‘ಬಲಿಜ ಸಮುದಾಯಕ್ಕೆ 2ಎ ಮೀಸಲಾತಿ’

By Kannadaprabha NewsFirst Published Nov 9, 2019, 10:51 AM IST
Highlights

 ಬಲಿಜ ಸಮುದಾಯಕ್ಕೆ 2ಎ ಮೀಸಲಾತಿಗೆ ಬೇಡಿಕೆ ಇದೆ. ಶೀಘ್ರದಲ್ಲಿಯೇ ಮೀಸಲಾತಿ ಒದಗಿಸಲು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಚಿಕ್ಕಬಳ್ಳಾಫುರ [ನ.09]:  ‘ಉದ್ಯೋಗದಲ್ಲಿಯೂ 2 ಎ ಮೀಸಲಾತಿ ಒದಗಿಸುವಂತೆ ಬಲಿಜ ಸಮುದಾಯದಿಂದ ಸಾಕಷ್ಟು ಬೇಡಿಕೆ ಇದೆ. ಶೀಘ್ರದಲ್ಲಿಯೇ ಮೀಸಲಾತಿ ಒದಗಿಸಲು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ನಗರದ ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಚಿಕ್ಕಬಳ್ಳಾಪುರ ವೈದ್ಯಕೀಯ ಕಾಲೇಜಿಗೆ ಶಂಕುಸ್ಥಾಪನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ  ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1991ರಲ್ಲಿ ‘2ಎ’ ಮೀಸಲಾತಿಯಲ್ಲಿದ್ದ ಬಲಿಜ ಸಮುದಾಯ ‘3ಎ’ಗೆ ಸೇರ್ಪಡೆಯಾಯಿತು. 

ಅಂದಿನಿಂದಲೂ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಅಂದೇ ಮನವಿ ಕೂಡ ಬಂದಿದ್ದು, ನಾನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ವೇಳೆ ಶಿಕ್ಷಣಕ್ಕೆ ‘ಎ’ ಮೀಸಲಾತಿ ಲಭಿಸುವಂತೆ ಮಾಡಿದ್ದೆ. ಈಗ ಉದ್ಯೋಗದಲ್ಲಿಯೂ 2 ಎ ಮೀಸಲಾತಿ ನೀಡುವಂತೆ ಬೇಡಿಕೆ ಇದೆ. ಈ ಕುರಿತು ಶೀಘ್ರವೇ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ಚಿಕ್ಕಬಳ್ಳಾಪುರಕ್ಕೆ ಸರ್ಕಾರ ರಚನೆಯಾದ ಕೇವಲ 15 ದಿನದಲ್ಲಿ ವೈದ್ಯಕೀಯ ಕಾಲೇಜು ಮಂಜೂರು ಮಾಡಲಾಗಿದೆ. 

ಬೆಂಬಲ ನೀಡಿದ ಅನರ್ಹ ಶಾಸಕ ಸುಧಾಕರ್ ಕ್ಷೇತ್ರಕ್ಕೆ BSY ಭರಪೂರ ಕೊಡುಗೆ!...

ಮುಂದಿನ 2 ವರ್ಷದಲ್ಲಿ ಮಾದರಿಯಾದ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಸಿದ್ಧವಿದೆ ಎಂದರು. 

ಮಾದರಿ ತಾಲೂಕಾಗಿ ಮಂಚೇನಹಳ್ಳಿ: ಹಲವಾರು ವರ್ಷಗಳ ಬೇಡಿಕೆಯಾಗಿದ್ದ ಮಂಚೇನಹಳ್ಳಿ ತಾಲೂಕು ಕೇಂದ್ರ ಘೋಷಣೆಯನ್ನು ಸರ್ಕಾರ ರಚನೆಯಾದ 30 ದಿನದಲ್ಲಿ ಮಾಡಲಾಗಿದ್ದು, ಇದನ್ನು ಮಾದರಿ ತಾಲೂಕು ಮಾಡುವ ಹೊಣೆ ತಮ್ಮ ಮೇಲಿದೆ. ಇದಕ್ಕೆ ಅಗತ್ಯ ಅನುದಾನ ನೀಡಲಾಗುವುದು ಎಂದರು. ಅಭಿವೃದ್ಧಿ ಮುಂದುವರಿಯಲು ಡಾ. ಸುಧಾಕರ್ ಗೆಲ್ಲಬೇಕು: ‘ನಾವು ಮಾಡಿದ ಸಾಧನೆ ಮಾತಾಗಬೇಕೆ ಹೊರತು ಮಾತನಾಡುವುದೇ ಸಾಧನೆಯಾಗಬಾರದು ಎಂಬಂತೆ ಡಾ.ಕೆ. ಸುಧಾಕರ್ ಮಾಡಿ ತೊರಿಸಿದ್ದಾರೆ. 

ಅಭಿವೃದ್ಧಿ ಮುಂದುವರಿಸಬೇಕಾದರೆ ಸುಧಾಕರ್ ಮತ್ತೆ ಆಯ್ಕೆಯಾಗಬೇಕೆಂದು ಸಿಎಂ ಹೇಳಿದರು.

click me!