
ಬಾಗಲಕೋಟೆ (ನ.5): ಕಾಂಗ್ರೆಸ್ ಸರ್ಕಾರ ತಾನಾಗೇ ಬೀಳುತ್ತೆ ಎಂಬ ಬಿಜೆಪಿಯವರ ಹೇಳಿಕೆ ಸನ್ನಿವೇಶವನ್ನು ಬೀ*ದ ಹೋರಿಗೆ ಹೋಲಿಕೆ ಮಾಡಿ ಬಾಗಲಕೋಟೆ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ ತಿರುಗೇಟು ನೀಡಿದರು.
ಆಪರೇಷನ್ ಕಮಲ ಮಾಡುವ ಅಗತ್ಯವಿಲ್ಲ, ತಾನಾಗೇ ಕಾಂಗ್ರೆಸ್ ಸರ್ಕಾರ ಬಿದ್ದುಹೋಗುತ್ತೆ ಎನ್ನುತ್ತಿರುವ ಬಿಜೆಪಿ ನಾಯಕರು. ಆ ಕುರಿತು ಮಾದ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬೀ*ದ ಹೋರಿ ನಡೆಯುವಾಗ ಅದರ ಬೀ* ಅಲುಗಾಡುತ್ತಿರುತ್ತೆ. ಹೋರಿ ಬೀ* ಅಲುಗಾಡುತ್ತೆ ಅಂದ್ರೆ ಅದು ಕೆಳಗೆ ಬೀಳಲ್ಲ. ಅದು ಹತ್ತು ಕಿ.ಮೀ ಹೋದರು ಹಾಗೆಯೇ ಅಲುಗಾಡುತ್ತಿರುತ್ತದೆ. ಅಲುಗಾಡುವ ಹೋರಿ ಬೀ* ತಿನ್ನಬೇಕು ಅಂತಾ 10 ನಾಯಿ ಬೆನ್ನು ಹತ್ತುತ್ತವೆ. ಅಲುಗಾಡುತ್ತೆ ಅಂದ್ರೆ ಬಿದ್ದೆ ಬೀಳುತ್ತೆ ನಾವು ತಿನಲೇಬೇಕು ಅಂತಾ ನಾಯಿಗಳು ಅನ್ಕೊಂತಾವೆ. ಬೀ* ಕೆಳಗೆ ಬೀಳಲ್ಲ, ಇವರು ಬೆನ್ನು ಹತ್ತುವುದನ್ನು ಬಿಡಲ್ಲ. ಬಿಜೆಪಿಗರ ಸದ್ಯದ ಪರಿಸ್ಥಿತಿ ಹಿಂಗಾಗಿದೆ ಎಂದು ವ್ಯಂಗ್ಯ ಮಾಡುವ ಮೂಲಕ ಟಾಂಗ್ ಕೊಟ್ಟ ನಂಜಯ್ಯನಮಠ.
ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷ ಪತನ: ಸಂಸದ ಬಿ.ವೈ.ರಾಘವೇಂದ್ರ
ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ. ಈಗಾಗಲೇ ಸಿಎಂ ಸ್ಥಾನ ವಿಚಾರವಾಗಿ ಮೂರು ಬಣಗಳಾಗಿ ಆಂತರಿಕ ಕಚ್ಚಾಟ ಶುರುವಾಗಿದೆ. ಕೆಲವು ತಿಂಗಳಲ್ಲೇ ಕಾಂಗ್ರೆಸ್ ಸರ್ಕಾರ ಬಿದ್ದೊಗುತ್ತೆ. ಈ ಸರ್ಕಾರ ಬಿಳಿಸಲು ಯಾವುದೇ ಬಿಜೆಪಿ ಆಪರೇಷನ್ ಬೇಕಿಲ್ಲ. ತಾನಾಗೆ ಬೀಳುತ್ತದೆ ಎಂದು ಬಿಜೆಪಿ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಈ ಹಿನ್ನೆಲೆ ಅವರ ಹೇಳಿಕೆಯನ್ನು ಬೀ*ದ ಹೋರಿಗೆ ಹೋಲಿಕೆ ಮಾಡಿದ ಬಾಗಲಕೋಟೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ