ಚಂದ್ರಶೇಖರ್ ಸ್ವಾಮೀಜಿ ಯಾವ ವಿಷಯದ ಆಧಾರದಲ್ಲಿ ಮಾತನಾಡಿದ್ದಾರೋ ಗೊತ್ತಿಲ್ಲ. ಆದರೆ ಆ ಬಳಿಕ ಆದರೂ ಅವರ ಮೇಲೆ ಎಫ್‌ಐ ಆರ್ ಮಾಡಿರುವ ಸರ್ಕಾರ, ದೇವೇಗೌಡರನ್ನ ಕೊಂಡುಕೊಳ್ಳುತ್ತೇನೆ ಎಂದ ಜಮೀರ್ ಮೇಲೆ ಯಾಕೆ ಸುಮೊಟೊ ಕೇಸ್ ಹಾಕಿಲ್ಲ? ಎಂದು ಪ್ರಶ್ನಿಸಿದರು.
ವರದಿ: ರವಿ. ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು : ಚಂದ್ರಶೇಖರ್ ಸ್ವಾಮೀಜಿ ಯಾವ ವಿಷಯದ ಆಧಾರದಲ್ಲಿ ಮಾತನಾಡಿದ್ದಾರೋ ಗೊತ್ತಿಲ್ಲ. ಆದರೆ ಆ ಬಳಿಕ ಮಾತನಾಡಿರುವುದರಲ್ಲಿ ತಪ್ಪಾಗಿದೆ ಅಂತ ಕ್ಷಮೆ ಕೇಳಿದ್ದಾರೆ. ಕ್ಷಮೆ ಕೇಳಿದ ಮೇಲೂ ಎಫ್ಐಆರ್ ಹಾಕುತ್ತೀರಾ ಎಂದರೆ ಅರ್ಥವಿದೆಯಾ.? ದೇವೇಗೌಡರ ಕುಟುಂಬವನ್ನು ಕೊಂಡುಕೊಳ್ಳುತ್ತೇವೆ ಎಂದೆಲ್ಲಾ ನಿಂದಿಸಿ ಮಾತನಾಡಿದ್ದ ಸಚಿವ ಜಮೀರ್ ಏನು ಮಾತನಾಡಿದ್ದರು. ಅವರ ಮೇಲೆ ಏಕೆ ಸರ್ಕಾರ ಸುಮೊಟೋ ಕೇಸ್ ಹಾಕಲಿಲ್ಲ ಎಂದು ಅರಕಲಗೂಡು ಶಾಸಕ ಎ ಮಂಜು ಖಾರವಾಗಿ ಪ್ರಶ್ನಿಸಿದ್ದಾರೆ.
ಕೊಡಗು ಕೆಡಿಪಿ ಸಭೆಯಲ್ಲಿ ಭಾಗವಹಿಸಿದ್ದ ಸಂದರ್ಭ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ತಾವು ಮಾತನಾಡಿದ್ದಕ್ಕೆ ಸ್ವಾಮೀಜಿ ಕೊನೆಪಕ್ಷ ಕ್ಷಮೆಯನ್ನಾದರೂ ಕೇಳಿದರು. ಈ ರೀತಿ ಮಾತನಾಡಿದ್ದಾರಲ್ಲ ಎನ್ನುವ ದೃಷ್ಟಿಯಲ್ಲಿ ಹೇಳಿದ್ದಾರೆ. ಅದು ಬಿಟ್ಟರೆ ರಾಜಕೀಯ ದುರುದ್ದೇಶದಿಂದ ಅವರು ಹಾಗೆ ಮಾತನಾಡಿರುವುದಿಲ್ಲ. ಹಾಗೆ ಹೇಳುವ ಒಂದು ವಾಯ್ಸ್ ಇದೆಯಲ್ಲ ಎನ್ನುವುದು ನನ್ನ ಭಾವನೆ ಎಂದು ಶಾಸಕ ಎ ಮಂಜು ಹೇಳಿದರು.
ಶಾಸಕ ಜಿ. ಡಿ ದೇವೇಗೌಡ ಸ್ವಪಕ್ಷದವರ ವಿರುದ್ಧವೇ ತಿರುಗಿ ಬಿದ್ದಿರುವ ವಿಚಾರಕ್ಕೆ ಜಿ. ಟಿ ದೇವೇಗೌಡ ವಿರುದ್ಧ ಶಾಸಕ ಎ ಮಂಜು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷದಲ್ಲಿ ಯಾವ ಆಂತರಿಕ ಕಲಹವೂ ಇಲ್ಲ. ಎಲ್ಲಿ ಅನುಕೂಲ, ಅನಾನುಕೂಲ ಜಾಸ್ತಿ ಆಗುತ್ತದೆ, ಅದರ ಬಗ್ಗೆ ಯೋಚಿಸುವ ರಾಜಕಾರಣಿಗಳು ಜಾಸ್ತಿ ಆಗಿದ್ದಾರೆ. ಈಗ ಸೈದ್ಧಾಂತಿಕ ರಾಜಕಾರಣ ಇಲ್ಲ. ನನಗೆ ಏನು ಲಾಭ ಅಥವಾ ನಷ್ಟವಾಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿ ಇದ್ದಾರೆ. ಹಗರಣಗಳು ಇರುತ್ತವೆ ಅದು ಹೊರಗೆ ಬರುತ್ತವೆ ಎನ್ನುವ ಯೋಚನೆ ಇರುತ್ತದೆ. ಒಂದು ಪಕ್ಷದಲ್ಲಿ ಇದ್ದ ಮೇಲೆ ಹೊಂದಾಣಿಕೆ ಇರಬೇಕು. ಚುನಾವಣೆಗೆ ನನ್ನನ್ನು ಕರೆದಿಲ್ಲ ಎನ್ನುತ್ತಾರೆ. ಆದರೆ ಯಾರನ್ನು ಯಾಕೆ ಕರೆಯಬೇಕು. ಪಕ್ಷ ಟಿಕೆಟ್ ಕೊಟ್ಟಿದೆ, ಅಪ್ಪ ಮಗ ಇಬ್ಬರೂ ಗೆದ್ದಿದ್ದಾರೆ. ಚುನಾವಣೆಯಲ್ಲಿ ತೊಡಗಿಸಿಕೊಳ್ಳಬೇಕಾಗಿತ್ತು ಅಲ್ಲವೆ ಎಂದು ಶಾಸಕ ಎ ಮಂಜು ಅಸಮಾಧಾನ ವ್ಯಕ್ತಪಡಿಸಿದರು.
ಸೋತ ನೆಲದಲ್ಲೇ ಗೆಲ್ತೇನೆ, ಅಲ್ಲಿವರೆಗೆ ಸುಮ್ಮನೆ ಕೂರೊಲ್ಲ: ನಿಖಿಲ್ ಕುಮಾರಸ್ವಾಮಿ ಶಪಥ!
ಹಾಸನದಲ್ಲಿ ಎಚ್ ಡಿಡಿ, ಎಚ್ ಡಿಕೆ ಅಹಂಕಾರ ಮುರಿಯಲು ಕಾಂಗ್ರೆಸ್ ಸ್ವಾಭಿಮಾನಿ ಸಮಾವೇಶ ಮಾಡುತ್ತಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯನವರು ರಾಜಕಾರಣದಲ್ಲಿ ಬೆಳೆಯಲು ದೇವೇಗೌಡರು ಕಾರಣ ಅಲ್ಲವೆ.? ಯಾಕೆ ಅವರ ಅಹಂಕಾರವನ್ನು ಮುರಿಯಬೇಕು ಎಂದು ಶಾಸಕ ಎ. ಮಂಜು ಪ್ರಶ್ನಿಸಿದ್ದಾರೆ.
ರಾಜಕಾರಣದಲ್ಲಿ ಯಾರು ಯಾರಿಗೂ ಶಾಶ್ವತ ಮಿತ್ರರೂ ಅಲ್ಲ ಶತ್ರುಗಳು ಅಲ್ಲ. ಮೋದಿಯವರ ಬಗ್ಗೆ ಸಿದ್ದರಾಮಯ್ಯ 52 ಇಂಚಿನ ಎದೆ ಅಂತ ಹೇಳುತ್ತಿದ್ದರು. ನೀವು ಮಾತನಾಡುವುದು ಈಗ ನಿಂತು ಹೋಗಿಲ್ವಾ?. ಯಾವತ್ತೋ ಒಂದು ದಿನ ಸಿದ್ದರಾಮಯ್ಯ ಅವರು ಮಾತನಾಡುವುದು ನಿಂತು ಹೋಗುತ್ತದೆ. ಅಷ್ಟಕ್ಕೂ ಇದು ಅವರ ಪಕ್ಷದ ಕಾರ್ಯಕ್ರಮವಾಗಿದ್ದು, ಅದನ್ನು ಮಾಡುವುದು ಬೇಡ ಅಂತ ಹೇಳುವುದಕ್ಕೆ ನಾವ್ಯಾರು. ಪಾರ್ಟಿಯಿಂದ ಮಾಡ್ತಾರೋ, ಇಲ್ಲ ಸಿದ್ದರಾಮಯ್ಯನವರ ಸ್ವಂತದ್ದು ಅಂತ ಮಾಡ್ತಾರೋ ನೋಡೋಣ. ಅದು ಮೊದಲು ಗೊತ್ತಾಗಬೇಕಲ್ವಾ ಅದು ಇನ್ನು ತೀರ್ಮಾನ ಅಗಿಲ್ವಲ್ಲ ಎಂದಿದ್ದಾರೆ.
ಅನ್ಯಕೋಮಿನ ಬಗ್ಗೆ ಆ ರೀತಿ ಮಾತಾಡೋದು ತಪ್ಪು, ಚಂದ್ರಶೇಖರ್ ಸ್ವಾಮೀಜಿ ಹೇಳಿಕೆ ಖಂಡಿಸಿದ ಡಿಸಿಎಂ
ಚುನಾವಣೆಯಲ್ಲಿ ಒಬ್ಬರ ಪರ ಮಾತನಾಡುವುದು, ವಿರುದ್ಧ ಮಾತನಾಡುವುದು ಸಹಜ ಅಲ್ಲವೆ?. ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಗೆದ್ದಿದ್ದೇವೆ ಅಂತ ಬೀಗುವುದು ಒಳ್ಳೆಯದಲ್ಲ. ಉಪಚುನಾವಣೆಗಳು ಸರ್ಕಾರದ ಪರ ಇರುವುದು ಸಹಜ. ಚುನಾವಣೆ ಗೆದ್ದ ತಕ್ಷಣ ಹೀಗೆ ಮಾತನಾಡುವುದು ಸರಿಯಲ್ಲ ಎಂದು ಮಡಿಕೇರಿಯಲ್ಲಿ ಅರಕಲಗೂಡು ಶಾಸಕ ಎ ಮಂಜು ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದಾರೆ.