ಲಡ್ಡು ಮುತ್ಯಾನ ಹೆಸರಿನಲ್ಲಿ ಫ್ಯಾನ್ ನಿಲ್ಲಿಸುವ ಯುವಕನನ್ನು 'ಆಧುನಿಕ ಲಡ್ಡು ಮುತ್ಯಾ' ಎಂದು ಬಿಂಬಿಸುತ್ತಿರುವುದಕ್ಕೆ ಮೂಲ ಲಡ್ಡು ಮುತ್ಯಾನ ಭಕ್ತರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಮೂಲ ಲಡ್ಡು ಮುತ್ಯಾನ ಉತ್ತರಾಧಿಕಾರಿಗಳು ಯಾರೂ ಇಲ್ಲ ಎಂದು ಭಕ್ತರು ಸ್ಪಷ್ಟಪಡಿಸಿದ್ದಾರೆ.
ಬಾಗಲಕೋಟೆ (ಅ.04): ಬಾಗಲಕೋಟೆಯ ಮೂಲ ಪವಾಡ ಪುರುಷ ಲಡ್ಡು ಮುತ್ಯಾನ ಹೆಸರಿನಲ್ಲಿ ಮತ್ತೊಬ್ಬ ತಿರುಗುವ ಫ್ಯಾನ್ ಅನ್ನು ಕೈಯಿಂದ ನಿಲ್ಲಿಸುವ ಯುವಕನನ್ನ ಜನರು ಆಧುನಿಕ ಲಡ್ಡು ಮುತ್ಯಾ ಅಂತ ಬಿಂಬಿಸಲು ಹೊರಟಿದ್ದಾರೆ. ಆದರೆ, ಲಡ್ಡು ಮುತ್ಯಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದ್ದಕ್ಕೆ ಮೂಲ ಪವಾಡಪುರುಷ ಲಡ್ಡು ಮುತ್ಯಾನ ಭಕ್ತರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ಬಾಗಲಕೋಟೆಯಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬದುಕಿ ಪವಾಡ ಪುರುಷರೆಂದೆ ಹೆಸರಾಗಿದ್ದ ಲಡ್ಡು ಮುತ್ಯಾ. ಸದ್ಯ ಮೂಲ ಲಡ್ಡು ಮುತ್ಯಾರ ಹೆಸರಿನಲ್ಲಿ ಅವಮಾನ ಮಾಡ್ತಿರೋದಕ್ಕೆ ಭಕ್ತರ ತೀವ್ರ ವಿರೋಧ ವ್ಯಕ್ತವಾಗಿದೆ. ಟ್ರೋಲ್ ಬೆನ್ನಲ್ಲೆ ಮೂಲ ಲಡ್ಡು ಮುತ್ಯಾನ ಭಕ್ತ ಸಮೂಹದವರು, ಲಡ್ಡು ಮುತ್ಯಾನ ಉತ್ತರಾಧಿಕಾರಿಗಳು ಎಂದು ಯಾರೂ ಇಲ್ಲ. ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ವದಂತಿಗಳಿಗೆ ಕಿವಿಗೊಡದಂತೆ ಮೂಲ ಭಕ್ತರಿಂದ ಸಾರ್ವಜನಿಕ ಮನವಿ ಮಾಡಲಾಗಿದೆ. ದೇಶದಲ್ಲಿ ಬೇರೆ ಬೇರೆ ರಾಜ್ಯದ ಜನರಿಂದ ಆಗುತ್ತಿರುವ ಟ್ರೋಲ್ ಗಳನ್ನೂ ಸಹ ಸ್ಥಗಿತಗೊಳಿಸುವಂತೆ ಮನವಿ ಮಾಡಿದ್ದಾರೆ.
undefined
ಇದನ್ನೂ ಓದಿ: ಗದ್ದನಕೇರಿ ರಾಮಾರೂಢ ಶ್ರೀಗಳಿಗೆ 1 ಕೋಟಿ ರೂ. ವಂಚಿಸಿದ್ದ ಜೆಡಿಎಸ್ ನಾಯಕ ಪ್ರಕಾಶ ಮುಧೋಳ ಅರೆಸ್ಟ್!
ಮೂಲ ಲಡ್ಡು ಮುತ್ಯಾರ ಗದ್ದುಗೆ ಬಾಗಲಕೋಟೆ ಜಿಲ್ಲೆಯ ಗದ್ದನಕೇರಿ ಕ್ರಾಸ್ ಹತ್ತಿರ ಇದೆ. ಅವರು 02-08-1993 ರಲ್ಲಿ ಶ್ರಾವಣ ಮಾಸದಲ್ಲಿ ಹುಣ್ಣಿಮೆಯ ದಿನ ಲಿಂಗೈಕ್ಯರಾಗಿದ್ದು, ಗದ್ದನಕೇರಿಯಲ್ಲಿ ಸಮಾಧಿ ಮಾಡಲಾಗಿದೆ. ಇಂದಿಗೂ ಸಾವಿರಾರು ಭಕ್ತರು ಅಜ್ಜನ ದರ್ಶನ ಪಡೆಯುತ್ತಾರೆ. ಅಮವಾಸ್ಯೆಯಂದು ಭಕ್ತರ ಸಂಖ್ಯೆ ಹೆಚ್ಚಾಗಿರುತ್ತದೆ. ಆದರೆ, ಇದೀಗ ಪವಾಡ ಪುರುಷ ಬಾಗಲಕೋಟೆಯ ಆರಾಧ್ಯ ದೈವ ಲಡ್ಡು ಮುತ್ಯಾರ ಬಗ್ಗೆ ಇಲ್ಲ ಸಲ್ಲದ ಟ್ರೋಲ್ ಮಾಡಲಾಗುತ್ತಿದೆ. ನಿಜವಾದ ಪವಾಡ ಪುರುಷ ಲಡ್ಡು ಮುತ್ಯಾರು ಎಂದಿಗೂ ಫ್ಯಾನ್ ಮುಟ್ಟಲಿಲ್ಲ. ಲಡ್ಡು ಮುತ್ಯಾರ ಬಗ್ಗೆ ಅಪಾರ ಗೌರವ, ಭಕ್ತಿ ಈ ಭಾಗದಲ್ಲಿ ಇದೆ. ಬಾಗಲಕೊಟೆ, ಬೆಳಗಾವಿ, ವಿಜಯಪುರ, ಹುಬ್ಬಳ್ಳಿ-ಧಾರವಾಡ, ಗದಗ, ಕೊಪ್ಪಳ ಸೇರಿ ಉತ್ತರ ಕರ್ನಾಟಕದ ಭಾಗದಲ್ಲಿ ಲಡ್ಡು ಮುತ್ಯಾ ಅಪಾರ ಭಕ್ತರ ಸಮೂಹ ಹೊಂದಿದ್ದಾರೆ. ಹೀಗಾಗಿ, ಲಡ್ಡು ಮುತ್ಯಾರನ್ನು ಅವಮಾನಿಸಬೇಡಿ ಎಂದು ಮೂಲ ಲಡ್ಡು ಮುತ್ಯಾ ಅವರ ಭಕ್ತರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಕಳೆದ ಬಾರಿ ಇಬ್ಬರು ಆಸ್ಪತ್ರೆಗೆ ಸೇರಿದರೂ ಬಿಗ್ ಬಾಸ್‌ಗೆ ಬುದ್ಧಿ ಬರಲಿಲ್ಲ: ಆಸ್ಪತ್ರೆ ಸೇರಿದ ತ್ರಿವಿಕ್ರಮ್, ಭವ್ಯಾಗೂ ಗಾಯ!
ಸಾಮಾಜಿಕ ಜಾಲತಾಣದಲ್ಲಿ ತಿರುಗುವ ಫ್ಯಾನ್ ಕೈಯಿಂದ ನಿಲ್ಲಿಸಿ, ಅದೇ ಕೈಯಿಂದ ಎಲ್ಲರ ತಲೆಯನ್ನು ಮುಟ್ಟಿ ಆಶೀರ್ವಾದ ಮಾಡುವ ವಿಡಿಯೋಗಳು ಹರಿದಾಡುತ್ತಿವೆ. ಈ ವಿಡಿಯೋದಲ್ಲಿ ಜನರು ಲಡ್ಡು ಮುತ್ಯಾ ಅಂತ ಹೇಳಿ ಆಶೀರ್ವಾದ ಪಡೆಯುತ್ತಿದ್ದಾರೆ. ಇನ್ನು ಫ್ಯಾನ್ ಮುಟ್ಟಿ ಆಧುನಿಕ ಲಡ್ಡು ಮುತ್ಯಾ ಅಂತೇಳಿ ಬಿಂಬಿಸಿಕೊಳ್ತಿರುವ ವ್ಯಕ್ತಿ ಆಗಿದ್ದಾರೆ. ಆದರೆ, ಆ ವ್ಯಕ್ತಿ ಎಲ್ಲಿಯವರು? ಯಾರು? ಎಂಬ ಬಗ್ಗೆ ಮಾಹಿತಿ ಇಲ್ಲ. ಹಾಗಾಗಿ, ಈ ಟ್ರೋಲ್ ಮಾಡಿರೋ ವ್ಯಕ್ತಿಯ ವಿಡಿಯೋಗಳನ್ನ ಡಿಲಿಟ್ ಮಾಡುವಂತೆ ಭಕ್ತರ ಮನವಿ ಮಾಡಿದ್ದಾರೆ. ಈ ರೀತಿ ಟ್ರೋಲ್ ಮಾಡುತ್ತಿರುವುದರಿಂದ ಮೂಲಕ ಲಡ್ಡು ಮುತ್ಯಾರ ಹೆಸರಿಗೆ ಅವಮಾನ ಆಗುತ್ತಿದೆ ಎಂದು ಯೂಟ್ಯೂಬ್ ಸ್ಟಾರ್ ಮಲ್ಯಾ ಬಾಗಲಕೋಟೆ ಅವರಿಂದ ಟ್ರೋಲರ್ ಗಳಿಗೆ ಮನವಿ ಮಾಡಲಾಗಿದೆ.