- ತೆರವುಗೊಳಿಸಿದ್ದ ಮೈಸೂರು ಮಹಾರಾಜರ ಫೋಟೋಗಳನ್ನು ಮತ್ತೆ ಅಳವಡಿಸಿದ ಜಿಲ್ಲಾಡಳಿತ...
- ಬಿಳಿಗಿರಿರಂಗನಬೆಟ್ಟದ ಬಿಳಿಗಿರಿರಂಗನ ನಾಥಸ್ವಾಮಿ ದೇವಾಲಯದಲ್ಲಿ ಹಾಕಲಾಗಿದ್ದ ಫೋಟೋಗಳು
- ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಬಿಳಿಗಿರಿರಂಗನ ಬೆಟ್ಟ
ಚಾಮರಾಜನಗರ (ಸೆ. 12): ಬಿಳಿಗಿರಿರಂಗನಬೆಟ್ಟದ ಬಿಳಿಗಿರಿರಂಗನ ನಾಥಸ್ವಾಮಿ ದೇವಾಲಯದಲ್ಲಿ ಹಾಕಲಾಗಿದ್ದ ಮೈಸೂರು ಮಹಾರಾಜರ ಫೋಟೋಗಳನ್ನು ತೆರವುಗೊಳಿಸಿ ಚಾಮರಾಜನಗರ ಜಿಲ್ಲಾಡಳಿತ ಎಡವಟ್ಟು ಮಾಡಿತ್ತು.
ಫೋಟೋ ತೆರವುಗೊಳಿಸಿ ಮೈಸೂರು ಒಡೆಯರ ಬಗೆಗಿನ ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡಿತ್ತು. ಜೊತೆಗೆ ಭಕ್ತರು ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಫಲಶೃತಿ ಎಂಬಂತೆ ತೆರವುಗೊಳಿಸಿದ್ದ ಮೈಸೂರು ಮಹಾರಾಜರ ಫೋಟೋಗಳನ್ನು ಜಿಲ್ಲಾಡಳಿತ ಮತ್ತೆ ಅಳವಡಿಸಿದೆ.
undefined
ದೇವಾಲಯದಿಂದ ಮೈಸೂರು ಒಡೆಯರ್ ಫೋಟೋ ತೆರವು.. ಜಿಲ್ಲಾಡಳಿತ ಎಡವಟ್ಟು
ರಾಜ್ಯದ ಏಳಿಗೆಗೆ ಮಹಾರಾಜರ ಕೊಡುಗೆಯ ನೆನಪಿಗಾಗಿ ಮೈಸೂರು ಮಹಾರಾಜರ ಫೋಟೋಗಳನ್ನು ಹಾಕಲಾಗಿತ್ತು. ಅಷ್ಟೇ ಅಲ್ಲ, ಮಹಾರಾಜರು ಬಿಳಿಗಿರಿರಂಗಾನಾಥಸ್ವಾಮಿಗೆ ಚಿನ್ನ ಬೆಳ್ಳಿ ಆಭರಣಗಳನ್ನು ಕೊಡುಗೆಯಾಗಿ ನೀಡಿದ್ದರು. ಜೀರ್ಣೋದ್ಧಾರ ನಂತರ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಹಿರಿಯ ಅಧಿಕಾರಿ, ಸತ್ತವರ ಫೋಟೋ ಏಕೆ ಹಾಕಿದ್ದೀರಿ ? ತೆಗೆದು ಹಾಕಿ ಎಂದು ಸೂಚಿಸಿದ್ದರು. ಹಿರಿಯ ಅಧಿಕಾರಿ ಸೂಚನೆ ಮೇರೆಗೆ ಮಹಾರಾಜರ ಫೋಟೋಗಳನ್ನು ಅಧಿಕಾರಿಗಳು ತೆರವುಗೊಳಿಸಿದ್ದರು. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿಯ ಪರಿಣಾಮ ಮತ್ತೆ ಮಹಾರಾಜರ ಫೋಟೋಗಳು ರಾರಾಜಿಸಿವೆ.