ಬೆಂಗಳೂರಿನ ನಮ್ಮ ಮೆಟ್ರೋ ನೇರಳೆ ಮಾರ್ಗದ ಬೈಯಪ್ಪನಹಳ್ಳಿ - ಕೆ ಆರ್ ಪುರಂ ಮತ್ತು ಚಲಘಟ್ಟ - ಕೆಂಗೇರಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರಕ್ಕೆ ಕೇಂದ್ರ ಸರ್ಕಾರವೇ ಗ್ರೀನ್ ಸಿಗ್ನಲ್ ನೀಡಿದೆ.
ಬೆಂಗಳೂರು (ಅ.08): ಬೆಂಗಳೂರಿನ ನಮ್ಮ ಮೆಟ್ರೋ ನೇರಳೆ ಮಾರ್ಗದ ಬೈಯಪ್ಪನಹಳ್ಳಿ - ಕೆ ಆರ್ ಪುರಂ ಮತ್ತು ಚಲಘಟ್ಟ - ಕೆಂಗೇರಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರಕ್ಕೆ ಕೇಂದ್ರ ಸರ್ಕಾರವೇ ಗ್ರೀನ್ ಸಿಗ್ನಲ್ ನೀಡಿದೆ. ಸರ್ಕಾರದ ಯಾವುದೇ ಔಪಚಾರಿಕ ಹಾಗೂ ಅನೌಪಚಾರಿಕ ಕಾರ್ಯಕ್ರಮಗಳಿಗೆ ಕಾಯದೇ ಅ.9 ರಿಂದ ಮೆಟ್ರೋ ಸಂಚಾರ ಆರಂಭಿಸಲು ಸೂಚನೆ ನೀಡಿದೆ.
ಬೆಂಗಳೂರು ನಮ್ಮ ಮೆಟ್ರೋದ ನೇರಳೆ ಮಾರ್ಗದ ಪೂರ್ವ-ಪಶ್ಚಿಮ ಕಾರಿಡಾರ್‌ನ ವಿಭಾಗಗಳಾದ ಬೈಯಪ್ಪನಹಳ್ಳಿ - ಕೆಆರ್ ಪುರ (2.1 ಕಿಮೀ) ಮತ್ತು ಚಲ್ಲಘಟ್ಟ - ಕೆಂಗೇರಿ (2.05 ಕಿಮೀ) ನಡುವೆ ಎರಡು ರೈಲ್ವೆ ಮಾರ್ಗಗಳಲ್ಲಿ ವಾಣಿಜ್ಯ ಸೇವೆ ಆರಂಭಿಸಿ, ಪ್ರಯಾಣಿಕರ ಕಾರ್ಯಾಚರಣೆ ಮಾಡುವಂತೆ ಮಂಜೂರು ಮಾಡಲಾಗಿದೆ. ಸೆ.25 ಮತ್ತು ಸೆ.30 ಮೆಟ್ರೋ ರೈಲು ಸುರಕ್ಷತೆ (CMRS) ಆಯುಕ್ತರಿಂದ ಸುರಕ್ಷತಾ ಪರೀಕ್ಷೆಯನ್ನು ಮಾಡಲಾಗಿದೆ. ಈ ನಿಟ್ಟಿನಲ್ಲಿ, ಮೇಲಿನ ಎರಡು ರೈಲ್ವೆ ಮಾರ್ಗಗಳನ್ನು ಔಪಚಾರಿಕವಾಗಿ ಪ್ರಯಾಣಿಕರ ಸೇವೆಗೆ ಮುಕ್ತಗೊಳಿಸುವುದಕ್ಕೆ ಅನುಮತಿ ನೀಡಲಾಗಿದೆ.
undefined
ಸಿಡಿದೆದ್ದ ಐಟಿ ಉದ್ಯೋಗಿಗಳು, ರಾಷ್ಷ್ರಮಟ್ಟದಲ್ಲಿ ಸದ್ದು ಮಾಡ್ತಿದೆ ಬೆಂಗಳೂರು ಮಟ್ರೋ ಸುದ್ದಿ!
ಈಗಾಗಲೇ ರಾಜ್ಯದ ಉಪಮುಖ್ಯಮಂತ್ರಿ ಹಾಘೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಸೆ.5 ರಂದು ಕೇಂದ್ರ ಸರ್ಕಾರಕ್ಕೆ ಪತ್ರವನ್ನು ಬರೆದು ಬೈಯಪ್ಪನಹಳ್ಳಿ - ಕೆಆರ್ ಪುರ ಮತ್ತು ಚಲ್ಲಘಟ್ಟ - ಕೆಂಗೇರಿ ಮಾರ್ಗಗಳನ್ನು ಔಪಚಾರಿಕವಾಗಿ ಉದ್ಘಾಟನೆ ಮಾಡಲು ದಿನಾಂಕ ನಿಗದಿ ಮಾಡುವಂತೆ ಪತ್ರವನ್ನು ಬರೆದಿದ್ದರು. ಆದರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಪಸ್ಥಿತಿಗೆ ಮನವಿ ಮಾಡಿದ್ದರು. ಆದರೆ, ಈ ಬೆಂಗಳೂರು ನಗರದ ಪೂರ್ವದಿಂದ ಪಶ್ಚಿಮ ಭಾಗಕ್ಕೆ ತಡೆರಹಿತ ಸಂಪರ್ಕ ಪ್ರಯಾಣ ಸೇವೆ ಒದಗಿಸಲು ಬೆಂಗಳೂರಿನ ಪ್ರಯಾಣಿಕರ ದೃಷ್ಟಿಕೋನದಿಂದ ಪ್ರಮುಖವಾಗಿವೆ. ಆದ್ದರಿಂದ ಯಾವುದೇ ಔಪಚಾರಿಕ/ಅನೌಪಚಾರಿಕ ಅಧಿಕೃತ ಕಾರ್ಯವಿಲ್ಲದೆ 9 ಅಕ್ಟೋಬರ್, 2023 ರಂದು ತಕ್ಷಣವೇ ವಾಣಿಜ್ಯ ಸೇವೆಗೆ ಮುಕ್ತಗೊಳಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಐಟಿ ಉದ್ಯೋಗಿಗಳ ಸಂತಸ ಮುಂದೂಡಿದ ನಮ್ಮ ಮೆಟ್ರೋ: ನೇರಳೆ ಮಾರ್ಗದ ಲಿಂಕ್ ಮಾರ್ಗ ಉದ್ಘಾಟನೆ ವಿಳಂಬ
ಹ್ಯಾಸ್‌ಟ್ಯಾಗ್ ಆರಂಭಿಸಿದ್ದ ಐಟಿ ಉದ್ಯೋಗಿಗಳು: ಬೈಯಪ್ಪನಹಳ್ಳಿ-ಕೆ.ಆರ್.ಪುರ ಮೆಟ್ರೋ ಮಾರ್ಗ ಆರಂಭಕ್ಕೆ BMRCLಗೆ ಇನ್ನೂ ಮುಹೂರ್ತ ಕೂಡಿ ಬಂದಿಲ್ಲ. ಇದೀಗ ಈ ವಿಚಾರ ರಾಷ್ಷ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ. ಬೆಂಗಳೂರು ಮೆಟ್ರೋ ರೈಲು ನಿಗಮದ ನಿರ್ಲಕ್ಷ್ಯದ ವಿರುದ್ಧ ಐಟಿ ಉದ್ಯೋಗಿಗಳು ಸಿಡಿದೆದ್ದಿದ್ದು, ಬೈಯಪ್ಪನಹಳ್ಳಿ-ಕೆ.ಆರ್.ಪುರ ಮೆಟ್ರೋ ಆರಂಭಕ್ಕೆ ಎಕ್ಸ್ ನಲ್ಲಿ(ಟ್ವಿಟರ್) ಅಭಿಯಾನ ಆರಂಭಿಸಿದ್ದಾರೆ #StartPurpleLineOperations ಎಂದು ಹ್ಯಾಷ್ ಟ್ಯಾಗ್ ಹಾಕಿ ಕ್ಯಾಂಪೇನ್ ಮಾಡಿದ್ದು, ಸಾವಿರಾರು ಜನರಿಂದ ಟ್ವೀಟ್ ಮಾಡಿ ಬಿಎಂಆರ್ ಸಿಎಲ್ ವಿರುದ್ಧ ಅಸಮಾಧಾನ ವ್ಯಕ್ತವಾಗಿತ್ತು. ಈ ಮೂಲಕ ಬಿಎಂಆರ್‌ಸಿಎಲ್ ಅಧಿಕಾರಿಗಳ ಬೇಜಾಬ್ದಾರಿ ವಿರುದ್ಧ ಟ್ವೀಟ್ ಮಾಡಿ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟು ಮಾತ್ರವಲ್ಲ ಸಿಎಂ, ಡಿಸಿಎಂ, ಪ್ರಧಾನಿ ಮೋದಿಗೆ ಟ್ಯಾಗ್ ಮಾಡಿ ಶೀಘ್ರ ಮೆಟ್ರೋ ಆರಂಭಿಸುವಂತೆ ಆಗ್ರಹಿಸಿದ್ದಾರೆ. ಟ್ರಾಫಿಕ್ ಜಾಮ್ ವಿಡಿಯೋ, ಫೋಟೋ, ಜೊತೆಗೆ ಸ್ಕೈವಾಕ್ ಮೇಲೆ ಜನರೇ ತುಂಬಿರುವ ವಿಡಿಯೋ ಹಾಕಿ ಕಿಡಿ ಕಾರಿದ್ದರು.