ಮೀಸಲಾತಿ ಪ್ರಮಾಣ ತಿಳಿದ ಬಳಿಕ ಮುಂದಿನ ತೀರ್ಮಾನ: ಬಸವಜಯ ಮೃತ್ಯುಂಜಯ ಸ್ವಾಮೀಜಿ

By Govindaraj S  |  First Published Dec 29, 2022, 10:05 PM IST

ಪಂಚಮಸಾಲಿ ಸಮುದಾಯಕ್ಕೆ ಸರ್ಕಾರ ಪ್ರತ್ಯೇಕ ಮೀಸಲಾತಿ ಘೋಷಣೆ ಮಾಡಿದೆ. ಈ ಮೂಲಕ ಒಂದು ಹಂತದಲ್ಲಿ ಸರ್ಕಾರ ಒಂದು ಹೆಜ್ಜೆ ಮುಂದಿಟ್ಟಿದೆ. ಸಚಿವ ಸಂಪುಟ ಸಭೆ ಮೂಲಕ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. 


ಬೆಳಗಾವಿ (ಡಿ.29): ಪಂಚಮಸಾಲಿ ಸಮುದಾಯಕ್ಕೆ ಸರ್ಕಾರ ಪ್ರತ್ಯೇಕ ಮೀಸಲಾತಿ ಘೋಷಣೆ ಮಾಡಿದೆ. ಈ ಮೂಲಕ ಒಂದು ಹಂತದಲ್ಲಿ ಸರ್ಕಾರ ಒಂದು ಹೆಜ್ಜೆ ಮುಂದಿಟ್ಟಿದೆ. ಸಚಿವ ಸಂಪುಟ ಸಭೆ ಮೂಲಕ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ನಗರದಲ್ಲಿ ಗುರುವಾರ ರಾತ್ರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 3ಬಿಯಿಂದ 2ಡಿ ವರ್ಗಕ್ಕೆ ಲಿಂಗಾಯತ ಸಮುದಾಯವನ್ನು ಸೇರಿಸುವುದಾಗಿ ಘೋಷಣೆ ಮಾಡಿದೆ. 

ಆದರೆ, ಎಷ್ಟು ಪ್ರಮಾಣದಲ್ಲಿ ಮೀಸಲಾತಿ ಸಿಗುತ್ತದೆ? ಎಲ್ಲ ಲಿಂಗಾಯತರಿಗೂ ಕೂಡಿ ಮಾಡಿದ್ದಾರೋ? ಎನ್ನುವುದು ಮಾಹಿತಿ ಅಸ್ಪಷ್ಟವಾಗಿದೆ. ಗೊಂದಲದಿಂದ ಕೂಡಿದೆ. ಸರ್ಕಾರದ ಈ ನಿರ್ಧಾರದಿಂದ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಹೇಳುವುದಿಲ್ಲ. ತಾತ್ವಿಕ ಒಪ್ಪಿಗೆ ನೀಡಿದೆ ಎಂದು ವಿವರಿಸಿದರು. ಸಮುದಾಯಕ್ಕೆ ಪೂರಕವಾಗುವಂತಹ ಚರ್ಚೆಯನ್ನು ಸರ್ಕಾರ ಸಂಪುಟ ಸಭೆಯಲ್ಲಿ ಮಾಡಿದೆ. ಈ ಕುರಿತು ನಮಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ಎರಡ್ಮೂರು ದಿನಗಳಲ್ಲಿ ಸಮಾಜದ ಮುಖಂಡರ ಜೊತೆಗೆ ಚರ್ಚಿಸಿ ನಮ್ಮ ಮೀಸಲಾತಿ ಪ್ರಮಾಣ ಎಷ್ಟಿದೆ ಎಂಬುದನ್ನು ತಿಳಿಯುತ್ತೇವೆ. 

Tap to resize

Latest Videos

ಆರೋಪ ಪ್ರೂವ್ ಮಾಡಿದ್ರೆ ನಾನು ಇವತ್ತೇ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ: ಕೂಡಲ ಶ್ರೀಗೆ ಸಚಿವ ನಿರಾಣಿ ಸವಾಲ್

ಆ ಬಳಿಕವಷ್ಟೇ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಹೋರಾಟ ನಿರಂತರವಾಗಿರುತ್ತದೆ. ಸರ್ಕಾರದ ಮೇಲೆ ಯಾವ ರೀತಿ ಒತ್ತಡ ಹಾಕಬೇಕು ಎನ್ನುವುದರ ಕುರಿತು ಚರ್ಚಿಸಲಾಗುವುದು ಎಂದು ತಿಳಿಸಿದರು. ಮೀಸಲಾತಿ ಘೋಷಣೆ ವಿಚಾರದಲ್ಲಿ ರಾಜ್ಯಕ್ಕೆ ನಾವು ಸ್ಪಷ್ಟಸಂದೇಶ ನೀಡುತ್ತೇವೆ. ನಮ್ಮ ಸಮುದಾಯಕ್ಕೆ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ದೊರೆಯಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಮಾಜಿ ಶಾಸಕ ವಿಶ್ವನಾಥ ಪಾಟೀಲ ಮೊದಲಾದವರು ಉಪಸ್ಥಿತರಿದ್ದರು.

ಮೀಸಲಾತಿಯಲ್ಲಿ ಹೊಂದಾಣಿಕೆಯಾಗುವ ಪ್ರಶ್ನೆಯೇ ಇಲ್ಲ-ವಿಜಯಾನಂದ ಕಾಶಪ್ಪನವರ: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವ ವಿಚಾರದಲ್ಲಿ ಗೊಂದಲ ಪ್ರಶ್ನೆಯೇ ಇಲ್ಲ. ನಾವು ಶೇ.15 ರಷ್ಟುಮೀಸಲಾತಿ ಕೇಳಿದ್ದೇವೆ. ಇದರಲ್ಲಿ ಯಾವುದೇ ಹೊಂದಾಣಿಕೆ ಪ್ರಶ್ನೆಯೇ ಇಲ್ಲ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು 2ಎ ಮೀಸಲಾತಿ ಕೇಳಿದ್ದೆವು. ಲಿಂಗಾಯತ ಸಮುದಾಯದ 108 ಒಳಪಂಗಡಗಳಿವೆ. 

ಈಗಾಗಲೇ 38 ಪಂಗಡಗಳು 2ಎ ಮೀಸಲಾತಿ ಪಡೆಯುತ್ತಿವೆ. ಅದೇ ಮೀಸಲಾತಿ ನಮಗೆ ಕೊಡುವಂತೆ ನಾವು ಬೇಡಿಕೆ ಇಟ್ಟಿದ್ದೆವು. ಆ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ಸಭೆಯಲ್ಲಿ ಚರ್ಚಿಸಿ, 2ಡಿ ಪ್ರತ್ಯೇಕ ಮೀಸಲಾತಿ ಕೊಡುವುದಾಗಿ ವಿಶ್ವಾಸ ಕೊಟ್ಟಿದ್ದರು. ಅದೇ ರೀತಿ ಮಾಡಿದ್ದಾರೆ ಎಂದರು. ಮೀಸಲಾತಿ ವಿಚಾರವಾಗಿ ಸರ್ಕಾರದ ಮಾಹಿತಿ ಸ್ಪಷ್ಟವಾಗಿಲ್ಲ. ಅಧಿಕೃತ ಮಾಹಿತಿ ಪಡೆಯುತ್ತೇವೆ. ಬಳಿಕ ನಮ್ಮ ಸಮಾಜದ ನಾಯಕರೊಂದಿಗೆ ಚರ್ಚೆ ಮಾಡಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

ಎರಡು ಹೊಸ ಪ್ರವರ್ಗಗಳ ರಚನೆಗೆ ನಿರ್ಧಾರ: ವೀರಶೈವ ಲಿಂಗಾಯತ ಮತ್ತು ಇತರರಿಗೆ 2ಡಿ ಪ್ರವರ್ಗ ಸೃಷ್ಟಿಯಾಗಿದ್ದು, ಹಾಲಿ ಇರುವ 3ಬಿ ಪ್ರವರ್ಗ ರದ್ದಾಗಿದೆ. ಅಲ್ಲದೇ ಒಕ್ಕಲಿಗ ಸಮುದಾಯ ಮತ್ತು ಇತರರಿಗೆ 2ಸಿ ಪ್ರವರ್ಗ ಸೃಷ್ಟಿಸಲಾಗಿದ್ದು, ಹಾಲಿ 3ಎ  ಪ್ರವರ್ಗ ರದ್ದು ಮಾಡಲಾಗಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕೊಡುವ ಸಲುವಾಗಿ ಎರಡು ಹೊಸ ಪ್ರವರ್ಗಗಳ ರಚನೆಗೆ ನಿರ್ಧಾರ ಮಾಡಲಾಗಿದ್ದು, ಈ ಎರಡೂ ಸಮುದಾಯಗಳಿಗೆ ರಾಜಕೀಯ ಮೀಸಲಾತಿ ಈಗಿರುವಂತೆಯೇ ಮುಂದುವರೆಯಲಿದೆ. ಇನ್ನು ಹಾಲಿ 2ಎ ಮತ್ತು 2ಬಿ ಪ್ರವರ್ಗಗಳು ಹಾಲಿ ಇರುವಂತೆ ಮುಂದುವರೆಯುತ್ತವೆ. 

ಪಂಚಮಸಾಲಿ ಅಹೋರಾತ್ರಿ ಧರಣಿ ವಾಪಸ್‌: ತಾತ್ಕಾಲಿಕವಾಗಿ ಹಿಂತೆಗೆತ

ಇವತ್ತಿನ ಸಂಪುಟ ಸಭೆಯಲ್ಲಿ ಮೀಸಲಾತಿ ಪ್ರಮಾಣ ನಿಗದಿ ಮಾಡಿಲ್ಲ. ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಕೇಂದ್ರದ 10% ನಡಿ ಪಂಚಮಸಾಲಿ ಮತ್ತು ಒಕ್ಕಲಿಗರಿಗೆ ಮೀಸಲಾತಿ ‌ಪ್ರಮಾಣ ನಿಗದಿ ಮಾಡಲು ನಿರ್ಧಾರ ಮಾಡಲಾಗಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಕೇಂದ್ರದ 10% ನಡಿ ಪಂಚಮಸಾಲಿ ಮತ್ತು ಒಕ್ಕಲಿಗರಿಗೆ ಮೀಸಲಾತಿ ‌ಪ್ರಮಾಣ ನಿಗದಿ ಮಾಡಲು ನಿರ್ಧಾರಿಸಲಾಗಿದ್ದು, ರಾಜ್ಯದ EWS ವರ್ಗಕ್ಕೆ ಮೀಸಲಾತಿ ಪ್ರಮಾಣ 10% ಪೂರ್ಣವಾಗಿ ಸಿಗಲ್ಲ. ರಾಜ್ಯದ EWS ವರ್ಗಗಳಿಗೆ 10% ಮೀಸಲಾತಿ ನಿಗದಿ ಮಾಡಿ ಉಳಿದ ಮೀಸಲಾತಿ ಪ್ರಮಾಣವನ್ನು 2ಸಿ ಮತ್ತು 2ಡಿ ಹೊಸ ಪ್ರವರ್ಗಗಳಿಗೆ ಹಂಚಲಾಗುತ್ತದೆ. 

ಈ ಸಂಬಂಧ ಡೇಟಾ ಸಂಗ್ರಹ ಮಾಡಿ, ಚರ್ಚಿಸಿ ಮೀಸಲಾತಿ ನಿಗದಿ ಮಾಡಲಾಗುತ್ತದೆ. ಹೊಸ ಎರಡು ಪ್ರವರ್ಗಗಳಿಗೆ ಅಂದಾಜು 4% ರಿಂದ 5% ವರೆಗೆ ಮೀಸಲಾತಿ ಹಂಚಿಕೆ ಆಗುವ ಸಾಧ್ಯತೆ ಇದೆ. EWS ಮೀಸಲಾತಿಯು ಸರ್ಕಾರವನ್ನು  ಮೀಸಲಾತಿ ಬೇಡಿಕೆ ಬಿಕ್ಕಟ್ಟಿನಿಂದ ಕಾಪಾಡಿದೆ. ಈಗ ರಾಜ್ಯದಲ್ಲಿ ಇರುವ 56% ಮೀಸಲಾತಿ ಪ್ರಮಾಣದ ಒಳಗೇ ಹೊಸ ಪ್ರವರ್ಗಗಳಿಗೂ ಮೀಸಲಾತಿ ನಿಗದಿ ಆಗಲಿದೆ. ಇತರೆ ಅಂದರೆ 2ಎ ಮತ್ತು 2ಬಿ ಸಮುದಾಯಗಳ ಮೀಸಲಾತಿ ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸ ಆಗಲ್ಲ. ರಾಜ್ಯದ ಒಟ್ಟು ಮೀಸಲಾತಿ 56% + EWS ಮೀಸಲಾತಿ 10% ಸೇರಿ ಒಟ್ಟು ಮೀಸಲಾತಿ ಪ್ರಮಾಣ 66%  ಆಗಲಿದೆ. ಈ 66% ಮೀಸಲಾತಿ ಚೌಕಟ್ಟಿನೊಳಗೇ ಹೊಸ ಎರಡು ಪ್ರವರ್ಗಗಳಿಗೆ ಮೀಸಲು ಪ್ರಮಾಣ ಹಂಚಲಾಗುತ್ತದೆ.

click me!