Basava jayanti 2025: ಬಸವಣ್ಣ ಸರ್ವ ಜಾತಿ ಜನಾಂಗದ ನಾಯಕ -ಸಚಿವ ಶರಣ ಪ್ರಕಾಶ ಪಾಟೀಲ್

Published : Apr 30, 2025, 12:25 PM ISTUpdated : Apr 30, 2025, 12:26 PM IST
Basava jayanti 2025: ಬಸವಣ್ಣ ಸರ್ವ ಜಾತಿ ಜನಾಂಗದ ನಾಯಕ -ಸಚಿವ ಶರಣ ಪ್ರಕಾಶ ಪಾಟೀಲ್

ಸಾರಾಂಶ

ಜಗಜ್ಯೋತಿ ವಿಶ್ವ ಗುರು ಬಸವಣ್ಣನವರು ಸರ್ವ ಜಾತಿ ಜನಾಂಗದ ನಾಯಕರು ಎಂದು ಕರ್ನಾಟಕ ಸರಕಾರ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ್ ಹೇಳಿದರು.

ಕಮಲಾಪುರ (ಏ.30): ಜಗಜ್ಯೋತಿ ವಿಶ್ವ ಗುರು ಬಸವಣ್ಣನವರು ಸರ್ವ ಜಾತಿ ಜನಾಂಗದ ನಾಯಕರು ಎಂದು ಕರ್ನಾಟಕ ಸರಕಾರ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ್ ಹೇಳಿದರು.

ಕಮಲಾಪುರ ಪಟ್ಟಣ ಸಾಂಸ್ಕೃತಿಕ ನಾಯಕ ಬಸವಣ್ಣನವರ ತಾಲೂಕು ವತಿಯಿಂದ ಆಯೋಜಿಸಿದ್ದ 892ನೇ ತಾಲೂಕು ಮಟ್ಟದ ಜಯಂತೋತ್ಸವ ಕಾರ್ಯಕ್ರಮದಲ್ಲಿ ಬಸವಣ್ಣನವರ ಮೂರ್ತಿಗೆ ಪೂಜೆ ಸಲ್ಲಿಸಿ ಮಾತನಾಡಿ, ಬಸವಣ್ಣನವರು ಸರ್ವ ಜಾತಿ ಜನಾಂಗದ ನಾಯಕ ಯಾರು ಬಸವಣ್ಣನವರನ್ನು ಅನುಕರಿಸುತ್ತಾರೋ ಎಲ್ಲರೂ ಲಿಂಗವಂತರು ಎಂದು 12ನೇ ಶತಮಾನದ ಶರಣರು ಹೇಳಿದ್ದಾರೆ.

ಈ ಧರ್ಮಕ್ಕೆ ಹೆಚ್ಚಿನ ಒಲವು ಬಂದಿರುವುದು ಬುದ್ಧ ತತ್ವಗಳನ್ನು ಅಳವಡಿಸಿಕೊಂಡು, ಸರ್ವ ಜಾತಿಯ ಜನಾಂಗದ ನಾಯಕರನ್ನು ಅನುಸರಿಸಿಕೊಂಡ ಬಂದಿರುವ ಧರ್ಮವೇ ಲಿಂಗಾಯತ ಧರ್ಮ ಮತ್ತು ವಚನ ಸಾಹಿತ್ಯಕ್ಕೆ ಹೆಚ್ಚಿನ ಒತ್ತು ಕೊಟ್ಟಿರುವಂತಹ ಹಿಂದುಳಿದ ವರ್ಗದವರು ಬರೆದಿರುವಂತಹ ವಚನ ಸಾಹಿತ್ಯಕ್ಕೆ ಸಿಂಹ ಪಾಲಿದೆ ಎಂದರು.

ಇದನ್ನೂ ಓದಿ: ಬಸವ ಜಯಂತಿ: ಐತಿಹಾಸಿಕ ಪುರುಷನ ವಂಶಾವಳಿ ಶಾಸನಗಳ್ಲಲಿ ಪತ್ತೆ!...

ಗುರುಲಿಂಗ ಪೆದ್ದಿಗಳು, ಮಾದರ ಚೆನ್ನಯ್ಯನವರು , ಭಕ್ತ ಕನಕದಾಸ,ಅಂಬಿಗರಚೌಡಯ್ಯನವರು,ಡೋಹಾರ ಕಕ್ಕಯ್ಯನವರು,ಅನೆಕ ಶರಣರು ರಚಿಸಿದ ವಚನಗಳ ಮೇಲೆ ನಿಂತಿದೆ ಲಿಂಗಾಯತ ಧರ್ಮ ಎಂದು ತಿಳಿಸಿದರು.

ಬಸವ ಜಯಂತಿ ಸಮಿತಿ ತಾಲೂಕು ಅಧ್ಯಕ್ಷ ಗುರುರಾಜ ಮಾಟುರ ಮಾತನಾಡಿ, ಶರಣರ ಆದರ್ಶಗಳು ನಮಗೆ ಮಾದರಿ, ಬಸವಣ್ಣನವರ ಆಚಾರ ವಿಚಾರಗಳು ನಮಗೆ ದಾರಿದೀಪವಾಗಿ, ಸುಂದರ ಸಮಾಜ ನಿರ್ಮಾಣಕ್ಕೆ ಶರಣರ ತತ್ವ ನಮಗೆ ಅಗತ್ಯವಾಗಿದೆ ಎಂದು ಹೇಳಿದರು.

ಬಸವಣ್ಣನವರು 12ನೇ ಶತಮಾನದಲಿಯೇ ಸಾಮಾಜಿಕ ಕ್ರಾಂತಿ ಆರಂಬಿಸಿದರು. ಅಲ್ಲದೇ ಮೂಢನಂಬಿಕೆ, ಅಂಧ ಶ್ರದ್ದೆಗಳನ್ನು ದಿಕ್ಕರಿಸಿ ವೈಚಾರಿಕ ತಳಹದಿಯ ಮೇಲೆ ಸಮಾಜ ನಿರ್ಮಾಣಕ್ಕೆ ಮುಂದಾಗಿದ್ದರು ಎಂದರು.

ಇದನ್ನೂ ಓದಿ: ಕೂಡಲ ಸಂಗಮದಲ್ಲಿ ಬಸವ ಜಯಂತಿ ವಿಶೇಷ ಆಚರಣೆಗೆ ನಿರ್ಧಾರ: ಕಾರ್ಯಕ್ರಮಕ್ಕೆ ಸಿಎಂ ಚಾಲನೆ!

ರಾಜಶೇಖರ ಸ್ವಾಮೀಜಿ ಕಲಬುರ್ಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈಜುನಾಥ ತಡಕಲ್, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ರಾಜ್ಯಾಧ್ಯಕ್ಷ ರವಿ ಬಿರಾದಾರ್, ಸಂತೋಷ್ ರಾಂಪುರೆ, ಅಬ್ದುಲ್ ಸತ್ತರ್, ಪರಮೇಶ್ವರ ಓಕಳಿ, ಅಮರ್ ಚಿಕ್ಕೆಗೌಡ, ಗುರುರಾಜ ಬಮಾಣ್ಣ, ನಡರಾಜ ಕಲ್ಯಾಣ ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್