
ಬೆಂಗಳೂರು (ನ.01): ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಏಥರ್, ಕನ್ನಡ ರಾಜ್ಯೋತ್ಸವದಂದು ತನ್ನ ರಿಜ್ದಾ ಸ್ಕೂಟರ್‌ನ ಡ್ಯಾಷ್‌ಬೋರ್ಡ್‌ನಲ್ಲಿ ಕನ್ನಡ ಭಾಷೆಯನ್ನು ಪರಿಚಯಿಸುತ್ತಿದೆ. ನ.1ರಿಂದಲೇ ಈ ಮಾದರಿಯ ಎಲ್ಲಾ ಸ್ಕೂಟರ್‌ಗಳಲ್ಲಿ ಕನ್ನಡ ಲಭ್ಯವಾಗುವಂತೆ ಸಾಫ್ಟ್‌ವೇರ್ ಅನ್ನು ಅಪ್‌ಡೇಟ್ ಮಾಡಲಾಗುವುದು. ಈ ಬಗ್ಗೆ ಏಥರ್ ಎನರ್ಜಿಯ ಮುಖ್ಯ ತಂತ್ರಜ್ಞ ಹಾಗೂ ಸಹಸಂಸ್ಥಾಪಕರಾಗಿರುವ ಸ್ವಪ್ನಿಲ್ ಜೈನ್, ‘ಶುರುವಿನಿಂದಲೂ ಕರ್ನಾಟಕ ನಮಗೆ ಮನೆಯಂತಿದೆ.
ಇಲ್ಲೇ ನಾವು ನಮ್ಮ ಸ್ಕೂಟರ್ ಹಾಗೂ ತಂಡದ ಬಹುಪಾಲನ್ನು ಕಟ್ಟಿರುವುದು. ಸಂಸ್ಕೃತಿ ಮತ್ತು ಭಾಷೆ ಆಳವಾಗಿ ಬೇರೂರಿರುವ ರಾಜ್ಯದಲ್ಲಿ, ರಿಜ್ದಾ-ಝಡ್ ಡ್ಯಾಶ್‌ಬೋರ್ಡ್‌ಗೆ ಕನ್ನಡವನ್ನು ಸೇರಿಸುವುದು, ಸವಾರ ಅನುಭವವನ್ನು ವೈಯಕ್ತಿಕ ಮತ್ತು ಸುಲಭವಾಗಿಸಲು ಉತ್ತಮವಾಗಿದೆ’ ಎಂದಿದ್ದಾರೆ. ರಿಜ್ದಾದಲ್ಲಿ 8 ಸ್ಥಳೀಯ ಭಾಷೆಗಳನ್ನು ಸೇರಿಸುವುದಾಗಿ ಏಥರ್ ಮೊದಲೇ ಘೋಷಿಸಿತ್ತು. ಅದರಂತೆ ಈಗಾಗಲೇ ಹಿಂದಿ ಸೇರ್ಪಡೆಯಾಗಿದೆ. ಇದೀಗ ಕನ್ನಡದ ಸರದಿ. ಮುಂದಿನ ದಿನಗಳಲ್ಲಿ ಮರಾಠಿ, ಗುಜರಾತಿ, ಬಂಗಾಳಿ, ತಮಿಳು, ತೆಲುಗು, ಮಲಯಾಳಂ ಸೇರ್ಪಡೆಗೊಳ್ಳಲಿದೆ.
ಡ್ಯಾಷ್‌ಬೋರ್ಡ್‌ನ ಸೆಟ್ಟಿಂಗ್ಸ್‌ನಲ್ಲಿ ಭಾಷೆ ಎಂಬಲ್ಲಿ ‘ಕನ್ನಡ’ವನ್ನು ಆಯ್ಕೆ ಮಾಡಿಕೊಳ್ಳಬೇಕು. ಕೂಡಲೇ, ಅದರಲ್ಲಿ ತೋರಿಸಲಾಗುವ ಎಲ್ಲಾ ಮಾಹಿತಿಗಳು ಆಂಗ್ಲ ಭಾಷೆಯಿಂದ ಕನ್ನಡದಕ್ಕೆ ಬದಲಾಗಲಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ