Night Curfew ಬಾರ್ ಆದಾಯ ಶೇ.80 ರಷ್ಟು ಕುಸಿತ, ನಿರ್ಬಂಧ ಸಡಿಲಿಕೆಗೆ ಆಗ್ರಹ!

By Kannadaprabha NewsFirst Published Jan 24, 2022, 5:10 AM IST
Highlights
  •  ರಾತ್ರಿ 11.30ರವರೆಗೂ ವ್ಯಾಪಾರಕ್ಕೆ ಮನವಿ
  • ಈಗಿನ ನಿರ್ಬಂಧದಿಂದ ಶೇ.80ರಷ್ಟುಆದಾಯ ಕುಸಿತ
  • ಶೇ.25 ರಷ್ಟುಮಂದಿಯೂ ಬಾರ್‌ಗಳಿಗೆ ಬರುತ್ತಿಲ್ಲ

ಬೆಂಗಳೂರು(ಜ.24):  ನಗರದಲ್ಲಿ ರಾತ್ರಿಕಫ್ರ್ಯೂ(Night Curfe) ಜಾರಿ ಮಾಡಿರುವುದರಿಂದ ಬಾರ್‌ ಮತ್ತು ರೆಸ್ಟೋರೆಂಟ್‌ಗಳಗೆ(bar and restaurant ) ತೀವ್ರ ತೊಂದರೆಯಾಗುತ್ತಿದ್ದು, ಕನಿಷ್ಠ 11.30ರವರೆಗೂ ವ್ಯಾಪಾರ ನಡೆಸಲು ಅವಕಾಶ ನೀಡಬೇಕು ಎಂದು ರಾಜ್ಯ ಬಾರ್‌ ಮತ್ತು ರೆಸ್ಟೋರೆಂಟ್‌ ಅಸೋಸಿಯೇಷನ್‌ ಸರ್ಕಾರವನ್ನು ಒತ್ತಾಯಿಸಿದೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅಸೋಸಿಯೇಷನ್‌ ಸದಸ್ಯ ಪ್ರತೀಕ್‌ ಶೆಟ್ಟಿ, ರಾತ್ರಿ ಕಫ್ರ್ಯೂ ಮತ್ತು 50-50 ನಿಯಮ ಜಾರಿ ಮಾಡಿರುವುದರಿಂದ ಸಾರ್ವಜನಿಕರು ಬಾರ್‌ ಮತ್ತು ರೆಸ್ಟೋರೆಂಟ್‌ಗಳಿಗೆ ಆಗಮಿಸಲು ಹಿಂಜರಿಯುತ್ತಿದ್ದಾರೆ. ಶೇ.25 ರಷ್ಟುಮಂದಿಯೂ ಬಾರ್‌ಗಳಿಗೆ ಬರುತ್ತಿಲ್ಲ. ಅಲ್ಲದೆ, ಬಾರ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿ ವ್ಯವಹಾರ ಪ್ರಾರಂಭವಾಗುವುದೇ ರಾತ್ರಿ 8 ಗಂಟೆಯ ನಂತರ. ಪ್ರಸ್ತುತ 10 ಗಂಟೆಯಿಂದ ಕಫ್ರ್ಯೂ ಜಾರಿಯಾಗುವುದರಿಂದ 9.20ಕ್ಕೆ ಬಾರ್‌ಗಳನ್ನು ಬಿಡುವುದಕ್ಕೆ ಮುಂದಾಗುತ್ತಿದ್ದಾರೆ. ಹೀಗಾಗಿ ಶೇ.80 ರಷ್ಟುಆದಾಯ(Income) ಕುಸಿಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

Night Curfew: ಅವಧಿ ವಿಸ್ತರಿಸಿ, ಶೇ. 100 ರಷ್ಟು ಭರ್ತಿಗೆ ಅವಕಾಶ ಕೊಡಿ: ಸರ್ಕಾರಕ್ಕೆ ಮನವಿ

ಜೊತೆಗೆ, ನಗರದಲ್ಲಿ ಕೊರೋನಾ(Coronavirus cases) ಪ್ರಕರಣಗಳು ಹೆಚ್ಚಾಗುತ್ತಿದೆ. ಇದರಿಂದ ಭೀತಿಗೊಳಗಾಗಿರುವ ಜನತೆ ಮನೆಗಳಿಂದ ಹೊರ ಬರುವುದಕ್ಕೂ ಹಿಂಜರಿಯುತ್ತಿದ್ದಾರೆ. ಇದರಿಂದ ಬಾರ್‌ ಮಾಲೀಕರು ತೀವ್ರ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ನಗರದ ಬಹುತೇಕ ಬಾರ್‌ಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಜೊತೆಗೆ, ಪ್ರತಿ ಬಾರ್‌ನಲ್ಲಿ ಕನಿಷ್ಠ 5 ಮಂದಿ ಸಿಬ್ಬಂದಿ ಸೇವೆ ಸಲ್ಲಿಸುತ್ತಿರುತ್ತಾರೆ. ವ್ಯಾಪಾರ ಕುಸಿದಿರುವುದರಿಂದ ಕಟ್ಟಡದ ಬಾಡಿಗೆ ಮತ್ತು ಸಿಬ್ಬಂದಿಗೆ ವೇತನ ನೀಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ರಾತ್ರಿ ಕಫ್ರ್ಯೂ ಅವಧಿ ವಿಸ್ತರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

Night Curfew: ಅವಧಿ ಕಡಿತಗೊಳಿಸಿ, ಸರ್ಕಾರದ ಮೇಲೆ ಉದ್ಯಮಿಗಳ ಒತ್ತಡ, ಸಿಎಂ ಭೇಟಿಗೆ ನಿರ್ಧಾರ

ಎಂದಿನಂತೆ ವ್ಯಾಪಾರ-ವಹಿವಾಟು
ವಾರಾಂತ್ಯ ಕರ್ಫ್ಯೂ ತೆರವು ಹಿನ್ನಲೆಯಲ್ಲಿ ಬಳ್ಳಾರಿ ನಗರದಲ್ಲಿ ವ್ಯಾಪಾರ ವಹಿವಾಟು ಎಂದಿನಂತೆ ಕಂಡು ಬಂತು. ಬೆಳಗ್ಗೆ ವ್ಯಾಪಾರ ವಹಿವಾಟು ನಡೆಯಿತಾದರೂ ಗ್ರಾಹಕರ ಕೊರತೆ ಇತ್ತು. ಎಪಿಎಂಸಿಯ ಕಾಯಿಪಲ್ಯೆ ಹಾಗೂ ಮಾಂಸದ ಮಾರುಕಟ್ಟೆಯಲ್ಲಿ ಕೆಲ ಹೊತ್ತು ಜನಜಂಗುಳಿ ಇತ್ತಾದರೂ ಬಳಿಕ ಕಡಿಮೆಯಾಯಿತು. ಕಾಯಿಪಲ್ಯೆ ಖರೀದಿ ವೇಳೆ ವ್ಯಾಪಾರಿಗಳು ಮಾಸ್ಕ್‌ ಇಲ್ಲದೆ ವ್ಯಾಪಾರ ನಡೆಸುತ್ತಿರುವ ದೃಶ್ಯ ಕಂಡು ಬಂತು.

ಭಾನುವಾರವಾದ್ದರಿಂದ ನಗರದ ಪ್ರಮುಖ ವಾಣಿಜ್ಯ ಕೇಂದ್ರಗಳು ಜನರಿಲ್ಲದೆ ಭಣಗುಟ್ಟಿದವು. ಬೆಂಗಳೂರು ರಸ್ತೆ, ಗ್ರಹಂ ರಸ್ತೆ, ಟ್ಯಾಂಕ್‌ ಬಂಡ್‌ ರಸ್ತೆಗಳು ಬಿಕೋ ಎನ್ನುತ್ತಿದ್ದವು.

ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರು ಹೆಚ್ಚಾಗಿದ್ದರು. ಬಾರ್‌ಗಳು ಭರ್ತಿಯಾಗಿದ್ದವು. ಶನಿವಾರಕ್ಕೆ ಹೋಲಿಸಿದರೆ ಚಿತ್ರಮಂದಿರಗಳಲ್ಲಿನ ಪ್ರೇಕ್ಷಕರು ಹೆಚ್ಚಿದ್ದರು. ಶೇ.50ರ ಭರ್ತಿಯಲ್ಲಿ ಚಿತ್ರಮಂದಿರಗಳು ನಡೆದವು. ಹೋಟೆಲ್‌ಗಳಲ್ಲಿ ಶೇ. 50ರ ಮಾನದಂಡ ಕಂಡು ಬರಲಿಲ್ಲ.

ವಾರಾಂತ್ಯ ಕರ್ಫ್ಯೂ ರದ್ದುಗೊಳಿಸಲು ಮೊದಲು ಪ್ರತಿಭಟನೆ ಆರಂಭಿಸಿದ ಬಾರ್ ಹಾಗೂ ಹೊಟೆಲ್ ಮಾಲೀಕರ ಸಂಘ ಇದೀಗ ಆದಾಯ ಚೇತರಿಕೆಗೆ ಮತ್ತೊಂದು ಮನವಿ ಮುಂದಿಟ್ಟಿದೆ. ವೀಕೆಂಡ್ ಕರ್ಫ್ಯೂ ರದ್ದು ನಿರ್ಧಾರ  ವ್ಯಾಪಾರಿಗಳು, ವಾಣಿಜ್ಯೋದ್ಯಮಿಗಳು ಸೇರಿದಂತೆ ನಿತ್ಯ ವಿವಿಧ ವಹಿವಾಟಿನಲ್ಲಿ ನಿರತರಾಗಿದ್ದ ಜನರಲ್ಲಿ ನೆಮ್ಮದಿ ಮೂಡಿಸಿದೆ. ಹೋಟೆಲ್‌, ಬಾರ್‌, ಸಿನಿಮಾ ಮಂದಿರಗಳು ಶೇ. 50 ಆಸನಗಳ ಭರ್ತಿಗೆ ಅನುಮತಿಯ ಆದೇಶ ಕೋವಿಡ್‌ನ ಕಟ್ಟುನಿಟ್ಟಿನ ನಿಯಮದಿಂದ ಪಾರಾಗುವಂತೆ ಮಾಡಿದ್ದು ಮುಖ್ಯಮಂತ್ರಿಗಳ ನಿರ್ಧಾರಕ್ಕೆ ವ್ಯಾಪಾರಿ ಹಾಗೂ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದ್ದು, ವಾರಾಂತ್ಯದ ಕರ್ಫ್ಯೂದಿಂದ ವ್ಯಾಪಾರ-ವಹಿವಾಟಿಗೆ ಸಮಸ್ಯೆಯಾಗುತ್ತಿದೆ ಎಂದು ಗೊಣಗಾಡುತ್ತಿದ್ದವರು ನಿಟ್ಟಿಸಿರು ಬಿಡುವಂತಾಗಿದೆ.

ರಾತ್ರಿ 10ರಿಂದ ಬೆಳಗ್ಗೆ 5 ಗಂಟೆವರೆಗಿನ ಕರ್ಫ್ಯೂ ಜಾರಿ ಮುಂದುವರಿಸಲಾಗಿದೆಯಾದರೂ ಇದರಿಂದ ವ್ಯಾಪಾರಿಗಳು ಹಾಗೂ ವಿವಿಧ ಉದ್ಯಮಗಳಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಆದರೆ ಬಾರ್ ಹಾಗೂ ರೆಸ್ಟೋರೆಂಟ್ ಮತ್ತೆ ತೀವ್ರ ಸಮಸ್ಯೆಗೆ ಸಿಲುಕಿದೆ. ಇದಕ್ಕಾಗಿ ರಾತಿ 11.30ರ ವರೆಗೆ ವ್ಯಾಪಾರ ಮುಂದುವರಿಸಲು ಬೇಡಿಕೆ ಮುಂದಿಟ್ಟಿದ್ದಾರೆ. 

click me!