'ನಾನು ಸರಿಯಾದ ಶಿಕ್ಷಣ ಇಲ್ಲದ ವಿದ್ಯಾರ್ಥಿ, ಅದರ ಮಹತ್ವ ಅರಿವಿದೆ ..'; ಡಿಕೆ ಶಿವಕುಮಾರ ಮಾತು

By Ravi Janekal  |  First Published Sep 5, 2024, 1:32 PM IST

ಕನಕಪುರ, ವಿಧಾನಸೌಧದಲ್ಲಿ ಶಿಕ್ಷಕರ ದಿನಾಚರಣೆ ನಡೆಯುತ್ತಿದೆ. ಆದರೆ ನಾನು ಅಲ್ಲಿ ಎಲ್ಲಿಗೂ ಹೋಗದೆ ಇಲ್ಲಿಗೆ ನೇರವಾಗಿ ಬಂದಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ನುಡಿದರು. 


ಬೆಂಗಳೂರು (ಸೆ.5): ಕನಕಪುರ, ವಿಧಾನಸೌಧದಲ್ಲಿ ಶಿಕ್ಷಕರ ದಿನಾಚರಣೆ ನಡೆಯುತ್ತಿದೆ. ಆದರೆ ನಾನು ಅಲ್ಲಿ ಎಲ್ಲಿಗೂ ಹೋಗದೆ ಇಲ್ಲಿಗೆ ನೇರವಾಗಿ ಬಂದಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ನುಡಿದರು. 

ಇಂದು ಕ್ವೀನ್ಸ್ ರಸ್ತೆಯ ಭಾರತ್ ಜೋಡೋ ಭವನದಲ್ಲಿ ನಡೆಯುತ್ತಿರುವ ಶಿಕ್ಷಕರ ದಿನಾಚರಣೆ ಹಾಗೂ ದಿ.ರಾಜೀವ್ ಗಾಂಧಿ ರಾಜ್ಯಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಕ್ಷರ ಕಲಿಸುವ ಶಿಕ್ಷಕರು ಸೈನಿಕರು. ಶಿಕ್ಷಕರು ಉತ್ತಮ ವಿದ್ಯಾರ್ಥಿಗಳನ್ನು ರೂಪಿಸಿ ಕಳುಹಿಸುತ್ತಾರೆ. ನಾವ್ಯಾರೂ ವಿದ್ಯೆ ಕಲಿಸಿದ ಗುರುಗಳನ್ನು ಮರೆಯಲು ಸಾಧ್ಯವಿಲ್ಲ. ರಾಜಕಾರಣಿಗಳನ್ನು ಜನರು ಬೇಗ ಮರೆತು ಹೋಗುತ್ತಾರೆ. ಆದರೆ ಶಿಕ್ಷಕರನ್ನು ಮರೆಯಲು ಆಗೊಲ್ಲ ಎಂದರು.

Latest Videos

undefined

ತುಂಗಭದ್ರಾ ಡ್ಯಾಂಗೆ ಗೇಟ್‌ ಇಟ್ಟವರಿಗೆ ಸರ್ಕಾರದಿಂದ ಪ್ರಶಸ್ತಿ ಪ್ರದಾನ: ಡಿ.ಕೆ.ಶಿವಕುಮಾರ್

ತಂದೆ, ತಾಯಿ ಮಾತನ್ನೂ ಕೇಳದ ಮಕ್ಕಳು ಶಿಕ್ಷಕರು ಹೇಳಿಕೊಟ್ಟಿದನ್ನ ಕಲಿಯುತ್ತಾರೆ. ನಾನು ಸರಿಯಾದ ಶಿಕ್ಷಣ ಇಲ್ಲದ ವಿದ್ಯಾರ್ಥಿ. ಶಿಕ್ಷಣದ ಬೆಲೆ ಏನು ಅಂತಾ ನನಗೆ ಅರಿವಿದೆ. ತುಂಬಾ ತಡವಾಗಿ ಗ್ಯಾಜ್ಯುಯೇಟ್ ಪಡೆದಿದ್ದೇನೆ ಎಂದರು ಇದೇ ವೇಳೆ ನಾಳೆ ಎತ್ತಿನಹೊಳೆ ಕಾರ್ಯಕ್ರಮ ಇರೋದ್ರಿಂದ ಹೀಗಾಗಿ ಇಂದು ಸಚಿವ ಸಂಪುಟ ಸಭೆಗೂ ಹೋಗುತ್ತಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ ಚಂದ್ರಶೇಖರ್, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ರಾಜೀವ್ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನಾನು ಶಾಸಕನಾಗಿ ಮೊದಲು‌ಹೋದಾಗ ಒಂದು ವಿಷಯ ಗೊತ್ತಾಯ್ತು. ಶಿಕ್ಷಣ ಇಲ್ಲದೆ ರಾಜಕಾರಣಿ ಆಗಬಾರದು ಎಂಬುದು. ಆಗ ದೊಡ್ಡ ರಾಜಕಾರಣಿಗಳು ಇದ್ರು. ರಾಮಕೃಷ್ಣ ಹೆಗಡೆಯಂತಹ ರಾಜಕಾರಣಿ ಇದ್ರು. ಆಗಲೇ ಶಿಕ್ಷಣದ ಮಹತ್ವ ಅರಿವಿಗೆ ಬಂತು. ನಾನು ತಡವಾಗಿಯಾದ್ರೂ ಗ್ರಾಜ್ಯುಯೆಟ್ ಮಾಡಿಕೊಂಡೆ ಎಂದರು.

ಮೂರು ಪಂಚಾಯ್ತಿಗೊಂದು ಪಬ್ಲಿಕ್ ಶಾಲೆ ಮಾಡುತ್ತಿದ್ದೇವೆ. 50 ಸಾವಿರ ಶಿಕ್ಷಕರು ಬೇಕು, ಈಗ 10 ಸಾವಿರ ತೆಗೆದುಕೊಂಡಿದ್ದೇವೆ. ಮುಂದಿನ ಐದು ವರ್ಷದಲ್ಲಿ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತೇವೆ. ಇದಕ್ಕೆ ಸಿಎಸ್‌ಆರ್ ಫಂಡ್ ಬಳಕೆ ಮಾಡುತ್ತಿದ್ದೇವೆ. ನಮ್ಮ ಮಕ್ಕಳು ಗ್ಲೋಬಲ್ ಮಟ್ಟದಲ್ಲಿ ಸ್ಪರ್ಧೆ ಮಾಡಬೇಕಿದೆ. ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ‌ಓದಿ ‌ಈ ಬಾರಿ ಫಸ್ಟ್ ಬಂದು ಸಿಟಿಗಿಂತ ಹಳ್ಳಿಯಲ್ಲಿ ಮಕ್ಕಳು ಹೆಚ್ಚು ಓದುತ್ತಿದ್ದಾರೆ. ಹಿಂದಿಗಿಂತಲೂ ಶಿಕ್ಷಕರ ಜವಾಬ್ದಾರಿ ಹೆಚ್ಚಿದೆ. ಹಿಂದೆ ದೊಣ್ಣೆಯಿಂದ ಹೊಡಿತಾ ಇದ್ರು ಅದನ್ನ ಪ್ರಸಾದ ಅಂತಾ ಸ್ವೀಕಾರ ಮಾಡ್ತಾ ಇದ್ವಿ. ಆದರೆ ಈಗಿನ ಮಕ್ಕಳಿಗೆ ಹೊಡೆಯದೆ ಶಿಕ್ಷಣ ಕಲಿಸಬೇಕಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ಇಂತಹ ವ್ಯತ್ಯಾಸ ಆಗಿದೆ ಎಂದರು.

ಕೇರಳದಂತೆ ಕನ್ನಡ ಚಿತ್ರರಂಗದಲ್ಲಿ ಮೀಟೂ ಪ್ರಕರಣ ವಿಚಾರ  ಸಂಬಂಧ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ ಅವರು Me too ಅಂದ್ರೆ ಏನು? ಎಂದು ಮಾಧ್ಯಮಗಳನ್ನೇ ಪ್ರಶ್ನಿಸಿದರು. ಮುಂದುವರಿದು, ನನಗೆ ಅದರ ಬಗ್ಗೆ ಗೊತ್ತಿಲ್ಲ. ತಿಳಿದುಕೊಂಡು ಮಾತನಾಡುತ್ತೇನೆ ಎಂದರು.

ಡಿಕೆ ಶಿವಕುಮಾರ್ ಕಾಲೇಜು ದಿನದ ಯೆಝಡಿ ಬೈಕ್‌ಗೆ ಕನ್ನಡದಲ್ಲೇ ಆನಂದ್ ಮಹೀಂದ್ರ ಕಮೆಂಟ್!

ಇನ್ನು ಎತ್ತಿನಹೊಳೆ ಯೋಜನೆಗೆ ಚಾಲನೆ ವಿಚಾರ ಪ್ರಸ್ತಾಪಿಸಿದ ಡಿಕೆ ಶಿವಕುಮಾರ ಅವರು, ಅಂತರ್ಜಲ ಹೆಚ್ಚಿಸುವ ಪ್ರಯತ್ನ ಮಾಡುತ್ತಿದ್ದೇವೆ. ಕೆಲವರು ನೀರು ತರೋಕೆ ಆಗೊಲ್ಲ. ನಾವು ಮೀಸೆ ಬೋಳಿಸಿಕೊಳ್ತೇವೆ ಅಂದ್ರು. ಈಗ ವಾಣಿ ವಿಲಾಸದವರೆಗೆ ನೀರು ಹೋಗ್ತಿದೆ. ಮುಂದೆ ಎಲ್ಲ ಕಡೆಯೂ ನೀರು ಹರಿಯಲಿದೆ.  ಪಾರ್ಟಿ ಲೀಡರ್ಸ್ ಗೆ ರಿಕ್ವೆಸ್ಟ್ ಮಾಡಿದ್ದೇನೆ.  ಹಬ್ಬ ವರ್ಷ ವರ್ಷ ಬರುತ್ತದೆ.  ಆದರೆ ನಾಳೆಯ ಹಬ್ಬ ಮತ್ತೆ ಬರಲ್ಲ. ಅದಕ್ಕೆ  ಎಲ್ಲರೂ ಬರಬೇಕೆಂದು ಕೇಳಿಕೊಂಡಿದ್ದೇನೆ. ನಾಳೆ ಕಾರ್ಯಕ್ರಮ ಹಿನ್ನೆಲೆ ನಾನು ಸಂಪುಟ ಸಭೆಯಲ್ಲಿ ಭಾಗಿಯಾಗಲ್ಲ. ನಾನು ಪೂರ್ವಸಿದ್ಧತೆ ನೋಡಬೇಕಿದೆ. ಹಾಗಾಗಿ ಅಲ್ಲಿಗೆ ಭೇಟಿ ನೀಡ್ತಿದ್ದೇನೆ ಎಂದರು.

ಇನ್ನು ಬೆಂಗಳೂರು ಗಾರ್ಬೇಜ್ ಸಿಟಿ ಎಂಬ ಆರೋಪಕ್ಕೆ ತಿರುಗೇಟು ನೀಡಿದ ಅವರು, ಬಿಜೆಪಿಯವರು ಇರೋದೇ ಆರೋಪ ಮಾಡೋದಕ್ಕೆ. ನಾನು ಶುದ್ಧಿ ಮಾಡಬೇಕು ಅಂತಾ ಹೊರಟಿದ್ದೇನೆ. ಇದಕ್ಕಾಗಿಯೇ ಹೈದ್ರಬಾದ್ ಚೆನ್ನೈಗೆ ಹೋಗಿದ್ದೆ. ಅಲ್ಲಿನ ವ್ಯವಸ್ಥೆಯ ಬಗ್ಗೆ ನೋಡಿಕೊಂಡು ಬಂದಿದ್ದೇನೆ. ನಾನು ಬಿಜೆಪಿಯವರ ಆರೋಪಗಳ ಬಗ್ಗೆ ಮಾತನಾಡಲ್ಲ. ನಮ್ಮ ಕೆಲಸವೇ ಅವರಿಗೆ ಉತ್ತರ ಕೊಡುತ್ತದೆ ಎಂದರು.

click me!