
ವರದಿ : ನರಸಿಂಹ ಮೂರ್ತಿ ಕುಲಕರ್ಣಿ
ಬಳ್ಳಾರಿ (ಮೇ.11): ಬಳ್ಳಾರಿ ತಾಲೂಕಿನ ಕುಡುತಿನಿ (Kudathini) ಪಟ್ಟಣ ಪಂಚಾಯ್ತಿಯ ಅಧ್ಯಕ್ಷ ವಿ.ರಾಜಶೇಖರ, ಸದಸ್ಯರಾದ ಕನಕೇರಿ ಪಂಪಾಪತಿ ಮತ್ತು ಜೆ.ಎಸ್.ವೆಂಕಟರಮಣ ಬಾಬು ಅವರ ಸದಸ್ಯತ್ವವನ್ನು ರದ್ದು ಮಾಡಿ ಸಹಾಯಕ ಆಯುಕ್ತ (assistant Commissioner ) ಡಾ.ಆಕಾಶ್ ಎಸ್. (Akash S)ಅವರು ಆದೇಶ ಹೊರಡಿಸಿದ್ದಾರೆ.
ಪ್ರತಿಭಟನೆ ಮಾಡಿದ್ದೇ ಮುಳುವಾಯ್ತೇ: ಕುಡುತಿನಿ ಪಟ್ಟಣ ಪಂಚಾಯ್ತಿಯ ಮುಖ್ಯಾಧಿಕಾರಿ ಸತ್ಯನಾರಾಯಣ (Satyanarayana) ಅವರು ತಾವು ಹೇಳಿದಂತೆ ಕೇಳುತ್ತಿಲ್ಲ ಎಂದು ಕಳೆದ 2021 ರ ಫೆಬ್ರವರಿ 24 ರಂದು ಪಟ್ಟಣ ಪಂಚಾಯ್ತಿ ಕಚೇರಿಗೆ ಅಧ್ಯಕ್ಷ ವಿ.ರಾಜಶೇಖರ, ಸದಸ್ಯರಾದ ಕನಕೇರಿ ಪಂಪಾಪತಿ ಮತ್ತು ಜೆ.ಎಸ್.ವೆಂಕಟರಮಣ ಬಾಬು ಅವರು ಬೀಗ ಹಾಕಿ ಪ್ರತಿಭಟನೆ ಮಾಡಿದ್ರು..ಇದರಿಂದಾಗಿ ಅಂದು ಮಧ್ಯಾಹ್ನ ಒಂದು ಗಂಟೆ ವರೆಗೆ ಕಚೇರಿ ಸಿಬ್ಬಂದಿ ಹೊರಗಡೆಯೇ ಇರಬೇಕಾಯ್ತು. ಅಲ್ಲದೇ ಕಚೇರಿ ಕೆಲಸಕ್ಕೆ ಬಂದ ಜನರು ತಮ್ಮ ಕೆಲಸಗಳಾಗದೇ ಹಿಂದಿರಗಬೇಕಾಯ್ತು.
ಈ ರೀತಿ ಸಮಸ್ಯೆ ಉಂಟು ಮಾಡಿದ್ದಕ್ಕೆ ಬೀಗ ಹಾಕಿದವರ ವಿರುದ್ದ ಕಾನೂನು ರೀತಿ ಕ್ರಮ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಮತ್ತು ಕುಡಿತಿನಿ ಪೊಲೀಸರಿಗೆ ದೂರು ನೀಡಲಾಗಿತ್ತು.
ವಿಚಾರಣೆ ವೇಳೆ ತಪ್ಪು ಒಪ್ಪಿಕೊಂಡರು ?: ಈ ಬಗ್ಗೆ ವಿಚಾರಣೆ ನಡೆಸಿ ಆರೋಪಿಗಳಾದ ಪಟ್ಟಣ ಪಂಚಾಯ್ತಿಯ ಅಧ್ಯಕ್ಷ ವಿ.ರಾಜಶೇಖರ, ಸದಸ್ಯರಾದ ಕನಕೇರಿ ಪಂಪಾಪತಿ ಮತ್ತು ಜೆ.ಎಸ್.ವೆಂಕಟರಮಣ ಬಾಬು ಅವರು ತಾವು ಸಾರ್ವ ಜನಿಕ ಹಿತದೃಷ್ಟಿಯಿಂದ ಅಚಾತುರ್ಯವಾಗಿ ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾರೆಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.
ಬಳ್ಳಾರಿ: ಬಿರುಗಾಳಿಗೆ ನೆಲಕಚ್ಚಿದ ಪಪ್ಪಾಯಿ ಬೆಳೆ: ಸಂಕಷ್ಟದಲ್ಲಿ ರೈತ..!
ಹೀಗಾಗಿ ಕಚೇರಿ, ಅಧಿಕಾರಿ ಮತ್ತು ಸಿಬ್ಬಂದಿ ಸೇರಿದಂತೆ ಸಾರ್ವಜನಿಕರಿಗೆ ತೊಂದರೆ ಮಾಡಿದ್ದಕ್ಕಾಗಿ ರಾಜ್ಯದ ಪುರಸಭೆ ಕಾಯ್ದೆ 1964 ರ ಕಲಂ 42(1) ಮತ್ತು 42(2) ರನ್ವಯ ಅವರುಗಳ ಸದಸ್ಯತ್ವವನ್ನು ಮೇ 7 ರಿಂದ ಜಾರಿಗೆ ಬರುವಂತೆ ಆದೇಶಿಸಿದ್ದಾರೆ.
Ballari ಮಟ್ಕಾ ದಂಧೆಕೋರರ ನಿದ್ದೆಗೆಡಿಸಿದೆ ಗಡಿಪಾರು ಅಸ್ತ್ರ
ಬಿಜೆಪಿಯಿಂದ ಅಯ್ಕೆಯಾಗಿದ್ರು: ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿದ ಕುಡುತಿನಿ ಪಟ್ಟಣ ಪಂಚಾಯತಿಯಲ್ಲಿ ವಿ.ರಾಜಶೇಖರ ಕಾಂಗ್ರೆಸ್ , ಕನಕೇರಿ ಪಂಪಾಪತಿ ಮತ್ತು ಜೆ.ಎಸ್.ವೆಂಕಟರಮಣ ಬಾಬು ಬಿಜೆಪಿಯಿಂದ ಆಯ್ಕೆಯಾಗಿದ್ದರು. ಪಕ್ಷೇತರರ ಬಲದಿಂದ ಅಧಿಕಾರವನ್ನು ಎರಡು ಪಕ್ಷದ ನಾಯಕರು ಹಂಚಿಕೊಂಡಿದ್ರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ