ಗುಡ್ ನ್ಯೂಸ್ : ಮಾರ್ಚ್ ಬಳಿಕ ಅತೀ ಕಡಿಮೆ ಕೊರೋನಾ ಕೇಸ್

By Kannadaprabha NewsFirst Published Sep 12, 2021, 8:45 AM IST
Highlights
  • ರಾಜ್ಯದಲ್ಲಿ ಶನಿವಾರ ಕೊರೋನಾ ಪರೀಕ್ಷೆ ಪ್ರಮಾಣ ಮತ್ತೆ ಇಳಿಕೆ
  • 2ನೆ ಅಲೆಯಲ್ಲೆ ಅತಿ ಕಡಿಮೆ ಸೋಂಕು ಪ್ರಕರಣ ವರದಿ

ಬೆಂಗಳೂರು (ಸೆ.12): ರಾಜ್ಯದಲ್ಲಿ ಶನಿವಾರ ಕೊರೋನಾ ಪರೀಕ್ಷೆ ಪ್ರಮಾಣ ಮತ್ತೆ ಇಳಿಕೆಯಾಗಿದೆ. ಪರಿಣಾಮ 2ನೆ ಅಲೆಯಲ್ಲೆ ಅತಿ ಕಡಿಮೆ ಸೋಂಕು ಪ್ರಕರಣ ವರದಿಯಾಗಿದೆ.

ಶನಿವಾರ ಹಬ್ಬದ ಹಿನ್ನೆಲೆಯಲ್ಲಿ ಕೇವಲ 1.1 ಲಕ್ಷ  ಪರೀಕ್ಷೆಯನ್ನಷ್ಟೆ ನಡೆಸಲಾಗಿದೆ. ಪರಿಣಾಮ ಮಾರ್ಚ್ ಬಳಿಕ ಅತಿ ಕಡಿಮೆ ಪ್ರಕರಣ ವರದಿಯಾಗಿದ್ದು 801 ಜನಕ್ಕೆ ಮಾತ್ರ ಸೋಂಕು ವರದಿಯಾಗಿದೆ.

ಸೆ.7 ರಂದು 851 ಪ್ರಕರಣ ವರದಿಯಾಗಿದ್ದು  ಹೊರತುಪಡಿಸಿದರೆ ಮಾರ್ಚ್ 2ನೇ ವಾರದ ಬಳಿಕ ಅತಿ ಕಡಿಮೆ ಪ್ರಕರಣ ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಕೇರಳದಿಂದ ಬರುವವರಲ್ಲಿ ಹೆಚ್ಚು ಪಾಸಿಟಿವ್ ಕೇಸ್‌ : ಉಡುಪಿಯಲ್ಲಿ ಕಠಿಣ ಕ್ರಮ

ಶನಿವಾರ 1.19 ಲಕ್ಷ ಪರೀಕ್ಷೆ ನಡೆಸಿದ್ದು ಶೆ.0.67 ರಷ್ಟು ಪಾಸಿಟಿವಿಟಿ  ದರದಂತೆ  801 ಪ್ರಕರಣ ವರದಿಯಾಗಿದೆ. ಇದರಿಂದಾಗಿ ಸೊಂಕಿತರ ಸಂಖ್ಯೆ 29.06 ಲಕ್ಷ ಮಂದಿ ಗುಣಮುಖರಾದಂತಾಗಿದೆ. 

ಸಕ್ರಿಯ ಪ್ರಕರಣಗಳು 16,672ಕ್ಕೆ ಕುಸಿದಿದೆ.  ಕಳೆದ 24 ಗಂಟೆಗಳಲ್ಲಿ 15 ಮಂದಿ ಸೋಂಕಿಗೆ ಬಲಿಯಾಗಿದ್ದು ಮೃತರ ಸಂಖ್ಯೆ 37,487 ತಲುಪಿದೆ. 

click me!