿರಕ್ಕೂ ಅಧಿಕ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದ್ದು, ಇನ್ನೂ 1 ಸಾವಿರ ಗುಂಡಿಗಳು ಮುಚ್ಚುವುದು ಬಾಕಿಯಿದೆ ಎಂದು ಹೇಳಿದ್ದಾರೆ.

ನಗರದಲ್ಲಿ ಮೇ (May) ತಿಂಗಳಿಂದ ಈವರೆಗೆ ಪಾಲಿಕೆ ವತಿಯಿಂದ ಒಟ್ಟು 33 ಸಾವಿರ ರಸ್ತೆ ಗುಂಡಿಗಳನ್ನು (Road Pothole) ಗುರುತಿಸಲಾಗಿದೆ. ಅದರಲ್ಲಿ 32 ಸಾವಿರಕ್ಕೂ ಅಧಿಕ ರಸ್ತೆ ಗುಂಡಿಗಳನ್ಜು ಈಗಾಗಲೇ ಮುಚ್ಚಲಾಗಿದೆ. ಬಾಕಿ 1 ಸಾವಿರ ಗುಂಡಿಗಳನ್ನು ಮುಚ್ಚುವುದು ಬಾಕಿಯಿದೆ. ಈ ಹಿಂದೆ ನ.11ರವರೆಗೆ ಗಡುವು ಕೊಡಲಾಗಿತ್ತು. ಆದರೆ, ಹವಾಮಾನ ವೈಪರೀತ್ಯದ ಕಾರಣ ನಿರಂತರ ಮಳೆ (Rain) ಸುರಿದಿದ್ದರಿಂದ ಗುಂಡಿ ಮುಚ್ಚುವ ಕಾರ್ಯಕ್ಕೆ ಹಿನ್ನಡೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ರಸ್ತೆಗುಂಡಿ ಮುಚ್ಚುವ ಗಡುವನ್ನು ವಿಸ್ತರಣೆ ಮಾಡಲಾಗಿತ್ತು.

ಬೆಂಗಳೂರಿನಲ್ಲಿ ಗುಂಡಿ ಗಂಡಾಂತರ: ಕೋಮಾ ಸೇರಿದ ಬೈಕ್ ಸವಾರ, ಬಿಬಿಎಂಪಿಗೆ ಇನ್ನೆಷ್ಟು ಬಲಿ ಬೇಕು?

ನ.19ರವರೆಗೆ ಗಡುವು: ಹವಾಮಾನ ಇಲಾಖೆ ಇನ್ನೂ ಎರಡು ದಿನಗಳು ಮಳೆ ಬರುವ ಮುನ್ಸೂಚನೆ ನೀಡಿದೆ. ಹೀಗಾಗಿ, ಗುಂಡಿ ಮುಚ್ಚುವ ಕಾರ್ಯಕ್ಕೆ ಸ್ವಲ್ಪ ಸಮಸ್ಯೆಯಾಗಲಿದೆ. ಪೂರ್ಣ ಪ್ರಮಾಣದಲ್ಲಿ ರಸ್ತೆಗುಂಡಿಗಳ ಮುಕ್ತಿಗೆ 2 ದಿನ ಬಿಸಿಲ ವಾತಾವರಣ ಬೇಕಾಗುತ್ತದೆ. ಹೀಗಾಗಿ, ಪಾಲಿಕೆಯ ಎಲ್ಲ ವಲಯ ಆಯುಕ್ತರು, ಇಂಜಿನಿಯರ್‍‌ಗಳು ಹಾಗೂ ಕೆಳಹಂತದ ಅಧಿಕಾರಿಗಳಿಗೆ ನ.19ರೊಳಗೆ ರಸ್ತೆಗುಂಡಿ ಮುಚ್ಚುವುದಕ್ಕೆ ಗಡುವು ನೀಡಲಾಗುತ್ತಿದೆ ಎಂದರು.

ರಸ್ತೆಗುಂಡಿ ಮುಕ್ತ ವಲಯ ಘೋಷಣೆ: ಈವರೆಗೆ ಪ್ರಮುಖ ರಸ್ತೆಗಳಲ್ಲಿನ ಎಲ್ಲ ಗುಂಡಿಗಳನ್ನು ಮುಚ್ಚಲಾಗಿದ್ದು, ವಾರ್ಡ್ ಮಟ್ಟದ ರಸ್ತೆಗಳಲ್ಲಿ (Ward Level Road) ಮಾತ್ರ ಕೆಲವು ಗುಂಡಿಗಳಿವೆ. ಈ ಬಗ್ಗೆ ಸಾರ್ವಜನಿಕರಿಂದ ವಾಟ್ಸ್ಆಪ್ ಮೂಲಕ ದೂರುಗಳು ಬರುತ್ತಿವೆ. ದೂರು (Complaint) ಬಂದ ಎಲ್ಲ ಗುಂಡಿಗಳನ್ನು ಶೀಘ್ರ ಮುಚ್ಚಲಾಗುತ್ತದೆ. ಜೊತೆಗೆ, ಈಗಾಗಲೇ ರಸ್ತೆಗುಂಡಿಗಳನ್ನು ಪೂರ್ಣ ಪ್ರಮಾಣದಲ್ಲಿ ಮುಚ್ಚಲಾಗಿರುವ ವಲಯಗಳನ್ನು ರಸ್ತೆಗುಂಡಿ ಮುಕ್ತ ವಲಯ ಎಂದು ಘೋಷಣೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಬಿಬಿಎಂಪಿ ವಾರ್ಡ್‌ ಮೀಸಲು ಕರಡು ಪಟ್ಟಿ ಇನ್ನೊಂದು ವಾರದಲ್ಲಿ ಪ್ರಕಟ?

ರಾಜಾಜಿನಗರದ ಅಪಘಾತಕ್ಕೆ ಜಲಮಂಡಳಿ ಕಾರಣ: ರಾಜಾಜಿನಗರದ ನಿನ್ನೆ ನಡೆದ ರಸ್ತೆ ಅಪಘಾತಕ್ಕೆ ಜಲಮಂಡಳಿಯಿಂದ (Jalamandali) ಅಗೆಯಲಾಗಿದ್ದ ರಸ್ತೆಗುಂಡಿ ಕಾರಣವಾಗಿದೆ ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್‍‌ ಗಿರಿನಾಥ್‌ (Thushar Girinath) ಸಮರ್ಥಿಸಿಕೊಂಡರು. ರಸ್ತೆಯಲ್ಲಿ ನೀರಿನ ಕೊಳವೆ (Pipe) ಅಳವಡಿಸಲು ಜಲಮಮಂಡಳಿ ಗುಂಡಿ ತೋಡಿದ್ದು, ಕೆಲಸ ಪೂರ್ಣಗೊಂಡ ನಂತರ ಜಲ್ಲಿ ಕಲ್ಲುಗಳಿಂದ ಗುಂಡಿಯನ್ನು ಮುಚ್ಚಿ ಹೋಗಿದ್ದಾರೆ.  ಇದರಿಂದ ಬೈಕ್‌ (Bike)ನಲ್ಲಿ ಹೋಗುವಾಗ ಸ್ಕಿಡ್‌ ಆಗಿ ಯುವಕ ಬಿದ್ದು ಅಪಘಾತ ಸಂಭವಿಸಿದೆ. ಈ ಬಗ್ಗೆ ಪೊಲೀಸ್‌ ಇಲಾಖೆ ತನಿಖೆ ನಡೆಸುತ್ತಿದ್ದು, ಅಂತಿಮವಾಗಿ ವರದಿ ಬಂದ ನಂತರ ಕ್ರಮ ಕೈಗೊಳ್ಳುತ್ತದೆ ಎಂದು ಮಾಹಿತಿ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಈಶ್ವರನ ಫ್ಲೆಕ್ಸ್‌ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು; ಸಾಸ್ವೆಹಳ್ಳಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ
'ಉಪಲೋಕಾಯುಕ್ತರಿಗೆ ಒಂದ್ ನಮಸ್ಕಾರ': ಭ್ರಷ್ಟಾಚಾರದ ಬಗ್ಗೆ ಹೇಳಿಕೆ ನೀಡಲು ಮಾತ್ರ ಅಧಿಕಾರವಿದೆಯೇ? – ಹೆಚ್‌ಡಿಕೆ ವ್ಯಂಗ್ಯ