ವಚನದರ್ಶನ ಕೃತಿ ವಿವಾದ ಬಸವಾಶ್ರಮ ಟ್ರಸ್ಟ್ ಕಾರ್ಯದರ್ಶಿ ನಿವೇದಿತಾ ಹೇಳಿದ್ದೇನು?

By Ravi Janekal  |  First Published Sep 5, 2024, 3:28 PM IST

ಗದಗಿನ ಸದಾಶಿವಾನಂದ ಸ್ವಾಮೀಜಿ ಸಂಪಾದಕತ್ವದ 'ವಚನದರ್ಶನ' ಪುಸ್ತಕಕ್ಕೆ ಭಾರೀ ವಿವಾದ ವ್ಯಕ್ತವಾಗಿದ್ದು, ರಾಜ್ಯಸರ್ಕಾರವೇ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಒತ್ತಾಯ ಕೇಳಿಬಂದಿದೆ.


ಬೆಳಗಾವಿ (ಸೆ.5): ಗದಗಿನ ಸದಾಶಿವಾನಂದ ಸ್ವಾಮೀಜಿ ಸಂಪಾದಕತ್ವದ 'ವಚನದರ್ಶನ' ಪುಸ್ತಕಕ್ಕೆ ಭಾರೀ ವಿವಾದ ವ್ಯಕ್ತವಾಗಿದ್ದು, ರಾಜ್ಯಸರ್ಕಾರವೇ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಒತ್ತಾಯ ಕೇಳಿಬಂದಿದೆ.

ಈ ಬಗ್ಗೆ ಏಷ್ಯಾನೆಟ್ ಸುವರ್ಣನ್ಯೂಸ್‌ ಪ್ರತಿನಿಧಿಯೊಂದಿಗೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ನಾಗನೂರಿನಲ್ಲಿರು ಬಸವಾಶ್ರಮ ಟ್ರಸ್ಟ್ ಕಾರ್ಯದರ್ಶಿ ನಿವೇದಿತಾ ಪ್ರತಿಕ್ರಿಯೆ ನೀಡಿದ್ದು, ಈ ಪುಸ್ತಕದಲ್ಲಿ ಬಸವಣ್ಣನ ವ್ಯಕ್ತಿತ್ವ ತಿರುಚುವ ಕೆಲಸ ಮಾಡಲಾಗಿದೆ. ಎಲ್ಲರಿಗೂ ಗೊತ್ತಿರುವಂತೆ ಶರಣರು, ಬಸವಾದಿ ಪ್ರಮುಖರು ಯಾವುದೇ ವೈದಿಕ ಪರಂಪರೆ ನಂಬಿಲ್ಲ, ಬೆಂಬಲಿಸಿಲ್ಲ. ವೈದಿಕ ಪರಂಪರೆಯನ್ನು ಬಸವಣ್ಣನವರು ವಿರೋಧ ಮಾಡುತ್ತಲೇ ಬಂದಿದ್ದಾರೆ. ಹೋಮಹವನ, ಬಲಿ ಕೊಡುವುದನ್ನು ಬಸವಣ್ಣ ವಿರೋಧ ಮಾಡಿದ್ದರು ಇಷ್ಟಲಿಂಗ ಅವಿಷ್ಕಾರ ಮಾಡಿ ಲಿಂಗಾಯತ ಧರ್ಮ ಕಟ್ಟಿರುವುದು ನಮ್ಮೆಲ್ಲರಿಗೂ ಗೊತ್ತಿರುವ ಸಂಗತಿ. ಹೀಗಿದ್ದರೂ ಬಸವಣ್ಣ ವೈದಿಕತೆ ಒಪ್ಪಿದ್ರು, ವೇದ ಉಪನಿಷತ್ತು ವಿರೋಧ ಮಾಡಿಲ್ಲ ಎಂದು ಈ ಪುಸ್ತಕದಲ್ಲಿ ಬಿಂಬಿಸಲಾಗ್ತಿದೆ. ಲಿಂಗಾಯತ ಸ್ವತಂತ್ರ ಧರ್ಮ ಹತ್ತಿಕ್ಕುವ ಪ್ರಯತ್ನದ ಭಾಗವಾಗಿ ಈ ಪುಸ್ತಕ ರಚಿಸಲಾಗಿದೆ ಎಂದು ಆರೋಪಿಸಿದರು.

Latest Videos

undefined

ಏನಿದು ವಚನ ದರ್ಶನ ವಿವಾದ? ಸದಾಶಿವಾನಂದ ಮಹಾಸ್ವಾಮೀಜಿ ಹೇಳೋದೇನು?

ಲಿಂಗಾಯತರು ಹಿಂದೂಗಳಲ್ಲ:

ಲಿಂಗಾಯತರು ಹಿಂದೂಗಳಲ್ಲ, ನಾನಷ್ಟೇ ಅಲ್ಲ, ಯಾವ ಲಿಂಗಾಯತರು ಒಪ್ಪುವುದಿಲ್ಲ. ಹಿಂದೂ ಧರ್ಮ ಎನ್ನುವುದು ಎಷ್ಟು ಸರಿ ನನಗೆ ಗೊತ್ತಿಲ್ಲ. ಹಿಂದೂ ಎಂಬುದು ಜೀವನ ಪದ್ಧತಿ. ಹಿಂದೂಸ್ತಾನದಲ್ಲಿರುವ ಎಲ್ಲರೂ ಹಿಂದುಗಳೇ, ಅವರು ಹಿಂದೂಗಳಾಗಿ ಬದುಕುತ್ತಾರೆ. ಧರ್ಮ ಅಂತಾ ಬಂದಾಗ ನಾವು ಹಿಂದೂ ಧರ್ಮದಿಂದ ಬೇರ್ಪಟ್ಟವರು, ಲಿಂಗಾಯತ ಧರ್ಮದವರು. ನಾವು ಬಹುದೇವೋಪಾಸನೆ ಮಾಡಲ್ಲ, ಬಲಿಗಳನ್ನು ಕೊಡುವುದಿಲ್ಲ. ಲಿಂಗ ತಾರತಮ್ಯ ‌ನಮ್ಮಲ್ಲಿಲ್ಲ, ನಮ್ಮಲ್ಲಿ ವರ್ಣಾಶ್ರಮ, ವರ್ಗಾಶ್ರಮದ ಬೇಧವಿಲ್ಲ. ಗುರುವಿನಿಂದ ಗುರು ಆಗುವ ಪರಂಪರೆ ಲಿಂಗಾಯತ ಧರ್ಮದಲ್ಲಿದೆ. ಲಿಂಗಾಯತ ಧರ್ಮದವನ್ನು ಬೇರೆ ಧರ್ಮದ ಜೊತೆಗೆ ಜೋಡಿಸಿದ್ರೆ ತುಲನೆ ಮಾಡಿದ್ರೆ ನಾವು ಒಪ್ಪಲ್ಲ ಎಂದಿದ್ದಾರೆ.

ಲಿಂಗಾಯತ ಧರ್ಮ ಹೋರಾಟ ಹತ್ತಿಕ್ಕಲು ಇಂತಹ ಪ್ರಯತ್ನಗಳು ನಡೆದಿವೆ. ನಮ್ಮ ಧರ್ಮದ ಹಲವರಲ್ಲಿ ವಚನ ಸಾಹಿತ್ಯದ ಬಗ್ಗೆ ಜಾಗೃತಿ ಇಲ್ಲ, ತಿಳಿವಳಿಕೆ ಇಲ್ಲ. ಈ ಕಾರಣಕ್ಕೆ ಕೆಲವರು ಹಿಂದೂ ಲಿಂಗಾಯತ ಒಂದೇ ಎಂದು ಜನರ ತಲೆಯಲ್ಲಿ ತುಂಬುತ್ತಿದ್ದಾರೆ. ಈ ರೀತಿ ಮಾಡಿದ್ರೆ ಲಿಂಗಾಯತ ಧರ್ಮದ ಹೋರಾಟಕ್ಕೆ ಬಹಳಷ್ಟು ಜನ ಸಪೋರ್ಟ್ ಮಾಡಲ್ಲ ಎಂಬುದು ಅವರ ಉದ್ದೇಶವಾಗಿದೆ. ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಗಬಾರದು ಎಂಬ ಉದ್ದೇಶದಿಂದಲೇ ಈ ಪುಸ್ತಕ ರೂಪಿಸಲಾಗಿದೆ. ಹೋರಾಟದಲ್ಲಿ ಪಾಲ್ಗೊಂಡ ಸದಾಶಿವಾನಂದ ಸ್ವಾಮೀಜಿಯೇ ಈ ರೀತಿ ಪುಸ್ತಕ ಬರೆದಿದ್ದೇಕೆ ಎಂಬುದು ತಿಳಿಯುತ್ತಿಲ್ಲ. ಹೋರಾಟದಿಂದ ಹೊರಗೆ ಯಾಕೆ ಬಂದರು ಎಂಬುದು ನಮಗೆ ಗೊತ್ತಿಲ್ಲ. ಆದರೆ ಈ ಪುಸ್ತಕಕ್ಕೆ ನಮ್ಮ ವಿರೋಧವಿದೆ ಎಂದಿದ್ದಾರೆ.

ವಚನದರ್ಶನ ಪುಸ್ತಕ ಪ್ರಚಾರ ಕಾರ್ಯ ಸಂಘದಿಂದ ನಡೆಯುತ್ತಿರುವುದೇಕೆ ಎಂದು ತಿಳಿಯುತ್ತಿಲ್ಲ. ಪುಸ್ತಕ ಲೋಕಾರ್ಪಣೆ ವೇಳೆ ಬಸವತತ್ವ ಮಠಾಧೀಶರು ಇರಲಿಲ್ಲ. ಇಷ್ಟು ದಿನ ಬಸವಣ್ಣನವರನ್ನು ವಿರೋಧಿಸಿದವರೇ ಇಂದು ಬಸವಣ್ಣ ಹೆಸರಿನ ಪುಸ್ತಕ ಲೋಕಾರ್ಪಣೆಗೊಳಿಸಿದ್ದಾರೆ. ವಚನ ದರ್ಶನ ಪುಸ್ತಕದ ಬಗ್ಗೆ ಎಲ್ಲ ಕಡೆಯೂ  ಹೋರಾಟ ಆರಂಭವಾಗಿದೆ. ದೊಡ್ಡ ದೊಡ್ಡ ಮಠಾಧೀಶರು ದ್ವನಿ ಎತ್ತುತ್ತಿದ್ದಾರೆ. ಮಾಧ್ಯಮಗಳು ನಮಗೂ ಪ್ರಚಾರ ಕೊಡಬೇಕು ಎಂದು ಮನವಿ ಮಾಡಿಕೊಂಡರು.

ಹಿಂದೂ ಧರ್ಮವೇ ಅಲ್ಲ, ಇದೊಂದು ಆನೈತಿಕ, ಅನಾಚಾರ: ಪಂಡಿತರಾಧ್ಯ ಶ್ರೀ

ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯನವರ ಬಗ್ಗೆ ನಮಗೆ ಹೆಮ್ಮೆ ಇದೆ. ಪಠ್ಯದಲ್ಲಿದ್ದ ವೀರಶೈವ ಪದವನ್ನೂ ಸಿದ್ದರಾಮಯ್ಯನವರು ತೆಗೆದುಹಾಕಿದರು. ಸಿಎಂ ಸಿದ್ದರಾಮಯ್ಯ ಅವರು ಈ ಪುಸ್ತಕದ ಬಗ್ಗೆ ಅಧ್ಯಯನ ಮಾಡಬೇಕು, ಅದಕ್ಕಾಗಿ ಸಮಿತಿ ರಚಿಸಬೇಕು. ವಚನ ದರ್ಶನ ಪುಸ್ತಕ ಮುಟ್ಟುಗೋಲು ಹಾಕಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

click me!