
ಬೆಂಗಳೂರು (ಅ.8): ಕಳೆದ ಶನಿವಾರ ಪ್ಯಾಲೆಸ್ತೀನನ ಹಮಾಸ್ ಉಗ್ರರು ಇಸ್ರೇಲ್ ಮೇಲೆ 5000ಕ್ಕೂ ಅಧಿಕ ರಾಕೆಟ್ ದಾಳಿ ನಡೆಸಿದೆ. ಏಕಾಏಕಿ ನಡೆದ ದಾಳಿಗೆ ನೂರಾರು ಇಸ್ರೇಲ್ ಪ್ರಜೆಗಳ ಸಾವನ್ನಪ್ಪಿದ್ದಾರೆ. ಇತ್ತ ಇಸ್ರೇಲ್ ಸಹ ಹಮಾಸ್ ಉಗ್ರರ ಮೇಲೆ ಯುದ್ಧ ಘೋಷಿಸಿರುವುದು ಪರಿಸ್ಥಿತಿ ಬಿಗಡಾಯಿಸಿದೆ. ಈ ನಡುವೆ ಇಸ್ರೇಲ್‌ನಲ್ಲಿ ನಲೆಸಿರುವ ಸಾವಿರಾರು ಭಾರತೀಯರು ನೆಲೆಸಿದ್ದು, ಅದರಲ್ಲೂ ಕನ್ನಡಿಗರು ಸಹ ಇದ್ದಾರೆ. ಸಂಕಷ್ಟಕ್ಕೆ ಸಿಲುಕಿರುವ ಜನರ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಿದೆ.
ಹಮಾಸ್ ವಿರುದ್ಧ ತಿರುಗಿಬಿದ್ದ ಇಸ್ರೇಲ್: ಪ್ಯಾಲೆಸ್ತೇನ್ ವಿರುದ್ಧ ಇಸ್ರೇಲ್ ಪ್ರಧಾನಿ ಪ್ರತೀಕಾರದ ಶಪಥ
ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸ್ತುತ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಇಸ್ರೇಲ್‌ನಲ್ಲಿ ನಲೆಸಿರುವ ಎಲ್ಲ ಭಾರತೀಯರು ಸುರಕ್ಷಾ ಮತ್ತು ಜಾಗರೂಕರಾಗಿರುವಂತೆ ತಿಳಿಸಿದ್ದಾರೆ. ಜನನಿಬಿಡ ಪ್ರದೇಶಗಳ ಮೇಲೆ ರಾಕೆಟ್ ದಾಳಿ ಮುಂದುವರಿದಿದ್ದು, ಇನ್ನೊಂದೆಡೆ ಇಸ್ರೇಲ್ ಪ್ರವೇಶಿಸಿರುವ ಹಮಾಸ್ ಉಗ್ರರು ಇಸ್ರೇಲಿ ಪ್ರಜೆಗಳನ್ನು ಅಪಹರಿಸುತ್ತಿರುವ ವಿಡಿಯೋ ವೈರಲ್ ಆಗಿರುವ ಹಿನ್ನೆಲೆ ಮನೆಯಿಂದ ಆಚೆ ಬರದಂತೆ ಸೂಚಿಸಲಾಗಿದೆ. ದೇಶದ ಜನರು ಅದರಲ್ಲೂ ಕನ್ನಡಿಗರು ಸಹ ಸ್ಥಳೀಯ ಅಧಿಕಾರಿಗಳ ಸೂಚನೆ ಮತ್ತು ಸುರಕ್ಷತಾ ಮಾರ್ಗಸೂಚಿಗಳನ್ನು ಪಾಲಿಸುವಂತೆ ವಿನಂತಿಸಿಕೊಂಡಿರುವ ಸಿಎಂ.
ಅನಗತ್ಯ ಪ್ರಯಾಣಗಳನ್ನು ತಪ್ಪಿಸಬೇಕು ಮತ್ತು ಸುರಕ್ಷತಾ ಅಶ್ರಯಗಳ (Bomb Shelter) ಹತ್ತಿರ ಇರುವಂತೆ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಇಸ್ರೇಲಿ ಹೋಮ್ ಫ್ರಂಟ್ ಕಮಾಂಡ್ ವೆಬ್‌ಸೈಟ್ (https://www.oref.org.il/en) ಅಥವಾ ಅವರ ಸಿದ್ಧತೆ ಕರಪತ್ರವನ್ನು ನೋಡಿ. ಯಾವುದೇ ಹೆಚ್ಚಿನ ಮಾರ್ಗದರ್ಶನಕ್ಕಾಗಿ ರಾಯಭಾರ ಕಚೇರಿಯ ಸಿಬ್ಬಂದಿಯನ್ನು ಸಂಪರ್ಕಿಸಿ.
ಅದ್ಯಾಗೂ ಯುದ್ಧಪೀಡಿತ ಪ್ರದೇಶದಲ್ಲಿ ಸಿಲುಕಿರುವ ಕನ್ನಡಿಗರು ತುರ್ತು ಸಂದರ್ಭದಲ್ಲಿ ಕೆಳಗೆ ನೀಡಲಾಗಿರುವ ಸಹಾಯವಾಣಿ, ಇಮೇಲ್ ಮೂಲಕ ಸಂಪರ್ಕಿಸಬಹುದಾಗಿದೆ.
ಹಮಾಸ್ ಉಗ್ರರಿಂದ ಯುವತಿಯ ಕಿಡ್ನಾಪ್ : ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್
ತುರ್ತು ಸಂದರ್ಭದಲ್ಲಿ ಸಂಪರ್ಕಿಸಿ:
+97235226748 ನಂಬರ್‌ಗೆ ಕರೆಮಾಡಿ ನೆಲೆಸಿರುವ ಸ್ಥಳದ ಬಗ್ಗೆ ಮಾಹಿತಿ ನೀಡಿ ಅಥವಾ consl.telaviv@mea.gov.in ನಲ್ಲಿ e-ಮೇಲ್ ಸಂದೇಶವನ್ನು ಕಳುಹಿಸುವಂತೆ ತಿಳಿಸಲಾಗಿದೆ.
ಕರ್ನಾಟಕದಿಂದ ಇಸ್ರೇಲ್‌ಗೆ ಬಂದಿರುವ ಕನ್ನಡಿಗರು ಅಥವಾ ಯಾವುದೇ ಭಾರತೀಯ ನಾಗರಿಕರಿಗೆ ಸಹಾಯದ ಅಗತ್ಯವಿರುವ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ: 080222340676, 08022253707.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ