
ಬೆಂಗಳೂರು(ನ.09): ಅಯೋಧ್ಯೆ ರಾಮ ಜನ್ಮ ಭೂಮಿ ತೀರ್ಪಿನ ಬಗ್ಗೆ ಅಣ್ಣಾಮಲೈ ಅವರು ಪ್ರತಿಕ್ರಿಯಿಸಿದ್ದಾರೆ. ಈಗಾಗಲೇ ಹಲವು ಪ್ರಮುಖರು ತೀರ್ಪಿನ ಬಗ್ಗೆ ಅಭಿಪ್ರಾಯಗಳನ್ನು ತಿಳಿಸಿದ್ದು, ಅಣ್ಣಾಮಲೈ ಅವರು ಸುಪ್ರೀಂ ಕೋರ್ಟ್ ತೀರ್ಪನ್ನು ಭಾರತದಲ್ಲಿ ಹೊಸ ಅಧ್ಯಾಯ ಎಂದು ಬಣ್ಣಿಸಿದ್ದಾರೆ.
ರಾಮನ ಮಡಿಲಿಗೆ ಅಯೋಧ್ಯೆ: ಇವರೆಲ್ಲರ ಹೇಳಿಕೆಯಲ್ಲಿದೆ ಸಹೋದರತ್ವದ ವಿದ್ಯೆ!
ದಶಕಗಳ ವಿವಾದಕ್ಕೆ ಸುಪ್ರಿಂ ಕೋರ್ಟ್ ಇಂದು ತೆರೆ ಎಳೆದಿದ್ದು, ಈ ಬಗ್ಗೆ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಟ್ವೀಟ್ ಮಾಡಿದ್ದಾರೆ. ಅಯೋಧ್ಯೆ ತೀರ್ಪಿನ ಬಗ್ಗೆ ಟ್ವೀಟ್ ಮಾಡಿ, ಇದು ಭಾರತಕ್ಕೆ ಹೊಸ ಅಧ್ಯಾಯದ ಆರಂಭ. ಈ ದಿನವು ಮಾನವೀಯತೆಗೆ ಶಾಂತಿ, ಸಹನೆ ಮತ್ತು ಗೌರವವನ್ನು ನೀಡಲಿ. ಸ್ವಯಂ ಹಿತಾಸಕ್ತಿಗಳನ್ನ ಅಳಿಸಿ ಹಾಕಿ ನಾನು ‘ಭಾರತೀಯ’ ಎಂಬುದು ಮುಂಚೂಣಿಗೆ ಬರಲಿ ಎಂದು ಹಾರೈಸಿದ್ದಾರೆ.
7 ದಶಕಗಳ ಅಯೋಧ್ಯೆ ರಾಮ ಜನ್ಮ ಭೂಮಿ ವಿವಾದಕ್ಕೆ ಇಂದು ತೆರೆ ಬಿದ್ದಿದ್ದು, ಸುಪ್ರೀಂ ಇಂದು ಐತಿಹಾಸಿಕ ತೀರ್ಪು ಪ್ರಕಟಿಸಿದೆ. ವಿವಾದಿತ 2.77 ಎಕರೆ ಜಾಗವನ್ನು ರಾಮಲಲ್ಲಾಗೆ ವಹಿಸಿ ಸುಪ್ರೀಂ ತೀರ್ಪು ನೀಡಿದೆ. ಯಾರ ಭಾವನೆಗೂ ಧಕ್ಕೆಯಾಗದಂತೆ ಬಾಬರಿ ಮಸೀದಿಗೂ ಅಯೋಧ್ಯೆಯಲ್ಲೇ ಪ್ರತ್ಯೇಕ ಜಾಗವನ್ನು ಕಲ್ಪಿಸುವಂತೆ ಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ.
ರಾಮ ಮಂದಿರ ಕಟ್ಟಲು ಮುಸ್ಲಿಂ ಸ್ವಯಂ ಸೇವಕರಾಗಿ ನಾವೂ ಬರ್ತೀವಿ: ರೋಷನ್ ಬೇಗ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ