Donation to Indian Army: ಅವಧೂತ ದತ್ತಪೀಠದಿಂದ ಭಾರತೀಯ ಸೇನೆಗೆ 25 ಲಕ್ಷ ರು. ಕಾಣಿಕೆ

Kannadaprabha News   | Kannada Prabha
Published : May 27, 2025, 11:33 AM ISTUpdated : May 27, 2025, 11:42 AM IST
Mysuru

ಸಾರಾಂಶ

ಮೈಸೂರಿನ ಅವಧೂತ ದತ್ತಪೀಠವು ಭಾರತೀಯ ಸೇನೆಗೆ ₹25 ಲಕ್ಷ ಕಾಣಿಕೆ ನೀಡಿದೆ. 26ನೇ ಬ್ರಹ್ಮೋತ್ಸವದ ಅಂಗವಾಗಿ ಈ ಕಾಣಿಕೆಯನ್ನು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಹಸ್ತಾಂತರಿಸಲಾಯಿತು.

ಮೈಸೂರು (ಮೇ.27): ಮೈಸೂರಿನ ಅವಧೂತ ದತ್ತಪೀಠದ ವತಿಯಿಂದ ಭಾರತೀಯ ಸೇನೆಗೆ 25 ಲಕ್ಷ ರೂಗಳ ಕಾಣಿಕೆಯನ್ನು ಅರ್ಪಿಸಲಾಯಿತು.ಶ್ರೀ ದತ್ತ ವೆಂಕಟೇಶ್ವರ ಕ್ಷೇತ್ರದ 26ನೇ ಬ್ರಹ್ಮೋತ್ಸವದ ಅಂಗವಾಗಿ ವೇದ ಪಾರಾಯಣಗಳ ಮೂಲಕ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಮತ್ತು ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರ ಸಮ್ಮುಖದಲ್ಲಿ ಉದ್ಘಾಟನೆಗೊಂಡಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮೈಸೂರು ಕೊಡಗು ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಮೂಲಕ ಅವಧೂತ ದತ್ತ ಪೀಠದಿಂದ ಕೊಡ ಮಾಡುವ 25 ಲಕ್ಷ ರೂಗಳ ಚೆಕ್ ಹಸ್ತಾಂತರಿಸಲಾಯಿತು.

ಕಾಣಿಕೆಯನ್ನು ಸ್ವೀಕರಿಸಿ ಮಾತನಾಡಿದ ಯದುವೀರ್ ಒಡೆಯರ್ ಅವರು, ಮೈಸೂರು ನಗರ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಸಂಸ್ಕೃತಿ ಮತ್ತು ಪರಂಪರೆ,ಗುರು ಪರಂಪರೆಯನ್ನು ಅವಧೂತ ದತ್ತಪೀಠ ಉಳಿಸಿಕೊಂಡು ಬಂದಿದೆ.ಅತ್ಯುತ್ತಮ ವಾತಾವರಣ, ಸಂಗೀತದ ವಾತಾವರಣ ಇಲ್ಲಿ ನೆಲೆಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 83ನೇ ಜನ್ಮದಿನೋತ್ಸವವೂ ಕೂಡ ಇರುವುದರಿಂದ ಅವರಿಗೆ ಆರೋಗ್ಯ ಐಶ್ವರ್ಯ ಆಯಸ್ಸು ಸಂತೋಷ ಸಿಗಲಿ ಎಂದು ಶುಭ ಹಾರೈಸಿದರು.

ಆಶ್ರಮದಿಂದ ಕೊಡ ಮಾಡಿರುವ ಈ ಕಾಣಿಕೆಯನ್ನು ನಾನು ನಮ್ಮ ಭಾರತ ಸರ್ಕಾರಕ್ಕೆ ತಲುಪಿಸುತ್ತೇನೆ, ಶ್ರೀಗಳ ಆಶೀರ್ವಾದವು ಇಡೀ ಭಾರತದ ಜನರ ಮೇಲೆ ಮತ್ತು ನಮ್ಮ ಸೈನಿಕರ ಮೇಲೆ ಇರಬೇಕೆಂದು ಪ್ರಾರ್ಥಿಸುತ್ತೇನೆ ಎಂದು ಯದುವೀರ ಕೃಷ್ಣ ದತ್ತ ಚಾನರಾಜ ಒಡೆಯರ್ ಕೋರಿದರು.

ಈ ವೇಳೆ ನಿವೃತ್ತ ನ್ಯಾಯ ಮೂರ್ತಿ ಮಂಜುಳಾ ಚೆಲ್ಲೂರ್, ಶಾಸಕರಾದ ಟಿ ಎಸ್ ಶ್ರೀವತ್ಸ, ಬಿಜೆಪಿ ನಗರ ಅಧ್ಯಕ್ಷ ಎಲ್. ನಾಗೇಂದ್ರ ಮತ್ತಿತರರು ಉ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್