ಬಾಗಲಕೋಟೆ: ಆಟೋ, ಕಾರು ಆಯ್ತು ಇದೀಗ KSRTC ಬಸ್ಸಿನಲ್ಲೇ ಗೋಮಾಂಸ ಸಾಗಣೆ!

ಬಾಗಲಕೋಟೆ ನವನಗರ ಬಸ್ ನಿಲ್ದಾಣದಲ್ಲಿ ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಅಕ್ರಮವಾಗಿ ಗೋಮಾಂಸ ಸಾಗಿಸಲು ಯತ್ನ ನಡೆದಿದೆ. ಬಸ್ ಕಂಡಕ್ಟರ್‌ ಸಮಯ ಪ್ರಜ್ಞೆಯಿಂದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

Bagalkot beef transport in ksrtc two arrested by police rav

ಬಾಗಲಕೋಟೆ (ಏ.6): ಬಾಗಲಕೋಟೆಯ ನವನಗರ ಬಸ್‌ ನಿಲ್ದಾಣದಲ್ಲಿ ಶನಿವಾರ ಮಧ್ಯಾಹ್ನ ಕೆಎಸ್ಆರ್‌ಟಿಸಿ ಬಸ್‌ನಲ್ಲಿ ನಾಲ್ಕು ಗೋಣಿ ಚೀಲಗಳಲ್ಲಿ ಅಕ್ರಮವಾಗಿ ಗೋಮಾಂಸ ಸಾಗಿಸಲು ಯತ್ನ ನಡೆದಿದ್ದು, ಇದನ್ನು ಪತ್ತೆ ಹಚ್ಚಿದ ಬಸ್‌ ಕಂಡಕ್ಟರ್‌ ಮಾಲು ಸಮೇತ ಓರ್ವ ಪುರುಷ, ಓರ್ವ ಮಹಿಳೆಯನ್ನು ಕೆಳಗಿಳಿಸಿದ್ದಾರೆ.

ವಿಷಯ ತಿಳಿದು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಸ್ಥಳಕ್ಕೆ ದೌಡಾಯಿಸಿದರು. ಆದರೆ, ಅಷ್ಟರೊಳಗೆ ಆರೋಪಿಗಳು ಎರಡು ಚೀಲಗಳಲ್ಲಿದ್ದ ಗೋಮಾಂಸವನ್ನು ಆಟೋ ರಿಕ್ಷಾದಲ್ಲಿ ಹಾಕಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಅಲ್ಲಿಯೇ ಬಿಟ್ಟಿದ್ದ ಇನ್ನೆರಡು ಚೀಲದಲ್ಲಿನ ಗೋಮಾಂಸವನ್ನು ನವನಗರ ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Latest Videos

ಬಸ್‌ ತಾಳಿಕೋಟೆಯಿಂದ ಹುಬ್ಬಳ್ಳಿಗೆ ಹೊರಟಿದ್ದು, ಬಾಗಲಕೋಟೆ ನವನಗರ ನಿಲ್ದಾಣದಲ್ಲಿ ನಿಂತಿತ್ತು. ಈ ವೇಳೆ, ಆರೋಪಿಗಳು ಮಾಲಿನ ಸಮೇತ ಬಸ್‌ ಹತ್ತಿದ್ದರು. ಕಂಡಕ್ಟರ್‌ಗೆ ಟಿಕೆಟ್‌ ನೀಡುವಾಗ ಸೀಟಿನ ಕೆಳಗೆ ಹಾಕಿದ ಚೀಲಗಳ ಬಗ್ಗೆ ಸಂಶಯ ಬಂತು. ಅದರ ತಪಾಸಣೆ ನಡೆಸಿದಾಗ ಚೀಲದಲ್ಲಿ ಮಾಂಸ ಇರುವುದು ಪತ್ತೆಯಾಗಿದೆ. ಕೂಡಲೇ ಚೀಲದೊಂದಿಗೆ ಆರೋಪಿಗಳನ್ನು ಕೆಳಗೆ ಇಳಿಸಿದ್ದಾರೆ.

ಇದನ್ನೂ ಓದಿ: ಸಂತೆಯಲ್ಲಿ ಹೆಸರಿಗೆ ಸ್ವೀಟ್ ಅಂಗಡಿ, ಆದ್ರೆ ಗೌಪ್ಯವಾಗಿ ಗೋಮಾಂಸ ಮಾರಾಟ: ಯುವಕರು ಪೊಲೀಸರ ವಶಕ್ಕೆ

ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಹಿಂದೂ ಸಂಘಟನೆಯ ಕಾರ್ಯಕರ್ತರ ಆಗಮಿಸಿದರು. ಅಷ್ಟರೊಳಗೆ ಆರೋಪಿಗಳು 2 ಚೀಲದೊಂದಿಗೆ ಅಲ್ಲಿಂದ ಪರಾರಿಯಾಗಿದ್ದಾರೆ. ಹಿಂದೂ ಸಂಘಟನೆಗಳ ಕಾರ್ಯಕರ್ತರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಅಲ್ಲಿಯೇ ಇದ್ದ ಎರಡು ಚೀಲವನ್ನು ವಶಕ್ಕೆ ಪಡೆದಿದ್ದಾರೆ. ತಪಾಸಣೆ ವೇಳೆ ಅದು ಗೋಮಾಂಸ ಎಂಬುದು ತಿಳಿದು ಬಂದಿದೆ. ಈ ಸಂಬಂಧ ಓರ್ವ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ.

vuukle one pixel image
click me!