ಇಲ್ಲಿನ ರಾಣಿ ಬಗೀಚ್ ಪ್ರದೇಶದ ದಲಿತರ ಮನೆಗಳಿಗೆ ತೆರಳಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ ವಿತರಿಸಿದರು. ರಾಮಮಂದಿರ ಉದ್ಘಾಟನೆಗೆ ದೇಶ ಸಾಕ್ಷಿಯಾಗಲಿದೆ. ಎಲ್ಲೆಡೆ ಭಕ್ತಿಯ ವಾತಾವರಣ ನಿರ್ಮಾಣವಾಗಿದೆ. ನೂರಾರು ವರ್ಷಗಳ ಕನಸು ಈಗ ನನಸಾಗುತ್ತಿದೆ. ಎಲ್ಲರೂ ಈ ಶುಭ ಘಳಿಗೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ವಿಜಯಪುರ (ಜ.5) ಇಲ್ಲಿನ ರಾಣಿ ಬಗೀಚ್ ಪ್ರದೇಶದ ದಲಿತರ ಮನೆಗಳಿಗೆ ತೆರಳಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ ವಿತರಿಸಿದರು. ರಾಮಮಂದಿರ ಉದ್ಘಾಟನೆಗೆ ದೇಶ ಸಾಕ್ಷಿಯಾಗಲಿದೆ. ಎಲ್ಲೆಡೆ ಭಕ್ತಿಯ ವಾತಾವರಣ ನಿರ್ಮಾಣವಾಗಿದೆ. ನೂರಾರು ವರ್ಷಗಳ ಕನಸು ಈಗ ನನಸಾಗುತ್ತಿದೆ. ಎಲ್ಲರೂ ಈ ಶುಭ ಘಳಿಗೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಪಾದ ಪೂಜೆ:
undefined
ಇದೇ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಾಜಿ ಉಪ ಮೇಯರ್ ಗೋಪಾಲ ಘಟಕಾಂಬಳೆ ಅವರ ಮನೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಗೋಪಾಲ ಘಟಕಾಂಬಳೆ ಪರಿವಾರದ ಸದಸ್ಯರು ಶ್ರೀಗಳಿಗೆ ಪಾದಪೂಜೆ ನೆರವೇರಿಸಿದರು. ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ರಾಮಮಂದಿರದಲ್ಲಿ ಪೂಜೆಯಾದ ಪವಿತ್ರ ಮಂತ್ರಾಕ್ಷತೆಯನ್ನು ವಿವಿಧ ಭಕ್ತರಿಗೆ ನೀಡಿದರು. ರಾಮಮಂದಿರ ದೇಶದ ಅಸ್ಮಿತೆ ಹೆಚ್ಚಿಸಿದೆ. ನಮ್ಮತನ ಇಮ್ಮಡಿಗೊಳಿಸಿದೆ. ದೇಶದ ಜನ ಪರಸ್ಪರ ಸೌಹಾರ್ದತೆಯಿಂದ ಇರುವಂತಾಗಬೇಕು. ಹಿಂದು ಧರ್ಮದ ಹಿರಿಮೆ ಹೆಚ್ಚಬೇಕು ಎಂದು ಹೇಳಿದರು.
ಮತಾಂತರ, ಗೋಹತ್ಯೆ ನಿಷೇಧ ಕಾಯ್ದೆ ರದ್ದು ದುಸ್ಸಾಹಸ ಬೇಡ: ಪೇಜಾವರ ಶ್ರೀ