Murugha Shree POCSO Case: ಮಠದ ಆಡಳಿತದ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಕೆ: ಜಿಲ್ಲಾಧಿಕಾರಿ ದಿವ್ಯಪ್ರಭು

By Sathish Kumar KH  |  First Published Nov 15, 2022, 1:22 PM IST

Murugha Shree POCSO Case:ಪೋಕ್ಸೋ ಪ್ರಕರಣದಡಿ ಮುರುಘಾ ಮಠದ ಶಿವಮೂರ್ತಿ ಶರಣರು ಬಂಧನವಾಗಿರುವ ಬೆನ್ನಲ್ಲೇ, ಮಠ ಮತ್ತು ಅದರ ವಿದ್ಯಾಪೀಠಗಳ ಕಾರ್ಯ ವೈಖರಿ ಕುರಿತಂತೆ ವಿಸ್ತೃತ ವರದಿಯನ್ನು ಚಿತ್ರದುರ್ಗ ಜಿಲ್ಲಾಧಿಕಾರಿ ಜಿ.ಆರ್.ಜೆ. ದಿವ್ಯಪ್ರಭು ಅವರು ಸರ್ಕಾರಕ್ಕೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಕೆ ಮಾಡಿದ್ದಾರೆ. 


ಚಿತ್ರದುರ್ಗ (ನ.15): ಮುರುಘಾ ಮಠದ ಶಿವಮೂರ್ತಿ ಶರಣರು ಪ್ರೌಢಶಾಲಾ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಪೋಕ್ಸೋ ಪ್ರಕರಣದಡಿ ಬಂಧನವಾಗಿದ್ದಾರೆ. ಇದರ ಬೆನ್ನಲ್ಲೇ ಸರ್ಕಾರದಿಂದ ಮುರುಘಾ ಮಠ ಮತ್ತು ವಿದ್ಯಾಪೀಠದ ಕಾರ್ಯ ವೈಖರಿ ಕುರಿತಂತೆ ವಿಸ್ತೃತ ವರದಿಯನ್ನು ಕೇಳಿದ್ದು, ಚಿತ್ರದುರ್ಗ ಜಿಲ್ಲಾಧಿಕಾರಿ ಜಿ.ಆರ್.ಜೆ. ದಿವ್ಯಪ್ರಭು ಅವರು ಮುಚ್ಚಿದ ಲಕೋಟೆಯಲ್ಲಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದಾರೆ. 

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ದಿವ್ಯಪ್ರಭು, ಮುರುಘಾ ಮಠದ (Muruga Mutt) ಸಂಬಂಧ ನ.4 ರಿಂದ ಕಂದಾಯ ಇಲಾಖೆ ಕಾರ್ಯದರ್ಶಿ (Revenue Department) ವಾಸ್ತವಾಂಶದ ಕುರಿತು ವರದಿ ಕೇಳಿದ್ದರು. ಈ ಹಿನ್ನೆಲೆಯಲ್ಲಿ ಮಠ ಹಾಗೂ ಅದರ ಅಧೀನದಲ್ಲಿ ನಡೆಸಲಾಗುತ್ತಿರುವ ವಿದ್ಯಾಸಂಸ್ಥೆಗಳಿಗೆ (Educational Institutions) ಖುದ್ದಾಗಿ ಭೇಟಿ ಮಾಡಿ ಪರಿಶೀಲನೆ ಮಾಡಿದ್ದೇನೆ. ಅಲ್ಲಿರುವ ಆಡಳಿತಾತ್ಮಕ (Administative) ವಿಚಾರದ ಬಗ್ಗೆ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಕೆ ಮಾಡಲಾಗಿದೆ. ಜಿಲ್ಲಾಧಿಕಾರಿ ಸಲ್ಲಿಸಿದ ವರದಿಯನ್ನು ಆಧರಿಸಿ ಸರ್ಕಾರ ಮಠದ ಆಡಳಿತದ ವಿಚಾರವಾಗಿ ಮುಂದಿನ ಕ್ರಮ ಕೈಗೊಳ್ಳಲಿದೆ.

Tap to resize

Latest Videos

75 ಪುಟಗಳ ವರದಿ ಸಲ್ಲಿಕೆ : ಮುರುಘಾ ಮಠ ಮತ್ತು ಅಧೀನ ಸಂಸ್ಥೆಗಳಲ್ಲಿನ ಆಡಳಿತದ ಬಗ್ಗೆ ವಾಸ್ತವಾಂಶಗಳನ್ನು ವರದಿಯಲ್ಲಿ (Report)ದಾಖಲಿಸಲಾಗಿದೆ. ಒಟ್ಟಾರೆ ಅಲ್ಲಿ ಕಂಡುಬಂದ ವಿಚಾರಗಳ ಬಗ್ಗೆ 5 ಪುಟಗಳಲ್ಲಿ ಮಾಹಿತಿ ದಾಖಲು ಮಾಡಿದ್ದು, ಉಳಿದಂತೆ ಮಠ ಮತ್ತು ಸಂಸ್ಥೆಗಳ ಕುರಿತ ಅನುಬಂಧಗಳನ್ನು ಕೂಡ ಸೇರ್ಪಡೆ ಮಾಡಲಾಗಿದೆ. ಒಟ್ಟಾರೆ 73 ರಿಂದ 75 ಪುಟಗಳ (Pages) ಈ ವರದಿ ಸಿದ್ಧಪಡಿಸಲಾಗಿದೆ. ಆಡಳಿತ ಕಾರ್ಯವೈಖರಿ, ಸಿಬ್ಬಂದಿಯ ವೇತನ, ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ (Students) ವಿವರ, ಆಸ್ತಿಗಳು ಮತ್ತಿತರ ಮಾಹಿತಿಯನ್ನು ಒಳಗೊಂಡಿದೆ. ಆದರೆ, ಇದಕ್ಕೆ ಸಂಬಂಧಪಟ್ಟ ಪ್ರಕರಣ ನ್ಯಾಯಾಲಯದಲ್ಲಿ ಇರುವ ಹಿನ್ನೆಲೆಯಲ್ಲಿ ಸಿದ್ಧಪಡಿಸಲಾದ ವರದಿಯನ್ನು ಮುಚ್ಚಿದ ಲಕೋಟೆ (Sealed envelope) ಮಾದರಿಯಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಹೀಗಾಗಿ ವರದಿಯಲ್ಲಿರುವ ಅಂಶಗಳನ್ನು ಬಹಿರಂಗ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ನ್ಯಾಯ ಕೋರಿ ಪಿಎಂ, ಸಿಎಂಗೆ ಮುರುಘಾಶ್ರೀ ಸಂತ್ರಸ್ತೆ ಪತ್ರ

ಆಡಳಿತಾಧಿಕಾರಿ ನೇಮಕಕ್ಕೆ ಸರ್ಕಾರಕ್ಕೆ ಆಗ್ರಹ:
ಮಾಜಿ ಸಚಿವ ಹೆಚ್. ಏಕಾಂತಯ್ಯ (Ekantayya) ಹಾಗೂ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಮುರುಘಾ ಮಠದಲ್ಲಿ ಎಲ್ಲ ಸ್ವಾಮೀಜಿಗಳ ಪೀಠತ್ಯಾಗವನ್ನು ಮಾಡಿ, ಸರ್ಕಾರದಿಂದ ಆಡಳಿತಾಧಿಕಾರಿ (Administrator) ನೇಮಿಸುವಂತೆ ಮನವಿ ಸಲ್ಲಿಸಲಾಗಿತ್ತು. ಜೊತೆಗೆ ಈ ತಂಡವು ಕಳೆದ ತಿಂಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Bommai) ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಠದಿಂದ ಕೂಡಲೇ ಸ್ವಾಮೀಜಿಗಳ ಪೀಠತ್ಯಾಗ ಮಾಡಿಸುವ ಬಗ್ಗೆ ಒತ್ತಡ ಹೇರಿದ್ದರು. ಈ ಮನವಿಯ ಬೆನ್ನಲ್ಲೇ ಸರ್ಕಾರದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರಿಂದ ವರದಿ ತರಿಸಿಕೊಳ್ಳಲಾಗಿದೆ. 

ಚಾರ್ಜ್ ಶೀಟ್ ಹೇಳಿದ ಕರಾಳ ಕಥೆ: ಮುರುಘಾ ಶ್ರೀಗಳಿಗೆ ಮಠದಿಂದ ಗೇಟ್ ಪಾಸ್?

ಉಸ್ತುವಾರಿಯಾಗಿ ಬಸವಪ್ರಭುಸ್ವಾಮೀಜಿ ಕಾರ್ಯ: ಮುರುಘಾ ಮಠದ ಪೂಜಾ ಕೈಂಕರ್ಯಕ್ಕೆ ಅಡ್ಡಿಯಾಗಬಾರದೆಂದು ಬಸವ ಪ್ರಭು ಸ್ವಾಮೀಜಿಯನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಈಗ ಮುರುಘಾ ಶ್ರೀಗಳ ಪ್ರಕರಣ ಕೊನೆಯ ಹಂತ ತಲುಪಿದ್ದು, ದಿನಕ್ಕೊಂದು ತಿರುವ ಪಡೆದುಕೊಳ್ಳುತ್ತಿದೆ. ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಒಟ್ಟಾರೆಯಾಗಿ ಧಾರ್ಮಿಕ ಸ್ಥಳದ ದುರುಪಯೋಗ (Misusage) ಪ್ರಕರಣದ ಅಡಿಯಲ್ಲಿ ಮಠದಿಂದ ದೂರವಿಡಲು ಅವಕಾಶವಿದ್ದು, ಶಿವಮೂರ್ತಿ ಶರಣರಿಗೆ ಮಠದಿಂದ ಗೇಟ್‌ಪಾಸ್‌ ಸಿಗುವ ಸಾಧ್ಯತೆಯಿದೆ. ಇನ್ನು ಜಿಲ್ಲಾಧಿಕಾರಿ ಸಲ್ಲಿಕೆ ಮಾಡಿದ ವರದಿ ಆಧರಿಸಿ ಸರ್ಕಾರದಿಂದ ಆಡಳಿತಾಧಿಕಾರಿ ನೇಮಕ ಮಾಡಿದಲ್ಲಿ ಯಾವೊಬ್ಬ ಸ್ವಾಮೀಜಿಯೂ ಅಧಿಕಾರ ನಡೆಸಲು ಸಾಧ್ಯವಾಗುವುದಿಲ್ಲ.
 

click me!