
ಮಂಡ್ಯ (ಜ.20) : ಅಯೋಧ್ಯಾ ರಾಮಮಂದಿರ ಉದ್ಘಾಟನೆ ಮೋದಿ ಅವರು ಮಾತ್ರ ಮಾಡ್ತಿದ್ದಾರೆ. ಸಚಿವ ಸಂಪುಟ ಸದಸ್ಯರನ್ನೇ ಕರೆದಿಲ್ಲ. ರಾಮಮಂದಿರ ಹೋರಾಟ ಮಾಡಿದ ಅಡ್ವಾನಿ ಅವ್ರನ್ನೆ ಬರಬೇಡಿ ಎಂದಿದ್ದಾರೆ. ಅಪೂರ್ಣ ಮಂದಿರ ಉದ್ಘಾಟನೆಗೆ ಮಠಗಳೇ ವಿರೋಧಿಸಿವೆ. ಇದು ಚುನಾವಣೆಗಾಗಿ ಉದ್ಘಾಟನೆ ನಡೆತಿರೋ ಕಾರ್ಯಕ್ರಮ. ಹೀಗಾಗಿ ನಾವು ಹೋಗವುದಿಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿಳಿಸಿದರು.
ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ರಾಮಮಂದಿರ ಉದ್ಘಾಟನೆ ನಮಗೂ ಸಂತಸ, ನಾವೂ ರಾಮಭಕ್ತರೇ ಆದರೆ ಚುನಾವಣೆ ದೃಷ್ಟಿಯಿಂದ ಮಾಡುವುದು ಸರಿಯಲ್ಲ. ಹೆಚ್ಚು ದಿನ ನಡೆಯಲ್ಲ. ಬಿಜೆಪಿಯವರು ದೇವರು, ದೇವಸ್ಥಾನ ಇಟ್ಟುಕೊಂಡು ಚುನಾವಣೆ ನಡೆಸಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಜ.22 ರಂದು ಅಯೋಧ್ಯಾ ರಾಮನ ಪ್ರಾಣ ಪ್ರತಿಷ್ಠಾಪನೆಗೆ ಸರ್ಕಾರಿ ರಜೆ ನೀಡುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ: ಸಿಎಂ
ರಾಮಮಂದಿರ ಉದ್ಘಾಟನೆಗೆ ರಾಜ್ಯದ ಸಿಎಂ ಸಿದ್ದರಾಮಯ್ಯರನ್ನೆ ಕರೆದಿಲ್ಲ. ಇದು ಕನ್ನಡಿಗರಿಗೆ ಮಾಡಿದ ಅಪಮಾನ ಅಲ್ವಾ? ಕೇಂದ್ರದಲ್ಲಿ ರಜೆ ಘೋಷಣೆ ಮಾಡಿ, ದೇಶಕ್ಕೆ ರಜೆ ಕೊಡಿಸಲಿ. ಅಪರೂಪಕ್ಕೆ ಯುಪಿ ಸಿಎಂರನ್ನ ಪಕ್ಕಕ್ಕೆ ಕರೆದುಕೊಳ್ತಾರೆ. ಅಮಿತ್ ಶಾ ಕೂಡ ಇಲ್ಲ. ಕಾರ್ಯಕ್ರಮ ಎಲ್ಲ ಮೋದಿಯವರದೇ ದೊಡ್ಡ ದೊಡ್ಡ ಫೋಟೊಗಳು, ರಾಮನದ್ದು ಚಿಕ್ಕ ಫೋಟೊಗಳು. ದೇವರನ್ನು ಮುಂದಿಟ್ಟು ರಾಜಕೀಯ ಮಾಡುತ್ತಿರುವ ಬಿಜೆಪಿಯವರಿಗೆ ಜನ ಉತ್ತರ ಕೊಡುವ ದಿನ ಬರುತ್ತದೆ. ಈ ಚುನಾವಣೆಯಲ್ಲೇ ಬರಬಹುದು ಅಥವಾ ಮುಂದಿನ ಚುನಾವಣೆಯಲ್ಲಾದ್ರು ಆಗಬಹುದು ಎಂದರು.
ಇನ್ನು ಸುಮಲತಾ ಕಾಂಗ್ರೆಸ್ ಸೇರ್ಪಡೆ ವಿಚಾರ ಸಂಬಂಧ ಮಾತನಾಡಿದ ಅವರು, ನನಗೂ ಬೇರೆಯವರಿಗೂ ತುಂಬಾ ವ್ಯತ್ಯಾಸ ಇದೆ. ಹಾಗಾಗಿ ಚರ್ಚೆ ಆಗದ ವಿಚಾರ ಪ್ರಸ್ತಾಪ ಮಾಡಲ್ಲ. ಸುಮಲತಾ ಕಾಂಗ್ರೆಸ್ ಸೇರ್ಪಡೆಗೆ ಡಿಕೆಶಿ ವಿರೋಧ ಇದೆಯಾ ಎಂಬ ಪ್ರಶ್ನೆಗೆ ಅವರಿಬ್ಬರ ಚರ್ಚೆ ವಿಚಾರ ನನಗೆ ಗೊತ್ತಿಲ್ಲ. ಆದರೆ ಗೆದ್ದ ಬಳಿಕ ಸುಮಲತಾ ಅವರು ನನ್ನ ಬಳಿ ರಾಜಕಾರಣ ಚರ್ಚೆ ಮಾಡಿಲ್ಲ. ಆಗಾಗ ಸಿಕ್ಕ ವೇಳೆ ವಿಶ್ವಾಸದಲ್ಲಿ ಮಾತನಾಡಿದ್ದೇವೆ ಅಷ್ಟೇ.
ಆವಿಷ್ಕಾರಗಳ ಫಲ ರೈತರಿಗೆ ತಲುಪಿಸಲು ವ್ಯವಸ್ಥೆ: ಸಚಿವ ಚಲುವರಾಯಸ್ವಾಮಿ
ಕೆಲವು ಕಡೆ ಸ್ಪರ್ಧೆ ಮಾಡಿ ಎಂದು ಹೈಕಮಾಂಡ್ ಸಚಿವರಿಗೆ ಹೇಳಿರುವುದು ಸತ್ಯ ಆದರೆ ನಮ್ಮ ಜಿಲ್ಲೆ ವಿಚಾರದಲ್ಲಿ ಈ ಬಗ್ಗೆ ಚರ್ಚೆ ಆಗಿಲ್ಲ ಎಂದರು.
MLC ಮಧು ಮಾದೇಗೌಡರ ಅಸಮಾಧಾನಗೊಂಡಿರುವ ಬಗ್ಗೆ ಮಾತನಾಡಿದ ಸಚಿವರು. ನಾನು ಈಗಾಗಲೇ ಅವರ ಜೊತೆಗೆ ಮಾತನಾಡಿದ್ದೇನೆ. ಸಮಸ್ಯೆಗಳು ಪಕ್ಷದ ಆಂತರಿಕ ವಿಚಾರ, ಅದನ್ನು ಹೇಳಲು ಆಗಲ್ಲ. ನಮ್ಮ ಜೊತೆ ಚುನಾವಣೆಯಲ್ಲಿ ಸಕ್ರಿಯವಾಗಿರಲಿದ್ದಾರೆ. ಕುಮಾರಸ್ವಾಮಿ ಸ್ಪರ್ಧೆ ಮಾಡಿದರೆ ಮಾಡಲಿ. ಪ್ರತಿಸ್ಪರ್ಧಿಗಳನ್ನ ಅವರು ಬೇಡ ಇವರು ಬೇಡ ಎಂದಿಲ್ಲ. ಸ್ಥಳೀಯವಾದ ಇಲ್ಲವಾದಾಗ ಅವರೋ ಇನ್ನೊಬ್ಬರೋ ನಿಂತು ಕೊಳ್ತಾರೆ. ನಮಗೆ ಸ್ಥಳೀಯವಾಗೆ ಅಭ್ಯರ್ಥಿ ಇದ್ದಾರೆ. ಪ್ರಬಲ, ದುರ್ಬಲ ಅಭ್ಯರ್ಥಿ ಅಂತಾ ಇಲ್ಲ ಜನರ ತೀರ್ಮಾನ ಅಂತಿಮ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ